Friday, April 11, 2025
Google search engine

HomeUncategorizedರಾಷ್ಟ್ರೀಯ2047ರ ವೇಳೆಗೆ ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿ ಮಾಡುವುದೇ ನಮ್ಮ ಗುರಿ: ನರೇಂದ್ರ ಮೋದಿ

2047ರ ವೇಳೆಗೆ ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿ ಮಾಡುವುದೇ ನಮ್ಮ ಗುರಿ: ನರೇಂದ್ರ ಮೋದಿ

2047ರ ಹೊತ್ತಿಗೆ 100ನೇ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಲಾಗುತ್ತದೆ, ಅಷ್ಟೊತ್ತಿಗೆ ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿ ಮಾಡುವುದೇ ನಮ್ಮ ಗುರಿ ಎಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಫ್ರಾನ್ಸ್​ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ. ಫ್ರೆಂಚ್ ಪತ್ರಿಕೆ ಲೆಸ್ ಎಕೋಸ್‌ ಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ಅವರು ಭಾರತ-ಫ್ರಾನ್ಸ್ ನಡುವಿನ 25 ವರ್ಷಗಳ ಕಾರ್ಯತಂತ್ರದ ಪಾಲುದಾರಿಕೆಯ ಬಗ್ಗೆ ಮಾತನಾಡಿದರು.

ಭಾರತವು ಪಾಶ್ಚಿಮಾತ್ಯ ಜಗತ್ತು ಹಾಗೂ ವಿಶ್ವದ ದಕ್ಷಿಣ ಭಾಗಕ್ಕೆ ಒಂದು ಸೇತುವೆಯಾಗಿ ಕೆಲಸ ಮಾಡುವ ಕ್ಷಮತೆಯನ್ನು ಹೊಂದಿದೆ. ಭಾರತವು ಈಗ ವಿಶ್ವದ ಐದನೇ ಅತಿತೊಡ್ಡ ಆರ್ಥಿಕತೆಯಾಗಿದೆ, ಹಾಗೂ ಮೂರನೇ ಅತಿದೊಡ್ಡ ಆರ್ಥಿಕತೆಯ ಹಾದಿಯಲ್ಲಿದೆ ಎಂದರು.

ಭಾರತವು ಸಾವಿರಾರು ವರ್ಷಗಳಷ್ಟು ಹಳೆಯದಾದ ಶ್ರೀಮಂತ ನಾಗರಿಕತೆಯಾಗಿದೆ. ಇಂದು ಭಾರತವು ವಿಶ್ವದಲ್ಲೇ ಅತ್ಯಂತ ಯುವ ರಾಷ್ಟ್ರವಾಗಿದೆ. ಭಾರತದ ಪ್ರಬಲ ಆಸ್ತಿ ನಮ್ಮ ಯುವಕರು. ವಿಶ್ವದ ಅನೇಕ ದೇಶಗಳು ವಯಸ್ಸಾಗುತ್ತಿರುವಾಗ ಮತ್ತು ಅವರ ಜನಸಂಖ್ಯೆಯು ಕುಗ್ಗುತ್ತಿರುವ ಸಮಯದಲ್ಲಿ, ಭಾರತದ ಯುವ ಮತ್ತು ನುರಿತ ಉದ್ಯೋಗಿಗಳು ಮುಂದಿನ ದಶಕಗಳಲ್ಲಿ ಜಗತ್ತಿಗೆ ಆಸ್ತಿಯಾಗುತ್ತಾರೆ ಎಂದಿದ್ದಾರೆ.

ನಾವು ಈಗ ಒಂದು ತಿರುವು ಪಡೆಯುತ್ತಿದ್ದೇವೆ, ನಾವು ಸಾಂಕ್ರಾಮಿಕ ನಂತರದ ಜಾಗತಿಕ ಕ್ರಮವನ್ನು ಮತ್ತು ಅದು ತೆಗೆದುಕೊಳ್ಳುತ್ತಿರುವ ಆಕಾರವನ್ನು ನೋಡಿದರೆ, ನಮ್ಮ ಕಾರ್ಯತಂತ್ರದ ಪಾಲುದಾರಿಕೆಯ ಸಕಾರಾತ್ಮಕ ಅನುಭವವು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಮೂರು ದಿನಗಳ ವಿದೇಶ ಪ್ರವಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ಗುರುವಾರ (ಜುಲೈ 13) ತೆರಳಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಫ್ರಾನ್ಸ್ ಮತ್ತು ಯುಎಇಗೆ ಒಂದು ದಿನ ಭೇಟಿ ನೀಡಲಿದ್ದಾರೆ. ಫ್ರಾನ್ಸ್‌ ಗೆ ತೆರಳುವ ಮುನ್ನ ಪ್ರಧಾನಿ ಮೋದಿ ಅವರು ತಮ್ಮ ಫ್ರಾನ್ಸ್ ಭೇಟಿಯ ಕುರಿತು ಹೇಳಿಕೆ ನೀಡಿ ಮಾಹಿತಿ ಹಂಚಿಕೊಂಡರು.

ನನ್ನ ಸ್ನೇಹಿತ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ನಾನು ಜುಲೈ 13-14 ರವರೆಗೆ ಫ್ರಾನ್ಸ್‌ಗೆ ಅಧಿಕೃತ ಭೇಟಿ ನೀಡುತ್ತಿದ್ದೇನೆ . ಈ ಭೇಟಿ ವಿಶೇಷವಾಗಿದೆ ಏಕೆಂದರೆ ನಾನು ಫ್ರೆಂಚ್ ರಾಷ್ಟ್ರೀಯ ದಿನ ಅಥವಾ ಬಾಸ್ಟಿಲ್ ಡೇ ಆಚರಣೆಗಳಲ್ಲಿ ವಿಶೇಕ್ಷ ಅತಿಥಿಯಾಗಿ ಭಾಗವಹಿಸಲಿದ್ದೇನೆ ಎಂದಿದ್ದಾರೆ.

ನಮ್ಮ ಎರಡು ದೇಶಗಳು ವ್ಯಾಪಾರ, ಹೂಡಿಕೆ, ಇಂಧನ, ಆಹಾರ ಭದ್ರತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ, ಫಿನ್‌ಟೆಕ್, ರಕ್ಷಣೆ, ಭದ್ರತೆಗಳಂತಹ ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ಸಂಪರ್ಕ ಹೊಂದಿವೆ ಎಂದು ಪ್ರಧಾನಿ ಮೋದಿ ಹೇಳಿದರು.

RELATED ARTICLES
- Advertisment -
Google search engine

Most Popular