Saturday, August 2, 2025
Google search engine

Homeಸ್ಥಳೀಯಸಮಾಜದ ಅಭಿವೃದ್ಧಿಗೆ ಸಂಘಟನೆ ಅವಶ್ಯಕ : ರಘುನಾಥ್

ಸಮಾಜದ ಅಭಿವೃದ್ಧಿಗೆ ಸಂಘಟನೆ ಅವಶ್ಯಕ : ರಘುನಾಥ್

ಶಾಸಕ ಟಿ.ಎಸ್. ಶ್ರೀವತ್ಸರವರ ಕಚೇರಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ರಘುನಾಥ್ ಭೇಟಿ

ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷರಾಗಿ ರಘುನಾಥ್ ರವರು ಆಯ್ಕೆಯಾಗಿ ಪ್ರಥಮ ಬಾರಿಗೆ ಮೈಸೂರಿಗೆ ಆಗಮಿಸಿ ಅಗ್ರಹಾರದಲ್ಲಿರುವ ಶಾಸಕರಾದ ಟಿ.ಎಸ್ ಶೀವತ್ಸರವರ ಕಚೇರಿಗೆ ಭೇಟಿ ನೀಡಿ ಜಿಲ್ಲೆಯ ಪ್ರಮುಖ ವಿಪ್ರ ಮುಖಂಡರೊಂದಿಗೆ ಉಪಹಾರ ಸೇವಿಸಿದರು

ಈ ಸಂದರ್ಭದಲ್ಲಿ ಶಾಸಕ ಟಿ.ಎಸ್. ಶ್ರೀವತ್ಸರವರು ರಘುನಾಥ್ ರವರಿಗೆ ಅಭಿನಂದಿಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಸರ್ವೇ ಜನಃ ಸುಖಿನೋ ಭವಂತು ಎಂಬ ವಾಣಿಯಂತೆ ಬ್ರಾಹ್ಮಣರು ಸಮಸ್ತ ಜನರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ಸಂಘಟನೆಯಿಂದ ಯಾವುದೇ ಸಮಾಜದ ಅಭಿವೃದ್ಧಿ ಸಾಧ್ಯ, ಪ್ರಾಮಾಣಿಕವಾಗಿ ಸಂಘಟನೆಯಲ್ಲಿ ಕೆಲಸ ಮಾಡಿದರೆ ಜನ ಎತ್ತರದ ಸ್ಥಾನದಲ್ಲಿ ಕೂರಿಸುತ್ತಾರೆ ಎಂಬುದಕ್ಕೆ ನಾನು ಮತ್ತು ಶ್ರೀವತ್ಸರವರೇ ಉದಾಹರಣೆ. ಇಬ್ಬರೂ ಸಹ ಬಿಜೆಪಿಯಲ್ಲಿ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾಗಿ ಕೆಲಸ ಮಾಡಿದ್ದೆವು ಎಂದರು.

ನಂತರ ಮಾತನಾಡಿದ ಶಾಸಕ ಟಿ.ಎಸ್. ಶ್ರೀವತ್ಸರವರು ರಘುನಾಥ್ ರವರ ಬಹು ವರ್ಷಗಳ ಒಡನಾಟದ ಬಗ್ಗೆ ತಿಳಿಸಿದರು, ಬ್ರಾಹ್ಮಣ ಸಮುದಾಯ ಸರ್ವರಿಗೂ ಶುಭವನ್ನು ಬಯಸುವ ಸಮುದಾಯವಾಗಿದ್ದು ಸಮಾಜದ ಸರ್ವತೋನ್ಮುಖ ಅಭಿವೃದ್ಧಿಗೆ ಎಲ್ಲರೂ ಒಗಟ್ಟಿನಿಂದ ಹೋರಾಡಬೇಕು ಎಂದರು.

ಬಿಜೆಪಿ ಮುಖಂಡರಾದ ಮೈ.ವಿ ರವಿಶಂಕರ್, ನಗರಪಾಲಿಕೆ ಮಾಜಿ ಸದಸ್ಯರಾದ ಎಂ.ಡಿ ಪಾರ್ಥಸಾರಥಿ, ಮಾ.ವಿ ರಾಮಪ್ರಸಾದ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷರುಗಳಾದ ದಿಲೀಪ್ ರಾಜಶೇಖರ್, ರಥಯಾತ್ರೆ ಸುರೇಶ್, ಜಂಟಿ ಕಾರ್ಯದರ್ಶಿಗಳಾದ ಬಾಲಕೃಷ್ಣ, ಕಲ್ಕೆರೆ ನಾಗರಾಜ್, ಟಿ.ಎಸ್ ಅರುಣ್, ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಸಿಇಒ ಮುರುಳಿ, ವೀರರಾಘವಾಚಾರ್, ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ರಾಕೇಶ್ ಭಟ್, ಎಂ.ಎ ಮೋಹನ್, ಕೆ.ಎಂ. ನಿಶಾಂತ್, ಅಜಯ್ ಶಾಸ್ತ್ರಿ, ಮಂಜುನಾಥ್, ಟಿ.ಪಿ ಮಧುಸೂಧನ್, ಎಲ್ ಎಲ್ ಹೆಗಡೆ, ಸತೀಶ್ ಹಾಗೂ ವಿವಿಧ ಮೈಸೂರು ಜಿಲ್ಲೆಯ ಬ್ರಾಹ್ಮಣ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular