Saturday, April 19, 2025
Google search engine

Homeರಾಜಕೀಯಈಶ್ವರಪ್ಪ ಮನವೊಲಿಸುವಲ್ಲಿ ನಮ್ಮ ನಾಯಕರು ಯಶಸ್ವಿಯಾಗ್ತಾರೆ: ಬಸವರಾಜ ಬೊಮ್ಮಾಯಿ

ಈಶ್ವರಪ್ಪ ಮನವೊಲಿಸುವಲ್ಲಿ ನಮ್ಮ ನಾಯಕರು ಯಶಸ್ವಿಯಾಗ್ತಾರೆ: ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಬಿಜೆಪಿಯಿಂದ ಬಂಡಾಯ ಎದ್ದಿರುವ ಕೆ.ಎಸ್.ಈಶ್ವರಪ್ಪ ಅವರನ್ನು ಸಮಾಧಾನ ಮಾಡಲು ನಮ್ಮ ನಾಯಕರು ಯಶಸ್ವಿಯಾಗ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.‌

ಶುಕ್ರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಈಶ್ವರಪ್ಪ ಮನವೊಲಿಸೋ ವಿಶ್ವಾಸ ಇದೆ. ಸಂಬಂಧ ಬಹಳ ಮುಖ್ಯ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಅನ್ನೋದು ಅವರ ಬಯಕೆ ಇದೆ. ಹೀಗಾಗಿ ಈಶ್ವರಪ್ಪ ಮನವೊಲಿಕೆಗೆ ನಮ್ಮ ಹೈಕಮಾಂಡ್ ಯಶಸ್ವಿ ಯಾಗತ್ತೆ. ಕರಡಿ ಸಂಗಣ್ಣ, ಪ್ರತಾಪ್ ಸಿಂಹ, ಸದಾನಂದಗೌಡ ಜೊತೆ ಮಾತುಕತೆ ಮಾಡಲಾಗುತ್ತಿದೆ. ಇವರೆಲ್ಲ ಪಕ್ಷ ಕಟ್ಟಿದವರು, ಹೀಗಾಗಿ ನಮ್ಮ ಜತೆಯಲ್ಲಿ ಇರುತ್ತಾರೆ. ಚುನಾವಣೆ ಸಂದರ್ಭದಲ್ಲಿ ನೋವಾಗೋದು ಸಹಜ ಎಂದರು.

ಮೇಕೆದಾಟು ಪಾದಯಾತ್ರೆ ಕಾಂಗ್ರೆಸ್ ರಾಜಕೀಯ ನಾಟಕದ ಒಂದು ಭಾಗ. ಮತಗಳಿಗಾಗಿ ಪಾದಯಾತ್ರೆ ಮಾಡಿದ್ದರು. ‌ಇವರಿಗೆ ಯೋಜ‌ನೆ ಬಗ್ಗೆ ಕಾಳಜಿ ಇಲ್ಲ,ಆ ಭಾಗದ ಜನರಿಗೆ ಮೂಗಿಗೆ ತುಪ್ಪ ಹಚ್ಚಿದ್ದಾರೆ.‌ಕೋರ್ಟ್ ನಲ್ಲಿ ಇದೆ ಅಂದರು, ಸಿದ್ದರಾಮಯ್ಯ ಇಲ್ಲ ಅಂದರು. ಕಾಂಗ್ರೆಸ್ ಗೆ ನಿಜವಾದ ಕಾಳಜಿ ಇದ್ದರೆ ಇಂಡಿಯಾ ಒಕ್ಕೂಟದಿಂದ ಹೊರ ಬರಬೇಕು. ಕಾಂಗ್ರೆಸ್ ಮೇಕೆದಾಟು ಯೋಜನೆ ಬಗ್ಗೆ ನಿಲುವು ಸ್ಪಷ್ಟ ಪಡಿಸಬೇಕು ಎಂದರು.

ಲೋಕಸಭೆಗೆ ಕಾಂಗ್ರೆಸ್ ನಲ್ಲಿ ಸ್ಪರ್ದೆ ಮಾಡಲು ಅಭ್ಯರ್ಥಿ ಸಿಗಲಿಲ್ಲ.‌ ಮಂತ್ರಿಗಳು ಕೂಡಾ ಚುನಾವಣೆಗೆ ನಿಲ್ಲಲಿಲ್ಲ. ಇದೀಗ ಅವರ ಮನೆಯಲ್ಲಿ ಟಿಕೆಟ್ ಕೊಡೋ ಸ್ಥಿತಿ ಬಂದಿದೆ.ಜಗದೀಶ್ ಶೆಟ್ಟರ್ ಗೆ ಇನ್ನೆರಡು ದಿನದಲ್ಲಿ ಟಿಕೆಟ್ ಫೈನಲ್ ಆಗಬಹುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

RELATED ARTICLES
- Advertisment -
Google search engine

Most Popular