Thursday, April 3, 2025
Google search engine

Homeವಿದೇಶಕಾಶ್ಮೀರ ಸೇರಿದಂತೆ ಭಾರತದ ಜತೆಗಿನ ಎಲ್ಲ ಸಮಸ್ಯೆಗಳ ಇತ್ಯರ್ಥಕ್ಕೆ ಪಾಕ್ ಪ್ರಧಾನಿ ಒಲವು

ಕಾಶ್ಮೀರ ಸೇರಿದಂತೆ ಭಾರತದ ಜತೆಗಿನ ಎಲ್ಲ ಸಮಸ್ಯೆಗಳ ಇತ್ಯರ್ಥಕ್ಕೆ ಪಾಕ್ ಪ್ರಧಾನಿ ಒಲವು

ಇಸ್ಲಾಮಾಬಾದ್: ಕಾಶ್ಮೀರ ಸೇರಿದಂತೆ ಭಾರತದ ಜತೆಗಿನ ಎಲ್ಲ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಪಾಕಿಸ್ತಾನ ಬಯಸಿದೆ ಎಂದು ಅಲ್ಲಿನ ಪ್ರಧಾನಿ ಶೆಹಬೆಝ್ ಶರೀಫ್ ಪ್ರಕಟಿಸಿದ್ದಾರೆ.

ಕಾಶ್ಮೀರ ಐಕ್ಯಮತ್ಯ ದಿನಾಚರಣೆ ಅಂಗಾಗಿ ಮುಜಾಫರಾಬಾದ್ನಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಅವರು, ವಿಶ್ವಸಂಸ್ಥೆಗೆ ಭಾರತ ನೀಡಿರುವ ಭರವಸೆಗಳನ್ನು ಈಡೇರಿಸಿ ಮಾತುಕತೆ ಆರಂಭಿಸಬೇಕು ಎಂದು ಅಭಿಪ್ರಾಯಪಟ್ಟರು.

ಕಾಶ್ಮೀರಿಗಳಿಗೆ ಬೆಂಬಲ ವ್ಯಕ್ತಪಡಿಸಲು ಪ್ರತಿ ವರ್ಷ ಕಾಶ್ಮೀರ ಐಕ್ಯಮತ್ಯ ದಿನವನ್ನು ಹಮ್ಮಿಕೊಳ್ಳಲಾಗುತ್ತಿದೆ. “ಮಾತುಕತೆಯ ಮೂಲಕ ಕಾಶ್ಮೀರ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನಾವು ಬಯಸಿದ್ದೇವೆ” ಎಂದು ಹೇಳಿದರು.

“2019ರ ಆಗಸ್ಟ್ 5ರ ಚಿಂತನೆಯಿಂದ ಭಾರತ ಹೊರಬರಬೇಕು ಮತ್ತು ಮಾತುಕತೆ ಆರಂಭಿಸುವ ಬಗ್ಗೆ ವಿಶ್ವಸಂಸ್ಥೆಗೆ ನೀಡಿದ ಭರವಸೆಯನ್ನು ಈಡೇರಿಸಬೇಕು” ಎಂದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಭಾರತ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ಕ್ರಮವನ್ನು ಉಲ್ಲೇಖಿಸಿದರು.

1999ರ ಲಾಹೋರ್ ಒಪ್ಪಂದದಲ್ಲಿ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಪಾಕಿಸ್ತಾನಕ್ಕೆ ಭೇಟಿ ನೀಡಿದ ಅವಧಿಯಲ್ಲಿ ಇಸ್ಲಾಮಾಬಾದ್ ಮತ್ತು ಹೊಸದಿಲ್ಲಿಗೆ ಇರುವ ಏಕೈಕ ಮಾರ್ಗವೆಂದರೆ ಮಾತುಕತೆ ನಡೆಸಿಕೊಳ್ಳುವುದು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು.

RELATED ARTICLES
- Advertisment -
Google search engine

Most Popular