ಹನೂರು : ಹನೂರು ತಾಲೂಕು ಕ್ರಿಕೆಟ್ ಕ್ಲಭ್ (ರಿ) ವತಿಯಿಂದ ತಾಲ್ಲೂಕು ಪಂಚಾಯತ್ ಇಒ ಶ್ರೀನಿವಾಸ್ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಇಂದು ತಾಲ್ಲೂಕು ಪಂಚಾಯತ್ ಕಚೇರಿಯ ಸಭಾಂಗಣದಲ್ಲಿ ಹನೂರು ತಾಲ್ಲೂಕು ಕ್ರಿಕೆಟ್ ಕ್ಲಭ್ ವತಿಯಿಂದ ಸನ್ಮಾನವನ್ನು ಸ್ವೀಕರಿಸಿ ಬಳಿಕ ಮಾತನಾಡಿದ ಅವರು
ಹನೂರು ತಾಲ್ಲೂಕು ಕ್ರಿಕೆಟ್ ಕ್ಲಭ್ ನೊಂದಣಿಯಾದ ಕೆಲ ದಿನಗಳಲ್ಲಿ ಮಕ್ಕಳ ಕ್ರಿಕೆಟ್ ಬೇಸಿಗೆ ಶಿಬಿರ,ಸರ್ಕಾರಿ ನೌಕರರಿಗೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿರುವ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಕ್ರಿಕೆಟ್ ಪಟುಗಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದ್ದು,ಹನೂರು ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಈ ಕ್ಲಭ್ ಉತ್ತಮ ಗುರಿಯೊಂದಿಗೆ ಯಾವುದೇ ಅಡೆ ತಡೆ ಬಂದರೂ ಯಶಸ್ಸಿನ ಕಡೆ ಸಾಗಲಿ ಎಂದು ಈ ವೇಳೆ ಹಾರೈಸಿದರು.
ಈ ಸಂದರ್ಭದಲ್ಲಿ ಪಿಡಿಒ ಸುರೇಶ್, ಕ್ಲಬ್ ನ ಗೌರವಾಧ್ಯಕ್ಷ ಮನ್ಸೂರ್, ಅಧ್ಯಕ್ಷ ಅಭಿಲಾಷ್ , ಕ್ಲಭ್ ಸಲಹಾ ಸಮಿತಿಯ ಸದಸ್ಯ ಮಂಜೇಶ್ ಹಾಗೂ ಇನ್ನಿತರರು ಹಾಜರಿದ್ದರು.