ಎಡತೊರೆ ಮಹೇಶ್
ಎಚ್ ಡಿ ಕೋಟೆ : ಕೋಳಿಗಳನ್ನು ಕೊಂಡೊಯ್ಯುತ್ತಿದ್ದ ವಾಹನ ಆಯತಪ್ಪಿ ಮಗುಚಿ ಬಿದ್ದ ಪರಿಣಾಮ ಕೊಂಡೊಯ್ಯಲು ಜನ ಮುಗಿಬಿದ್ದ ಘಟನೆ ಹೆಚ್ ಡಿ ಕೋಟೆ ತಾಲೂಕು ಅಣ್ಣೂರು ಗ್ರಾಮ ಪಂಚಾಯಿತಿಗೆ ಸೇರಿದ ಉದ್ಬೂರು ಕಾಲೋನಿಯಲ್ಲಿ ನಡೆದಿದೆ. ಎಚ್ ಡಿ ಕೋಟೆ ತಾಲೂಕು ಅಣ್ಣೂರು ಗ್ರಾಮ ಪಂಚಾಯತಿಗೆ ಸೇರಿದ ಉದ್ಬೂರ್ ಕಾಲೋನಿ ಯಿಂದ ಅಣ್ಣೂರು ಹೋಗುವ ಕಾಲದಾರಿ ರಸ್ತೆ ಕಿರುದ್ದಾಗಿದ್ದುಎರಡು ಬದಿಯಲ್ಲಿ ಜೆಸಿಪಿ ಮಣ್ಣು ತೆಗೆದಿರುವ ಕಾರಣ ಮತ್ತು ರಸ್ತೆ ಕಿರಿದಾಗಿರುವುದರಿಂದ ಬೋಲೇರೋ ವಾಹನ ಆಯುತಪ್ಪಿ ಮಗುಚಿ ಕೊಂಡಿದೆ.
ಇದರಿಂದ ರಾಮಕೃಷ್ಣ ನಾಯ್ಡು ಕೋಳಿ ಫಾರಂನಾ ಸುಮಾರು 600 ಕೋಳಿಗಳು ಮೃತಪಟ್ಟಿವೆ. ಫಾರಂನ ಮಾಲೀಕ ಮಹೇಶ್ ಅಳಲು ತೋಡಿಕೊಂಡಿದ್ದಾರೆ.ಸುಮಾರು 1 ಲಕ್ಷ ದಷ್ಟು ನಷ್ಟವಾಗಿದೆ .ಸಂಬಂಧಪಟ್ಟವರು ರಸ್ತೆಯನ್ನು ಸರಿಪಡಿಸಿ ವಾಹನಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ .ಈ ದಿನ ನನಗೆ ನಷ್ಟ ಆಗಿದೆ ಮತ್ತು ನನ್ನ ಜೀವಕ್ಕೆ ಏನು ತೊಂದರೆಯಾಗಿಲ್ಲ.ಚುನಾವಣೆಯ ಸಂದರ್ಭದಲ್ಲಿ ಮತ ಕೇಳಲು ಬರುವ ಚುನಾಯಿತ ಪ್ರತಿನಿಧಿಗಳು ನಮಗೆ ಮತ ಕೊಡಿ, ಅಭಿವೃದ್ಧಿಪಡಿಸುತ್ತೇವೆ, ನಿಮ್ಮ ಊರನ್ನು ಸಿಂಗಾಪುರ್ ರೀತಿ ಮಾಡುತ್ತೇವೆ ಎಂದು ಭರವಸೆ ಕೊಡುತ್ತಾರೆ.ನಮಗೆ ಮತ ಹಾಕಿ ಎನ್ನುತ್ತಾರೆ ಗೆದ್ದ ಮೇಲೆ ಇತ್ತ ತಿರುಗಿ ನೋಡುವುದಿಲ್ಲ . ಈಗಿರುವಾಗ ನಮ್ಮ ಕಷ್ಟ ಯಾರತ್ರ ಹೇಳಿಕೊಳ್ಳಬೇಕು.ದಯಮಾಡಿ ರಸ್ತೆ ಸರಿಪಡಿಸಿ ಎಂದು ಬೇಸರ ವ್ಯಕ್ತಪಡಿಸಿದರು.ಕೋಳಿಗಳನ್ನು ಕೊಂಡೊಯಲು ಮುಗಿಬಿದ್ದ ಜನ ಅಂತೂ ಇಂತೂ ಇವತ್ತು ಸುತ್ತಮುತ್ತಲಿನ ಗ್ರಾಮದವರಿಗೆ ಭಾನುವಾರದ ಬಾಡೂಟ ಎಂಬ ಖುಷಿಯಲ್ಲಿದ್ದರು.