ಕೆ.ಆರ್.ನಗರ : ಏತ ನೀರಾವರಿಯಿಂದ ರಾಜ್ಯದ ವಿವಿಧ ಸುಮಾರು 110 ಕೆರೆಕಟ್ಟೆಗಳಿಗೆ ನೀರನ್ನು ತುಂಬಿಸುವ ಕಾರ್ಯವನ್ನು ಮಾಡಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ಸಾಲಿಗ್ರಾಮ ತಾಲೂಕಿನ ಜಪದಕಟ್ಟೆ ಏತ ನೀರಾವರಿ ಕಾಮಗಾರಿಗಳ ಪರಿವಿಕ್ಷಣೆಯನ್ನು ನಡೆಸಿ ಮಾತನಾಡಿದರು.
ಕೆರೆಕಟ್ಟೆಗಳಿಗೆ ನೀರನ್ನು ತುಂಬಿಸುವುದರಿಂದ ಅಂತರ್ಜಲವೂ ಹೆಚ್ಚುವುದು. ಈ ಏತ ನೀರಾವರಿಯಿಂದ ಸುಮಾರು 4,500 ಎಕರೆಗೂ ಹೆಚ್ಚಿನ ಕೃಷಿ ಭೂಮಿಗೆ ಅನುಕೂಲವಾಗಲಿದೆ ಎಂದರು.
3000 ಕಾಮಗಾರಿಗಳ ಬಿಲ್ಲಿಂಗ್ ಪೇಮೆಂಟ್ ಕಾರ್ಯವು ನಡೆಯುತ್ತಿದೆ. 5,000 ಕೋಟಿಯ ಕಾಮಗಾರಿಗಳ ಟೆಂಡರ್ ಆಗಿರುವಂತಹ ಹಾಗೂ ಮಾಡುವಂತಹ ಕೆಲಸವು ನಡೆಯುತ್ತಿದೆ. ಇದರ ಜೊತೆಗೆ ಸುಮಾರು 5,000 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವಂತೆ ಶಾಸಕರು, ಸಚಿವರುಗಳು ಪ್ರಪೋಸಲ್ ಕೊಟ್ಟಿದ್ದಾರೆ ಎಂದರು.
ಮೊದಲ ಭಾಗವಾಗಿ ಇಲಾಖೆ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳಲ್ಲಿ ಮುಗಿಯುವ ಹಂತದಲ್ಲಿರುವ ಕಾಮಗಾರಿಗಳನ್ನು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಅವುಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅದರ ಉಪಯೋಗವಾಗುವಂತೆ ನೋಡಿಕೊಳ್ಳುವ ಕೆಲಸವನ್ನು ಮಾಡಲಾಗುತ್ತಿದೆ. ಆ ಕಾರಣಕ್ಕಾಗಿ ಖುದ್ದಾಗಿ ರಾಜ್ಯದ ವಿವಿಧ ಭಾಗಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಲ್ಲಿನ ರೈತರು, ಜನಪ್ರತಿನಿಧಿಗಳಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದರು. ಜಪದಕಟ್ಟೆ ಏತ ನೀರಾವರಿ ಕಾಮಗಾರಿಯನ್ನು ಶೀಘ್ರದಲ್ಲಿ ಮುಗಿಸಿ ರೈತರುಗಳಿಗೆ ಅನುಕೂಲವಾಗುವಂತೆ ಮಾಡಲಾಗುವುದು ಎಂದರು.
ಶಾಸಕ ಡಿ.ರವಿಶಂಕರ್ ಮಾತನಾಡಿ ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೀರಾವರಿ ಇಲಾಖೆಯಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಹೆಚ್ಚಿನ ಅನುದಾನವನ್ನು ನೀಡುವಂತೆ ಸಚಿವರಲ್ಲಿ ಮನವಿ ಮಾಡಿದರು.

ಸ್ಥಳದಲ್ಲಿ ಹಾಜರಿದ್ದ ಸುತ್ತಮುತ್ತಲ ಗ್ರಾಮದ ಜನರು ಸಚಿವರು ಹಾಗೂ ಶಾಸಕರಲ್ಲಿ ತಮ್ಮ ಭಾಗಕ್ಕೆ ನೀರಾವರಿ ಇಲಾಖೆ ವತಿಯಿಂದ ಆಗಬೇಕಾದ ಕೆಲಸಗಳನ್ನು ಮಾಡಿಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಅಧ್ಯಕ್ಷರಾದ ಹೆಚ್.ಟಿ.ಮಂಜಪ್ಪ, ಹೆಬ್ಬಾಳು ನಾಗರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಕೆಡಗ ನಟರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದಯಶಂಕರ್, ಮಹದೇವ್, ಎಸ್ ಸಿ ಘಟಕದ ಅಧ್ಯಕ್ಷ ಕಂಠಿಕುಮಾರ್, ಗ್ರಾ.ಪಂ. ಅಧ್ಯಕ್ಷ ಶಿವಣ್ಣ, ಮಾಜಿ ಅಧ್ಯಕ್ಷರಾದ ತೇಜೋಮೂರ್ತಿ, ಹರೀಶ್, ಸದಸ್ಯರಾದ ಸಿದ್ದರಾಜು, ಶಂಭುಲಿಂಗಾಚಾರ್, ನಾಗೇಶ್, ಪಿಎಸ್ಐ ಕುಮುದ, ಪಿಡಿಓ ಕೆ.ನವೀನ್, ರಾಜಶ್ವ ನಿರೀಕ್ಷಕ ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ಆರತಿ, ಎಸ್ಡಿಎ ಮಂಜೇಗೌಡ, ಮುಖಂಡರುಗಳಾದ
ಗುಣಪಾಲಜೈನ್, ಕೊತ್ವಾಲ್ ಮಂಜು, ಜವರಯ್ಯ, ಕುಮಾರಸ್ವಾಮಿ, ಹೆಬ್ಬಾಳು ರಾಜಶೇಖರ್, ಹೆಚ್.ಟಿ.ಪ್ರಕಾಶ್, ಮುತ್ತಾರ್ ಪಾಷಾ, ಶ್ರೀನಿವಾಸ, ಮೂರ್ತಿ, ನೀರಾವರಿ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವರು ಇದ್ದರು.