ಮಂಡ್ಯ: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿರುವ ನಟ ದರ್ಶನ್ ಬಿಡುಗಡೆಗೆ ಯಾವ ಸಚಿವರು ಒತ್ತಡ ಹಾಕಿಲ್ಲ. ಯಾವುದೇ ಒತ್ತಡಕ್ಕೂ ನಮ್ಮ ಸರ್ಕಾರ ಹಾಗೂ ಸಿಎಂ ಮಣಿಯಲ್ಲ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣ ಎಸ್‌ಪಿಪಿ ಬದಲಾವಣೆ ಮಾಡಿದ್ರೆ ತಪ್ಪೇನು ಎಂಬ ಗೃಹ ಸಚಿವರ ಹೇಳಿಕೆ ವಿಚಾರ ಮಾತನಾಡಿ ಸಚಿವಾಲಯ, ಸಿಎಂ ರಿವ್ಯೂಹ್ ಮಾಡಿ ಡಿಸಿಷನ್ ತೆಗೆದುಕೊಳ್ಳಬೇಕಾಗುತ್ತೆ. ಬದಲಾವಣೆ ಮಾಡಿದ್ರೆ ಸಿಎಂ ಅಥವಾ ಗೃಹ ಸಚಿವರಿಗೆ ವರದಿ ಸಿಗುತ್ತೆ.ಮಾಹಿತಿ ಇಲ್ಲದೇ ನಾನು ರಿಯಾಕ್ಟ್ ಮಾಡೋದು ಸೂಕ್ತವಲ್ಲ. ಬದಲಾವಣೆ ಎಂಬುದು ಬಹುಶಃ ಇದು ಚರ್ಚೆಯಲ್ಲಿರುವ ವಿಷಯ. ಬದಲಾವಣೆ ಮಾಡಿದ್ರೆ ತಪ್ಪೇನು ಎಂದು ಹೇಳಿದ್ದಾರೆ. ಆದ್ರೆ ಬದಲಾವಣೆ ಮಾಡ್ತೀವಿ ಎಂದಿಲ್ಲ.
ಪ್ರಕರಣದ ತನಿಖೆ ದಾರಿ ತಪ್ಪು ಕೆಲಸವನ್ನ ಯಾವುದೇ ಸರ್ಕಾರ ಮಾಡಲ್ಲ. ಪ್ರಕರಣದ ಆರೋಪಿ ದರ್ಶನ್ ರಕ್ಷಣೆಗೆ ಸಚಿವರ ಯತ್ನ ಆರೋಪ ವಿಚಾರ ಮಾತನಾಡಿ ನನಗೆ ತಿಳಿದಿರುವಂತೆ ಯಾವ ಮಂತ್ರಿಯೂ ಪ್ರಕರಣದಲ್ಲಿ ಇನ್ವಾಲ್ ಆಗಿಲ್ಲ. ನೀವೇ ನಾಲ್ಕು ದಿವಸ ನೋಡಿ ರೈಟ್ ಟ್ರ್ಯಾಕ್ ನಲ್ಲಿ ಪ್ರಕರಣದ ತನಿಖೆ ಹೋಗುತ್ತೆ. ನಾಳೆ ಕ್ಯಾಬಿನೇಟ್ ಸಭೆ ಇದೆ.ಬಳಿಕ ಅದರ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.