ಮೈಸೂರು: ವಿಶ್ವಯೋಗ ದಿನಾಚರಣೆಯ ಅಂಗವಾಗಿ ಪರಮಹಂಸ ಯೋಗ ಮಹಾವಿದ್ಯಾಲಯದ ವತಿಯಿಂದ ಅಂತರ ಶಾಲಾ ಚಿತ್ರಕಲಾ ಸ್ಪರ್ಧೆಯನ್ನು ಜೂ.೨೩ರಂದು ಬೆಳಗ್ಗೆ ೧೦.೩೦ಕ್ಕೆ ರಾಮಕೃಷ್ಣನಗರದಲ್ಲಿರುವ ಪರಮಹಂಸ ಯೋಗ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ ಎಂದು ಯೋಗ ಮಹಾವಿದ್ಯಾಲಯದ ಅಧ್ಯಕ್ಷ ಶಿವಪ್ರಕಾಶ್ ತಿಳಿಸಿದರು.
ಇಂಟರ್ ನ್ಯಾಷನಲ್ ಯೋಗಸ್ಕೂಲ್ ಆಶ್ರಯದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ೧ ರಿಂದ ೭ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದ್ದು, ವಿಜೇತರಾದ ವಿದ್ಯಾರ್ಥಿಗಳಿಗೆ ಪದಕ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ. ಹಾಗೆಯೇ ೬ರಿಂದ ೧೫ ವರ್ಷದ ವಿದ್ಯಾರ್ಥಿಗಳಿಗಾಗಿ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ೬ನೇ ಇಂದ್ರಿಯ ಜಾಗೃತಿಗೊಳಿಸುವ ಅಂತರ್‌ದೃಷ್ಟಿ ವಿದ್ಯೆ ೧೮ನೇ ಬ್ಯಾಚ್ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಿದ್ದು ಹೆಚ್ಚಿನ ಮಾಹಿತಿಗಾಗಿ ೯೦೩೫೫೦೬೭೯೦ನ್ನು ಸಂಪರ್ಕಿಸಿ ಎಂದರು.