Friday, April 18, 2025
Google search engine

Homeರಾಜ್ಯಸುದ್ದಿಜಾಲನಮ್ಮ ಕುಟುಂಬಕ್ಕೆ ಸರ್ಕಾರಿ ಭೂಮಿಯ ಕಬಳಿಸುವ ಅವಶ್ಯಕತೆ ಇಲ್ಲ: ಹುಡಾಅಧ್ಯಕ್ಷ ಹೆಚ್.ಪಿ.ಅಮರ್ ನಾಥ್

ನಮ್ಮ ಕುಟುಂಬಕ್ಕೆ ಸರ್ಕಾರಿ ಭೂಮಿಯ ಕಬಳಿಸುವ ಅವಶ್ಯಕತೆ ಇಲ್ಲ: ಹುಡಾಅಧ್ಯಕ್ಷ ಹೆಚ್.ಪಿ.ಅಮರ್ ನಾಥ್

ಹುಣಸೂರು: ದೊಡ್ಡ ಹುಣಸೂರು ಸರ್ವೇ ನಂ 28 ರಲ್ಲಿ ನಗರಸಭೆ ವ್ಯಾಪ್ತಿಯಲ್ಲಿನ ೪ ಎಕರೆ ಸರ್ಕಾರಿ ಭೂಮಿಯನ್ನು ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ಹಾಗೂ ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಕಬಳಿಕೆ ಮಾಡಿದ್ದಾರೆಂದು ಆರೋಪಿಸಿರುವ ಎಂ.ಎಲ್.ಸಿ. ಎಚ್.ವಿಶ್ವನಾಥ್ ರವರ ಹೇಳಿಕೆ ಸತ್ಯಕ್ಕೆ ದೂರವಾದುದ್ದು ಎಂದು ಹುಡಾ ಅಧ್ಯಕ್ಷ ಹೆಚ್.ಪಿ.ಅಮರ್‌ನಾಥ್ ತಿಳಿಸಿದರು.

ನಗರದಲ್ಲಿ ಪತ್ರಕರ್ತರ ಸಂಘದ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಎಂ.ಎಲ್.ಸಿ. ಎಚ್. ವಿಶ್ವನಾಥ್ ರವರು ರಾಜ್ಯ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡವರು, ಅವರನ್ನು ಕಂಡರೆ ನಮ್ಮ ಕುಟುಂಬದಲ್ಲಿ ಅಪಾರವಾದ ಗೌರವವಿದೆ. ಆದರೆ ಅವರು ಸರಿಯಾದ ಮಾಹಿತಿ ತೆಗೆದುಕೊಳ್ಳದೆ ನಮ್ಮ
ಕುಟುಂಬದ ಮೇಲೆ ಆರೋಪ ಮಾಡಿರುವುದು ಸರಿಯಲ್ಲ, ನಮ್ಮ ಕುಟುಂಬ ನಮ್ಮ ತಂದೆಯವರ ಕಾಲದಿಂದಲೂ ಹುಣಸೂರಿನಲ್ಲಿ ರಾಜಕೀಯದಲ್ಲಿ ಭಾಗವಹಿಸಿದ ಬಂದಿದೆ. ಸುಮಾರು 60 ವರ್ಷಕ್ಕೂ ಹೆಚ್ಚು ರಾಜಕಾರಣದಲ್ಲಿ ಇದ್ದರೂ ಕೂಡ ಇಲ್ಲಿಯವರೆಗೆ ಯಾವುದೇ ಭೂಕಬಳಿಕೆ ಮಾಡಿಲ್ಲ. ಮಾಡುವ ಅವಶ್ಯಕತೆನೂ ನಮ್ಮ ಕುಟುಂಬಕ್ಕೆ ಬಂದಿಲ್ಲ ಎಂದರು.

2024ರ ಜೂನ್ ನಲ್ಲೇ ಕಾಫಿ ವರ್ಕ್ಸ್ ನವರು ಸರ್ವೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅದು ಸರ್ಕಾರದ್ದಾಗಿದ್ದರೆ ತೆಗೆದುಕೊಳ್ಳಲಿ. ಅದು ಬಿ ಖರಾಬು ಆಗಿದ್ದರೆ ನನ್ನ ಸಿಮ್ಮಿಂಗ್ ಪೂಲನ್ನೇ ಸರಕಾರಕ್ಕೆ ಕೊಟ್ಟು ಅದರ ಮೂಲಕನೇ ಇಲ್ಲಿನ ಮಕ್ಕಳಿಗೆ ಸ್ವಿಮಿಂಗ್ ತರಬೇತಿ ಸಿಗುವ ತರ ನೋಡಿಕೊಳ್ಳುತ್ತೇನೆ. ನಾನು ಬಾಡಿಗೆಗೆದಾರ ಅಷ್ಟೇ ಮಾಲೀಕನಲ್ಲ. ಕಾಫಿ ವರ್ಕ್ಸ್ ಮಂಡಳಿಯವನ್ನು ಈ ಬಗ್ಗೆ ಪ್ರಶ್ನಿಸಬೇಕಾದವರು ತೇಜೋವದೆ ಮಾಡುವ ಸಲುವಾಗಿ ತಮ್ಮ ಹಾಗೂ ಸಹೋದರ ಮಾಜಿ ಶಾಸಕ ಹೆಚ್.ಪಿ ಮಂಜುನಾಥ್ ವಿರುದ್ದ ಹೇಳಿಗೆ ನೀಡಿದ್ದಾರೆಂದು ತಿರುಗೇಟು ನೀಡಿದರು.

ಖರಾಬು ಭೂಮಿಯಲ್ಲಿ ಸ್ವಿಮಿಂಗ್ ಪೂಲ್ ನಿರ್ಮಿಸಿಲ್ಲ:

ಅನುಭವಿ ರಾಜಕಾರಣಿ ಎಚ್. ವಿಶ್ವನಾಥ್ ರವರು ರಾಹು- ಕೇತುಗಳ ಮಾತು ಕೇಳಿಕೊಂಡು ಸತ್ಯಾಸತ್ಯತೆಯನ್ನು ಪರಾಮರ್ಶಿಸದೆ ಯಾರದೋ ಮಾತು ಕೇಳಿ ನಮ್ಮ ಕುಟುಂಬದ ಮೇಲೆ ಆರೋಪ ಮಾಡುವುದು ಸರಿಯಲ್ಲ, ನನ್ನ ಉದ್ದಿಮೆಯನ್ನು ಎ ಹಾಗೂ ಬಿ ಖರಾಬ್ ನಲ್ಲಿ ಸ್ಥಾಪನೆ ಮಾಡಿಲ್ಲ ಬದಲಾಗಿ ನಾನು ಉದ್ಯಮ ನಿರ್ಮಾಣ ಮಾಡಿರುವುದು ಅಧಿಕೃತವಾಗಿ ಕಾಫಿ ಬೆಳೆಗಾರ ಸಂಘವೇ ತೋರಿಸಿದ ಜಾಗದಲ್ಲಿ ಹಾಗೂ ಸಂಘದ ಹೆಸರಿನಲ್ಲಿರುವ ಪಹಣಿಯಲ್ಲಿ ನಮೋದಾಗಿರುವಂತೆ, 3. ಎಕ್ಕರೆ ಜಾಗದ ಒಳಗೊಂಡಿದೆ. ಉಳಿದ 4.10 ಗುಂಟೆ ಜಮೀನು ನನ್ನ ಪಕ್ಕದು, ಎಂದರು

ನಾನು ಪಡೆದಿರುವಿದು ಬಾಡಿಗೆಗೆ ಕಬಳಿಕೆ ಹೇಗೆ:

ಎಂ.ಎಲ್.ಸಿ.ವಿಶ್ವನಾಥ್‌ರವರ ಬಗ್ಗೆ ಗೌರವವಿದೆ. ಅವರಿಗೆ ನಮ್ಮಿಂದಲೂ ರಾಜಕೀಯವಾಗಿ
ಸಹಾಯವಾಗಿದೆ, ಅವರು ಸಹ 2008ರಲ್ಲಿ ನಮಗೂ ನೆರವಾಗಿದ್ದಾರೆ. ಹಿರಿಯರಾಗಿರುವ ಅವರು ಎಲ್ಲ ದಾಖಲೆಗಳನ್ನು ಪರಾಮರ್ಶಿಸಬೇಕಿತ್ತು. ಆದರೆ ಹಿಂಬಾಲಕರ ಮಾತನ್ನು ನಂಬಿ ಮಾದ್ಯಮಗಳ ಮುಂದೆ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಉದ್ದಿಮೆ ನಡೆಸುತ್ತಿದ್ದಾರೆಂದು ಆರೋಪಿಸಿದ್ದಾರೆ. ಡಾ.ಪುಷ್ಪವತಿ ನನ್ನ ಪತ್ನಿ, ನಾನು ಭೂಮಿಯನ್ನು ಬಾಡಿಗೆಗೆ ಪಡೆದು ಈಜು ಕೊಳ ನಿರ್ಮಿಸಿದ್ದೇನೆ. ಇದರಲ್ಲಿ ಭೂಮಿ ಕಬಳಿಸುವ ಹುನ್ನಾರವೆಲ್ಲಿಂದ ಬಂತು. . ಯಾರದೋ ಮಾತು ಕೇಳಿ ದಾಖಲೆ ಪರಿಶೀಲಿಸದೆ ಇನ್ನೊಬ್ಬರ ಮೇಲೆ ಆರೋಪ ಮಾಡುವುದು ಅವರ ವಯಸ್ಸಿಗೆ ಹಾಗೂ ಅನುಭವಕ್ಕೆ ಶೋಭೆ ತರುವುದಿಲ್ಲವೆಂದರು.

ಮಂಜಣ್ಣ ಹುಣಸೂರಿನ ಸೇವಕನೆ ಹೊರತು ಮಾಲಿಕನಲ್ಲ:

ತಮ್ಮ ಪುತ್ರ ಬೇರೆಯವರ ಭೂಮಿಗೆ ಬೇಲಿ ಹಾಕಿದ ವೇಳೆ ಮಾದ್ಯಮದವರು ಪ್ರಶ್ನಿಸಿದಾಗ ನನಗೂ
ಅದಕ್ಕೂ ಸಂಬಂಧವಿಲ್ಲ, ಅವನು ಬೇರೆ ಇದ್ದಾನೆ ಎನ್ನುವವರು ಈಗ ನನ್ನ ವ್ಯವಹಾರಕ್ಕೂ ನನ್ನ ಅಣ್ಣ ಮಂಜುನಾಥರಿಗೂ ಸಂಬಂಧ, ಕಲ್ಪಿಸುವುದು ಯಾವ ನ್ಯಾಯ. ಮಂಜುನಾಥ್ ಈ ಊರಿನವನು ಈ ಊರಿನ ಸೇವಕನೆ ಹೊರತು ಮಾಲಿಕನಲ್ಲ. ಜನರ ಕಷ್ಟಗಳಿಗೆ ಸ್ಪಂದಿಸುವವನು ಮಾಲಿಕನಾಗುತ್ತಾನಾ ಎಂದು ಪ್ರಶ್ನಿಸಿದ ಅವರು ನನ್ನ ಸಹೋದರ ತಾಲ್ಲೂಕಿನ ಸರಳಜೀವಿಯಾಗಿ, ಸ್ನೇಹಿತನಾಗಿ, ಸೇವಕನ್ನಾಗಿ, ದುಡಿದ ಪರಿಣಾಮವೇ ಮೂರು ಬಾರಿ ಶಾಸಕರಾಗಿದ್ದಾರೆ. ಹಾಗೆ ತಾಲೂಕಿನ ಜನತೆಯ ಸಾವು, ನೋವುಗಳಿಗೆ ಸ್ಪಂದಿಸುತ್ತ ಜೊತೆಯಾಗಿದ್ದು, ಮುಂದೆಯೂ ಇರುತ್ತಾರೆ ಎಂದರು.

.

RELATED ARTICLES
- Advertisment -
Google search engine

Most Popular