ಚಾಮರಾಜನಗರ: ಜಾಹೀರಾತಿಲ್ಲದೆ ಪತ್ರಿಕೆಯನ್ನು ಹೊರ ತಂದ ಪಿ ಲಂಕೇಶ್ ಅವರ ಸಾಧನೆ ಮರೆಯಲಾಗದು ಎಂದು ಬರಹಗಾರ ಎಸ್ ಲಕ್ಷ್ಮಿ ನರಸಿಂಹ ತಿಳಿಸಿದರು.
ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ , ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕೋದ್ಯಮಿ, ಪಿ ಲಂಕೇಶ್ ರವರ ಪತ್ರಿಕೋದ್ಯಮ ಮತ್ತು ಬರಹಗಳ ಬಗ್ಗೆ ಮಾತನಾಡುತ್ತಾ, ಲಂಕೇಶ್ ಪತ್ರಿಕೆ ಸಾವಿರಾರು ಓದುಗರನ್ನು ಹಾಗೂ ಹತ್ತಾರು ಲೇಖಕರನ್ನು ಸೃಷ್ಟಿ ಮಾಡಿದ್ದು, ಅವರದ ಅವರ ಕನ್ನಡ ಬರವಣಿಗೆಯ ಶೈಲಿ ವಿಶೇಷವಾಗಿತ್ತು ರಾಮಕೃಷ್ಣ ಹೆಗಡೆ ಬಂಗಾರಪ್ಪ ಗುಂಡೂರಾವ್ ವಾಟಾಳ್ ನಾಗರಾಜ್ ರವರಂತಹ ದಿಗ್ಗಜರನ್ನು ಟೀಕಿಸುತ್ತಿದ್ದಲಂಕೇಶ್ ರವರ ಬರವಣಿಗೆಯನ್ನೂ ಕನ್ನಡಿಗರು ಮರೆಯಲಾಗದು. ವಿಧಾನ ಮಂಡಲದಲ್ಲಿ ಹಕ್ಕು ಚ್ಯುತಿ ಮಂಡನೆಗೆ ಒಳಗಾದಾಗ ಲಂಕೇಶ್ ಅವರನ್ನು ರಕ್ಷಿಸಿದ್ದು ಕನ್ನಡ ಚಳುವಳಿಗಾರ ಶಾಸಕರಾಗಿದ್ದ ವಾಟಳ್ ನಾಗರಾಜ್ ಎಂದು ತಿಳಿಸಿದರು.
ಕನ್ನಡ ಹೋರಾಟಗಾರ ಚರಣ್ ಶ್ರೀನಿವಾಸ್ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕನ್ನಡ ಪತ್ರಿಕೋದ್ಯಮದಲ್ಲಿ ಕಿಡಿ ಶೇಷಪ್ಪ ಲಂಕೇಶ್, ರವಿ ಬೆಳಗೆರೆ ಜ್ವಾಲಾಮುಖಿ ಪತ್ರಿಕೆ ಮರೆಯಲಾಗದು.

ಲಂಕೇಶ್ ರವರ ಪತ್ರಿಕೆಯಲ್ಲಿ ವಿಮರ್ಶೆ ಅಂಕಣ ರಾಜಕೀಯ ಸುದ್ದಿಯ ವಿಶ್ಲೇಷಣೆಗಳು ಗಾಂಧೀಜಿ ಕುರಿತು ಬರೆಯುತ್ತಿದ್ದವರ ಲೇಖನಗಳು ತುಂಬಾ ಪ್ರಭಾವ ಬೀರಿತು. ನದಿಗಳು ಕಥೆಗಾರರು ಕಾದಂಬರಿ ಕಾರರು ಆಗಿದ್ದ ಲಂಕೇಶ್ ರವರು ನಿರ್ದೇಶನ ಹಾಗೂ ನಟರಾಗಿಯು ಕೂಡ ಮಿಂಚಿದವರು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಆರಾಧ್ಯರವರು ಮಾತನಾಡಿ ಲಂಕೇಶ್ ರವರ ಪತ್ರಿಕೆ ಪ್ರಾರಂಭದಲ್ಲಿ ಚಾಮರಾಜನಗರಕ್ಕೆ ಪತ್ರಿಕೆಗಳು ಬರುತ್ತಿದ್ದು , ಅದನ್ನು ಹಂಚುವ ಮತ್ತು ಓದಿದ ನಂತರ ಮತ್ತೆ ಓದುಗರಿಗೆ ನೀಡುವ ಕಾರ್ಯ ಮಾಡುತ್ತಿದ್ದನ್ನು ಸ್ಮರಿಸಿದರು.
ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ವಹಿಸಿ ಮಾತನಾಡಿ ಪಿ ಲಂಕೇಶ್ ರವರ ಸಾಹಿತ್ಯದ ಎಲ್ಲಾ ರಂಗದಲ್ಲಿ ಆಳವಾಗಿ ಇಳಿದ ಮಹಾಲೇಖಕ, ಬಹುಮುಖ ಪ್ರತಿಭೆಯಾಗಿದ್ದರು. ಬದುಕನ್ನು ತನ್ನಿಷ್ಟದಂತೆ, ಬದುಕಿದ ಅಪರೂಪದ ವ್ಯಕ್ತಿ. ಜಾಹೀರಾತಿಲ್ಲದೆ ಪತ್ರಿಕೆಯನ್ನು ನಡೆಸಿದ ಹೊಸ ಪರಂಪರೆಗೆ ನಾಂದಿ ಹಾಕಿದ ಲಂಕೇಶ್ ರವರು ಕನ್ನಡ ಪತ್ರಿಕೋದ್ಯಮದ ಮಹಾಸಾಹಸಿಗರು. ಇಂದು ಪತ್ರಿಕಾ ಕ್ಷೇತ್ರ ಬಹಳ ಸಮಸ್ಯೆಗಳಲ್ಲಿ ಸಿಲುಕಿದೆ. ಪತ್ರಿಕೆಯನ್ನು ನಡೆಸುವುದು ಬಹು ಕಷ್ಟದ ವಿಚಾರವೆಂದರು. ಲಂಕೇಶ್ ರವರ ಬರವಣಿಗೆಯು ಪ್ರಜ್ಞಾವಂತ ಮನಸ್ಸುಗಳನ್ನು ಸೃಷ್ಟಿಸಿತು. ವಾರಪತ್ರಿಕೆಗಳನ್ನು ಜನ ಕಾದು ಇನ್ ಖರೀದಿಸಿ ಓದುವ ಹಾಗೆ ಮಾಡಿದವರು. ಅಧ್ಯಾಪಕರಾಗಿ, ವಿಮರ್ಶಕರಾಗಿ ,ಕಾದಂಬರಿಕಾರರಾಗಿ, ನಟರಾಗಿ, ಹುಳಿಮಾವಿನ ಮರ ದಂತಹ ಅಪರೂಪದ ಆತ್ಮಕಥೆಯನ್ನು ತಂದವರು. ಗ್ರೀಕ್ ನಾಟಕಗಳನ್ನು ಭಾಷಾಂತರ ಮಾಡಿ, ನಾಟಕ ಸಾಹಿತ್ಯದ ಮೈಲಿಗಲ್ಲು ಲಂಕೇಶ್ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸರಸ್ವತಿ, ನಾಗಲಕ್ಷ್ಮಿ, ಸುರೇಶ್ ನಾಗ್ ಹರದನಹಳ್ಳಿ , ಜಯಕುಮಾರ್, ಬೊಮ್ಮಾಯಿ, ಮೋಹನ್ ಗೌಡ , ಕನ್ನಡ ಹೋರಾಟಗಾರ ಪುಟ್ಟ ಸ್ವಾಮಿ, ಗೋವಿಂದರಾಜು, ಡಾ. ಮಂಜುನಾಥ್, ಇದ್ದರು.