Friday, April 11, 2025
Google search engine

Homeರಾಜ್ಯಸುದ್ದಿಜಾಲಪದ್ಮಭೂಷಣ ಉಸ್ತಾದ್ ಜಾಕೀರ್ ಹುಸೇನ್ ರವರಿಗೆ ಸ್ವರ ಶ್ರದ್ಧಾಂಜಲಿ

ಪದ್ಮಭೂಷಣ ಉಸ್ತಾದ್ ಜಾಕೀರ್ ಹುಸೇನ್ ರವರಿಗೆ ಸ್ವರ ಶ್ರದ್ಧಾಂಜಲಿ

ಮೈಸೂರು: ಮೈಸೂರಿನ ಕುವೆಂಪು ನಗರದ ಉದಯರವಿ ರಸ್ತೆಯಲ್ಲಿರುವ ಶ್ರೀ ಗುರು ಪುಟ್ಟರಾಜ ಸಂಗೀತ ಸಭಾ ದ ಎಸ್. ಜಿ. ಪಿ ಸಂಗೀತ ವಿದ್ಯಾಲಯದಲ್ಲಿ ಪಂ. ಪಂಚಾಕ್ಷರ ಗವಾಯಿಗಳ 133 ನೇ ಜಯಂತಿ ಹಾಗೂ ಪದ್ಮಭೂಷಣ ಉಸ್ತಾದ್ ಜಾಕೀರ್ ಹುಸೇನ್ ರವರಿಗೆ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ತಬಲಾ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಸಂಗೀತಾ ವಿದ್ಯಾಶಾಲೆಯ ಮುಖ್ಯಸ್ಥರು ಹಾಗೂ ತಬಲಾ ವಾದಕ ಭೀಮಾಶಂಕರ್ ಬೀದನೂರ್ ಪಂಡಿತ ಪಂಚಾಕ್ಷರ ಗವಾಯಿಗಳಿಗೂ ಮೈಸೂರಿಗೂ ವಿಶೇಷವಾದ ಸಂಬಂಧವಿದೆ ಗವಾಯಿಗಳು ಮೈಸೂರಿನಲ್ಲಿ ತಮ್ಮ ಸಂಗೀತ ಅಭ್ಯಾಸ ಮಾಡಿದ್ದರು ಇಂದು ಅವರಿಗೆ ಲಕ್ಷಾಂತರ ಸಂಗೀತ ವಿದ್ಯಾರ್ಥಿಗಳು ಇದ್ದಾರೆ.

ಸಂಗೀತ ಅಭ್ಯಾಸ ಮಾಡುವವರಿಗೆ ಪಂಚಾಕ್ಷರಿ ಗವಾಯಿಗಳು ಹಾಗೂ ಪುಟ್ಟರಾಜು ಗವಾಯಿಗಳು ಯಾವಾಗಲೂ ಸ್ಪೂರ್ತಿ ಮತ್ತು ಗವಾಯಿಗಳು ನಮ್ಮ ಸಂಗೀತದ ಸ್ವರಗಳಲ್ಲಿ ಜೀವಂತವಿದ್ದಾರೆ. ಮೈಸೂರಿನ ಮತ್ತು ಪಂಚಾಕ್ಷರಿ ಗವಾಯಿಗಳ ಭಾಂದವ್ಯ ಮುಂದಿನ ಪೀಳಿಗೆಗೆ ಪರಿಚಯಿಸುವ ದೂರದೃಷ್ಟಿಯಿಂದ ಮೈಸೂರಿನ ಯಾವುದಾದರೂ ವೃತ್ತಕ್ಕೆ ಅಥವಾ ರಸ್ತೆಗೆ ಅವರ ಹೆಸರನ್ನು ಇಟ್ಟು ಅವರ ಮೈಸೂರಿನ ನಂಟನ್ನು ಚಿರಸ್ಥಾಯಿಯಾಗಿ ಮಾಡಬೇಕು ಎಂದು ತಿಳಿಸಿದರು.

ಜಾಕಿರ್ ಹುಸೇನ್ ರವರ ಶಿಷ್ಯ ವೃಂದದ ವಿನಾಯಕ್ ಸಾಗರ್ ಮಾತನಾಡಿ ತಬಲಾ ವಾದನದಲ್ಲಿ ಜಾಕಿರ್ ಹುಸೇನ್ ರವರ ಸಾಧನೆ ಅಪಾರ ಇಂದು ಪ್ರಪಂಚದಾದ್ಯಂತ ಭಾರತದ ತಬಲಾ ಉತ್ತಮ ಮಾನ್ಯತೆ ಪಡೆದಿದೆ ಅದರ ಆಸಕ್ತರು ವೃದ್ದಿಯಾಗುತ್ತದೆ ಎಂದರೆ ಅದರ ಬಹುಪಾಲು ಕೀರ್ತಿ ಜಾಕಿರ್ ಹುಸೇನ್ ರವರಿಗೆ ಸೇರುತ್ತದೆ ಎಂದು ತಿಳಿಸಿದರು.

ಈ‌ ಸಂದರ್ಭದಲ್ಲಿ ವಿನಾಯಕ ಸಾಗರ್ ರವರು ಒಂದು ಗಂಟೆಗಳ ಕಾಲ ನಿರಂತರ ತಬಲ ವಾದನ ಮಾಡಿ ಜಾಕಿರ್ ಹುಸೇನ್ ರವರಿಗೆ ಸ್ವರ ಶ್ರದ್ಧಾಂಜಲಿ ಸಲ್ಲಿಸಿದರು.

ಎಸ್ ಜಿ ಪಿ ಸಂಗಿತಾ ವಿದ್ಯಾಲಯದ ವಿದ್ಯಾರ್ಥಿಗಳಾದ ಬಾಲ ಕಲಾವಿದ ಕು. ಪುಟ್ಟರಾಜ್ ಕೊಲ್ಕುಂದ ಹಿಂದೂ ಸ್ಥಾನಿ ಗಾಯನ ಮಾಡಿದರೆ ಯಮನೇಶ್ ತಬಲಾ ವಾದನ ಮಾಡಿ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಂಡಿತ್ ರಮೇಶ್ ಕುಲ್ಕುಂದ, ವಿನಾಯಕ್ ಸಾಗರ್, ಭೀಮಾಶಂಕರ ಬೀದನೂರ್ ಸೇರಿದಂತೆ ವಿದ್ಯಾಶಾಲೆಯ ವಿದ್ಯಾರ್ಥಿಗಳು , ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular