Saturday, April 19, 2025
Google search engine

Homeಸ್ಥಳೀಯಖಾಸಗಿ ಸೆಂಟರ್ ಗಳಿಗೆ ಸ್ಕ್ಯಾನಿಂಗ್ ಗೆ ಬರೆದು ಕೊಡುವ ವೈದ್ಯರ ವಿರುದ್ಧ ಆಕ್ರೋಶ

ಖಾಸಗಿ ಸೆಂಟರ್ ಗಳಿಗೆ ಸ್ಕ್ಯಾನಿಂಗ್ ಗೆ ಬರೆದು ಕೊಡುವ ವೈದ್ಯರ ವಿರುದ್ಧ ಆಕ್ರೋಶ

ಗುಂಡ್ಲುಪೇಟೆ: ಸ್ಕ್ಯಾನಿಂಗ್ ಮಾಡಲು ಸಿಬ್ಬಂದಿಯಿಲ್ಲ ಎಂಬ ಸಬೂಬು ಹೇಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಅವಕಾಶವಿದ್ದರೂ ಕೂಡ ಖಾಸಗಿ ಸೆಂಟರ್‍ಗಳಿಗೆ ವೈದ್ಯರು ಬರೆದು ಕೊಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮುಖಂಡರು ಆಕ್ರೋಶ ಹೊರಹಾಕಿದರು.

ಪಟ್ಟಣದ ತಾಲೂಕು ಕಚೇರಿ ಸಭಾ ಭವನದಲ್ಲಿ ತಹಸೀಲ್ದಾರ್ ಶ್ರೀಶೈಲ ಯಮನಪ್ಪ ತಳವಾರ್ ಅಧ್ಯಕ್ಷತೆಯಲ್ಲಿ ನಡೆದ ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ, ಸ್ಕ್ಯಾನಿಂಗ್ ಸಿಬ್ಬಂದಿ ನೇಮಕಕ್ಕೆ ಸರ್ಕಾರಕ್ಕೆ ರಿಪೆÇೀರ್ಟ್ ಹಾಕಿದ್ದೀವಿ ಎಂದು ಹಲವು ವರ್ಷಗಲಿಂದಲೂ ಹೇಳುತ್ತಿದ್ದಾರೆ. ಆದರೆ ಸಿಬ್ಬಂದಿ ಮಾತ್ರ ಬಂದಿಲ್ಲ ಎಂದು ತಾಲೂಕು ಆರೋಗದ್ಯಾಧಿಕಾರಿ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು.

ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಪ್ರತಿಯೊಂದಕ್ಕು ಶಸ್ತ್ರ ಚಿಕಿತ್ಸೆ ಎನ್ನುತ್ತಿದ್ದಾರೆ. ಜೊತೆಗೆ ಸಾಮಾನ್ಯ ಪ್ರಕರಣಗಳನ್ನು ಚಾಮರಾಜನಗರ ಜಿಲ್ಲಾಸ್ಪತ್ರೆ ಮತ್ತು ಮೈಸೂರಿಗೆ ರವಾನಿಸುತ್ತಿದ್ದಾರೆ. ಅಲ್ಲಿನ ಆಸ್ಪತ್ರೆಗಳಲ್ಲಿ ಸಾಮಾನ್ಯ ಹೆರಿಗೆ ಆಗುತ್ತದೆ. ಆದರೆ ಇಲ್ಲಿ ಶಸ್ತ್ರಚಿಕಿತ್ಸೆ ಎನ್ನುತ್ತಾರೆ. ಜೊತೆಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿಲ್ಲ. ವೈದ್ಯರು ಹಾಗೂ ಸಿಬ್ಬಂದಿ ವರ್ಗದವರ ಸ್ಪಂದನೆಯೂ ಸಹ ಉತ್ತಮ ರೀತಿಯಲ್ಲಿಲ್ಲ. ಈ ಬಗ್ಗೆ ಕ್ರಮ ವಹಿಸಬೇಕು ಎಂದು ಹಂಗಳ ಅವಿನಾಶ್ ಒತ್ತಾಯಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಕಿಲಗೆರೆ ಬಸವಣ್ಣ ಆರೋಪಿಸಿದರು.

ಗುಂಡ್ಲುಪೇಟೆ ತಾಲೂಕಿನ ಮುದ್ರಾ ಯೋಜನೆಯಡಿ 13.202 ಮಂದಿ ಸಾಲ ನೀಡಲಾಗಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ತಿಳಿಸಿದರು. ಈ ವೇಳೆ ಮುಖಂಡರು ಮಾತನಾಡಿ, ವಿವಿಧ ನಿಗಮ ಹಾಗೂ ಯೋಜನೆಯಡಿ ಲೋನ್ ಪಡೆದ ಎಸ್ಸಿ, ಎಸ್ಟಿ ಫಲಾನುಭವಿಗಳಿಗೆ ಸಿಬಿಲ್ ನೆಪ ಹೇಳಿ ಸಾಲ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಿ ಸಾಲ ಪಡೆಯಲು ಸರಳ ವಿಧಾನ ಮಾಡಬೇಕು ಎಂದು ಒತ್ತಾಯಿಸಿದರು.

ಕೃಷಿ ಇಲಾಖೆಯಲ್ಲಿ 13 ವರ್ಷದಿಂದ ಕೃಷಿಕ ಸಮಾಜದ ಅಧ್ಯಕ್ಷ ಒಬ್ಬರೇ ಆಗಿದ್ದಾರೆ. ಬದಲಾವಣೆಗೆ ಪ್ರಕರಣ ಕೋರ್ಟ್‍ನಲ್ಲಿದೆ ಎನುತ್ತಾರೆ. ಈ ಬಗ್ಗೆ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಶೀಘ್ರವಾಹಿ ಅಧ್ಯಕ್ಷರ ನೇಮಕಕ್ಕೆ ಕ್ರಮ ವಹಿಸಬೇಕು ಎಂದು ಮುತ್ತಣ್ಣ ಆಗ್ರಹಿಸಿದರು.

ಪಟ್ಟಣ ವ್ಯಾಪ್ತಿಯ ಸ್ಮಶಾನಕ್ಕೆ ಮೂಲಭೂತ ಸೌಕರ್ಯ ಹಾಗೂ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾದ ಮೇಲೆ ಕ್ರಿಯಾ ಯೋಜನೆ ರೂಪಿಸಿ ಮೂಲ ಸೌಕರ್ಯ ನೀಡಲಾಗುವುದು ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ ತಿಳಿಸಿದರು. ಪುರಸಭೆ ಸದಸ್ಯ ಎನ್.ಕುಮಾರ್ ಮಾತನಾಡಿ, ಎಸ್ಸಿ, ಎಸ್ಟಿ ಸಂಬಂಧಿತ ಸ್ಮಶಾನ ಸಮಸ್ಯೆಯನ್ನು ಈ ಬಾರಿ ಅನುದಾನ ಬಂದ ಕೂಡಲೇ ಮೀಸಲಿರಿಸಿ ಬಗೆಹರಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಪುರಸಭೆ ವ್ಯಾಪ್ತಿಯಲ್ಲಿ 15-20 ವರ್ಷದಿಂದ ಮಳಿಗೆಗಳು ಹರಾಜಾಗದೆ ಒಬ್ಬರ ಹೆಸರಿನಲ್ಲಿಯೇ ಇದೆ. ಆದ್ದರಿಂದ ಮರು ಟೆಂಡರ್ ಮಾಡಿ ಹೊಸದಾಗಿ ಮಳಿಗೆ ಹರಾಜು ಮಾಡಬೇಕು ನಾಗೇಂದ್ರ ಒತ್ತಾಯಿಸಿದರು.

ಹಂಗಳ ಗ್ರಾಮ ಹೋಬಳಿ ಕೇಂದ್ರವಾಗಿರುವ ಹಿನ್ನೆಲೆ ಉಪ ಪೊಲೀಸ್ ಠಾಣೆ ತೆರೆಯಬೇಕು. ಗ್ರಾಮದಲ್ಲಿ ಕುಡಿಕರ ಹಾವಳಿ ಹೆಚ್ಚಿದ್ದು, ಇದಕ್ಕೆ ಕಡಿವಾಣ ಹಾಕುವ ಜೊತೆಗೆ ಗ್ರಾಮಕ್ಕೆ ಒಬ್ಬ ಪೆÇಲೀಸ್ ಪೇದೆಯನ್ನು ನೇಮಿಸಿ ಅಥವಾ ಬೀಟ್ ಪೆÇಲೀಸರನ್ನು ಹಾಕಬೇಕು ಎಂದು ವೃಷಬೇಂದ್ರ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಇನ್ಸ್ ಪೆಕ್ಟರ್ ಮುದ್ದುರಾಜು ಗ್ರಾಮಕ್ಕೆ ಪ್ರತ್ಯೇಕವಾಗಿ ಪೆÇಲೀಸ್ ಹೋಗುವಂತೆ ಮಾಡಲಾಗುವುದು ಎಂದರು.

ಪಟ್ಟಣ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ಹೆಚ್ಚಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ವಿವಿಧ ವಾರ್ಡ್‍ಗಳಲ್ಲಿ ಪೊಲೀಸರು ರೌಂಡ್ ನಡೆಸಿ ಪುಂಡ-ಫೆÇೀಕರಿಗಳ ಸಂಖ್ಯೆ ಕಡಿಮೆ ಮಾಡಬೇಕು. ಜೊತೆಗೆ ಸೂರ್ಯ ಬೇಕರಿ, ಕರ್ನಾಟಕ ಬ್ಯಾಂಕ್ ಹತ್ತಿರ ಟ್ರಾಫಿಕ್ ತೊಂದರೆ ಸಮಸ್ಯೆ ಹೆಚ್ಚಿನ ರೀತಿಯಲ್ಲಿದ್ದು, ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಠಾಣೆಯಲ್ಲಿ ನಡೆಯುವ ಎಸ್ಸಿ-ಎಸ್ಟಿ ಸಭೆಗೆ ಎಲ್ಲಾ ಮುಖಂಡರನ್ನು ಆಹ್ವಾನಿಸಬೇಕು ಎಂದು ಒತ್ತಾಯಿಸಿದರು.

ವಿವಿಧ ಇಲಾಖೆ ಅಧಿಕಾರಿಗಳು ಕಳೆದ ಸಭೆಯಲ್ಲಿ ಚರ್ಚೆಗೆ ಒಳಗಾದ ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಅಥವಾ ಸಮಸ್ಯೆ ಯಾವ ಹಂತದಲ್ಲಿದೆ ಎಂಬುದರ ಸೂಕ್ತ ಮಾಹಿತಿ ಸಮೇತ ಸಭೆಗೆ ಆಗಮಿಸಬೇಕು. ಕೇಲವ ನೆಪಮಾತ್ರಕ್ಕೆ ಬೇಜವಾಬ್ದಾರಿಯ ಉತ್ತರ ನೀಡಬಾರದು ಎಮದು ಆರ್.ಸೋಮಣ್ಣ ಮನವಿ ಮಾಡಿದರು. ಮೂರು ತಿಂಳಾದರು ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆ ನಡೆಯುತ್ತಿಲ್ಲ. ಪ್ರತಿ ಬಾರಿಯೂ ಆರು ತಿಂಗಳು ಅಥವಾ ವರ್ಷ ಆಗುತ್ತಿದೆ. ಇದಕ್ಕೆ ಅಧಿಕಾರಿಗಳ ನ್ಯೂನ್ಯತೆ ಕಾರಣ. ಮುಂದಿನ ದಿನಗಳಲ್ಲಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸುವಂತೆ ಮುತ್ತಣ್ಣ ಒತ್ತಾಯಿಸಿದರು.

ಸಭೆ ಆರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ನಂಜುಂಡೇಗೌಡ, ಕಳೆದ ಸಭೆಯ ಅನುಪಾಲನಾ ವರದಿ ಮಂಡಿಸಿದರು.

ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿ ಸಭಾ ಭವನದಲ್ಲಿ ನಡೆದ ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಹಾಜರಿದ್ದ ಮುಖಂಡರು.

ತಹಸೀಲ್ದಾರ್ ಶ್ರೀಶೈಲ ಯಮನಪ್ಪ ತಳವಾರ್, ಪೆÇಲೀಸ್ ಇನ್ಸ್ ಪೆಕ್ಟರ್ ಮುದ್ದುರಾಜು, ಸರ್ಕಲ್ ಇನ್ಸ್ ಪೆಕ್ಟರ್ ಕಿರಣ್ ಕುಮಾರ್, ತಾಪಂ ಇಓ ಶ್ರೀಕಂಠರಾಜೇ ಅರಸು, ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕ ನಂಜುಂಡೇಗೌಡ, ನಾಮ ನಿರ್ದೇಶಿತ ಸದಸ್ಯರಾದ
ಬೆಟ್ಟಹಳ್ಳಿ ಕೆಂಪರಾಜು, ಬಂಗಾರನಾಯಕ, ಶ್ರೀನಿವಾಸ್, ಜಿಲ್ಲಾ ಜಾಗೃತಿ ಸಮಿತಿ ಸಿದ್ದರಾಜು, ಪುರಸಭೆ ಸದಸ್ಯ ಅಣ್ಣಯ್ಯಸ್ವಾಮಿ, ಶ್ರೀನಿವಾಸ್ ಕಣ್ಣಪ್ಪ, ರಾಜಗೋಪಾಲ್, ಎನ್.ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಗಿರೀದಾಸ್, ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

  • ಎಸ್ಟಿ ಮುಖಂಡರಿಗೆ ಸಭೆಗೆ ಆಹ್ವಾನ ನೀಡದ್ದಕ್ಕೆ ಆಕ್ರೋಶ
  • ಗುಂಡ್ಲುಪೇಟೆ: ಪಟ್ಟಣದ ತಾಲೂಕು ಕಚೇರಿ ಸಭಾ ಭವನದಲ್ಲಿ ನಡೆಯುವ ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಗೆ ಎಸ್ಟಿ ಸಮುದಾಯದ ಮುಖಂಡರು ಹಾಗು ವಿವಿಧ ಸಂಘಟನೆಗಳಿಗೆ ಆಹ್ವಾನ ನೀಡಿಲ್ಲ ಎಂದು ಎಸ್ಟಿ ಸಮಾಜದ ಮುಖಂಡರು ಸಭೆ ಆರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ವಿರುದ್ಧ ಆಕ್ರೋಶ ಹೊರಹಾಕಿದರು.
  • ಎಸ್ಟಿ ಸಮುದಾಯದ ಮುಖಂಡ ಹಾಗೂ ಕರವೇ ತಾಲೂಕು ಅಧ್ಯಕ್ಷ ಸುರೇಶನಾಯಕ ಮಾತನಾಡಿ, ಆಹ್ವಾನ ಪತ್ರಿಕೆಯನ್ನು ವಿವಿಧ ಸಂಘಟನೆ ಹಾಗೂ ಎಸ್ಟಿ ಸಮುದಾಯದ ಮುಖಂಡರಿಗೆ ಏಕೆ ಕೊಟ್ಟಲ್ಲ. ಸಭೆ ನಡೆಯುವ ಕುರಿತು ಪತ್ರಿಕಾ ಹೇಳಿಕೆ ನೀಡದ ಹಿನ್ನೆಲೆ ಎಲ್ಲರಿಗೂ ಮಾಹಿತಿ ಕೊರತೆಯಿದೆ. ಗೌಪ್ಯವಾಗಿ ಸಭೆ ನಡೆಸಬೇಕು ಎಂದು ಅಧಿಕಾರಿಗಳು ತೀರ್ಮಾನಿಸಿದ್ದೀರಾ ಎಂದು ದೂರಿದರು.
RELATED ARTICLES
- Advertisment -
Google search engine

Most Popular