Friday, April 11, 2025
Google search engine

HomeUncategorizedರಾಷ್ಟ್ರೀಯ‘ದಿ ಕೇರಳ ಸ್ಟೋರಿ’ ಚಿತ್ರ ಖರೀದಿಗೆ ಓಟಿಟಿ ನಕಾರ

‘ದಿ ಕೇರಳ ಸ್ಟೋರಿ’ ಚಿತ್ರ ಖರೀದಿಗೆ ಓಟಿಟಿ ನಕಾರ

ತಿರುವಂತನಪುರ: ದಿ ಕೇರಳ ಸ್ಟೋರಿ ಚಿತ್ರ ಒಟಿಟಿಯಲ್ಲಿ ತೆರೆ ಕಾಣುವುದು ಅಸಾಧ್ಯವಾಗಿದೆ. ನಮ್ಮ ಚಿತ್ರವನ್ನು ಒಟಿಟಿಯಲ್ಲಿ ಖರೀದಿಸಲು ಯಾರು ಮುಂದೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಚಿತ್ರದ ನಿರ್ದೇಶಕ ಸುದೀಪ್ರೋ ಸೇನ್ ಅವರು ನಮ ವಿರುದ್ಧ ಚಿತ್ರರಂಗದ ಒಂದು ವರ್ಗ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಮತಾಂತರದಂತಹ ಸೂಕ್ಷ್ಮ ಕಥಾಹಂದರ ಹೊಂದಿರುವ ನಮ್ಮ ಚಿತ್ರಕ್ಕೆ ಓಟಿಟಿ ಖರೀದಿದಾರರಿಗಾಗಿ ಹುಡುಕಾಟ ನಡೆಸುತ್ತಿದ್ದೇನೆ ಆದರೆ, ಇದುವರೆಗೂ ಯಾರು ಚಿತ್ರ ಖರೀದಿಗೆ ಆಸಕ್ತಿ ತೋರಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದೀಪೆಪ್ರೋ ಸೇನ್ ಅವರ ನಿರ್ದೇಶನದ ಕೇರಳ ಸ್ಟೋರಿ 2023 ರ ಅತಿದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಗಿದೆ. ಅದಾ ಶರ್ಮಾ-ನಟಿಸಿದ ಚಿತ್ರವು ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ಈ ಚಲನಚಿತ್ರವು ಧಾರ್ಮಿಕ ಮತಾಂತರಗಳು, ಐಸಿಸ್ ಮತ್ತು ಲವ್ ಜಿಹಾದ್‍ನ ನಂತಹ ಕಥಾ ಹಂದರ ಹೋದಿದೆ.

ವಾಸ್ತವವಾಗಿ, ಕೇರಳ ಸ್ಟೋರಿಯನ್ನು ಆರಂಭದಲ್ಲಿ ಪಶ್ಚಿಮ ಬಂಗಾಳದಲ್ಲಿ ನಿಷೇಧಿಸಲಾಯಿತು ಮತ್ತು ತಮಿಳುನಾಡಿನ ಅನೇಕ ಚಿತ್ರಮಂದಿರಗಳು ಅದನ್ನು ಬಿಡುಗಡೆ ಮಾಡಲು ನಿರಾಕರಿಸಲಾಗಿತ್ತು. ಇದೀಗ ಓಟಿಟಿಯಲ್ಲಿ ಚಿತ್ರ ಬಿಡುಗಡೆ ಮಾಡುವುದನ್ನು ಒಂದು ವರ್ಗ ತಡೆಹಿಡಿಯುವ ಪ್ರಯತ್ನದಲ್ಲಿದೆ ಎಂದು ಅವರು ಆರೋಪಿಸಿದ್ದಾರೆ.

RELATED ARTICLES
- Advertisment -
Google search engine

Most Popular