ಬೆಂಗಳೂರು/ ಶಿವಮೊಗ್ಗ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಬಲಿಯಾದ ಕರ್ನಾಟಕದ ಇಬ್ಬರು ವೀರರು ಮಂಜುನಾಥ್ ಮತ್ತು ಭರತ್ ಭೂಷಣ್ ಅವರ ಅಂತ್ಯಕ್ರಿಯೆ ಇಂದು ನೆರವೇರಿತು. ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಅವರ ಅಂತಿಮ ಸಂಸ್ಕಾರ ತುಂಗಾ ನದಿ ತಟದ ರೋಟರಿ ಚಿತಾಗಾರದಲ್ಲಿ, ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು. ಪೊಲೀಸರು ಮೂರು ಸುತ್ತು ಗುಂಡು ಹಾರಿಸಿ ಗೌರವ ವಂದನೆ ಸಲ್ಲಿಸಿದರು.
ಬೆಂಗಳೂರಿನ ಭರತ್ ಭೂಷಣ್ ಅವರ ಅಂತ್ಯಕ್ರಿಯೆ ಹೆಬ್ಬಾಳ ಚಿತಾಗಾರದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ನಡೆಯಿತು.
ಇಬ್ಬರ ಅಂತಿಮ ದರ್ಶನಕ್ಕಾಗಿ ಸಚಿವರು, ಶಾಸಕರು, ಗಣ್ಯರು ಹಾಜರಿದ್ದರು. ಮಂಜುನಾಥ್ ಹಾಗೂ ಭರತ್ ಭೂಷಣ್ ದೇಶಕ್ಕಾಗಿ ಬಲಿಯಾದ ವೀರಯೋಧರಾಗಿ ಜನಮನದಲ್ಲಿ ನೆಲೆಯಾದರು.