ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಎನ್‌ಐಎ ತನಿಖೆ ಮುಂದುವರೆಸಿದ್ದು, ಮೂವರು ಶಂಕಿತ ಉಗ್ರರ ರೇಖಾಚಿತ್ರ ಬಿಡುಗಡೆ ಮಾಡಲಾಗಿದೆ.
ಪ್ರತ್ಯಕ್ಷದರ್ಶಿಗಳ ಮಾಹಿತಿಯ ಆಧಾರದಲ್ಲಿ ಆಸೀಫ್, ಸುಲೇಮಾನ್ ಮತ್ತು ಅಬು ಎಂಬ ಶಂಕಿತರ ಚಿತ್ರಗಳನ್ನು ಸೇನೆ ಬಿಡುಗಡೆ ಮಾಡಿದೆ. ದಾಳಿಯಲ್ಲಿ ಮಂಜುನಾಥ್ ಭರತ್ ಭೂಷಣ್, ಮಧೂಸೂಧನ್ ಸೇರಿದಂತೆ 25ಕ್ಕೂ ಹೆಚ್ಚು ಪ್ರವಾಸಿಗರು ಬಲಿಯಾದರು. ಈ ಕ್ರೂರ ಕೃತ್ಯವನ್ನು ದೇಶವಾಸಿಗಳ ಜೊತೆಗೆ ಅಂತರರಾಷ್ಟ್ರೀಯ ಮಟ್ಟದಲ್ಲೂ ತೀವ್ರವಾಗಿ ಖಂಡಿಸಲಾಗಿದೆ.