ಇಸ್ಲಾಮಾಬಾದ್: ಭಾರತದ ದಾಳಿಯಿಂದ ತೀವ್ರ ಆತಂಕಕ್ಕೊಳಗಾದ ಪಾಕಿಸ್ತಾನ ಈಗ ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಮಹತ್ವದ ತೀರ್ಮಾನಕ್ಕೆ ಮುಂದಾಗಿದೆ. ಪ್ರಧಾನಿ ಶೆಹಬಾಜ್ ಷರೀಫ್ ಅವರು National Command Authority ತುರ್ತು ಸಭೆ ಕರೆದಿದ್ದಾರೆ.
ಇದು ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳ ನಿಯಂತ್ರಣ ಮತ್ತು ನಿರ್ಧಾರದ ಮುಖ್ಯ ಸಂಸ್ಥೆಯಾಗಿದೆ, ಮತ್ತು ಸಾಮಾನ್ಯವಾಗಿ ಯುದ್ಧದ ಸಂದರ್ಭದಲ್ಲಿ ಮಾತ್ರ ಈ ಸಭೆ ನಡೆಯುತ್ತದೆ. ಭಾರತ ಮತ್ತು ಪಾಕಿಸ್ತಾನ ಎರಡೂ ಪರಮಾಣು ಶಕ್ತಿ ರಾಷ್ಟ್ರಗಳಾಗಿವೆ. ಭಾರತ ಮೊದಲಿಗೆ ಅಸ್ತ್ರ ಬಳಸದು ಎಂದು ಘೋಷಿಸಿದರೂ, ದಾಳಿ ನಡೆದರೆ ತಿರುಗೇಟು ನೀಡುವುದಾಗಿ ಸ್ಪಷ್ಟಪಡಿಸಿದೆ.
ರಷ್ಯಾ-ಉಕ್ರೇನ್, ಇಸ್ರೇಲ್-ಹಮಾಸ್ ಯುದ್ಧಗಳಲ್ಲಿ ಕೂಡ ಈ ವಿಷಯ ಚರ್ಚೆಗೆ ಬಂದಿದ್ದರೂ, ಆದರೆ ಯಾರೂ ಅಣು ಬಾಂಬ್ ಪ್ರಯೋಗಿಸುವ ಧೈರ್ಯ ಮಾಡಿರಲಿಲ್ಲ. ಒಂದು ವೇಳೆ ಯಾವುದಾದರೂ ದೇಶ ಪರಮಾಣು ಬಾಂಬ್ ಬಳಸಿದರೆ ಆ ದೇಶದ ಜೊತೆ ವಿಶ್ವವೇ ಆರ್ಥಿಕ ಸಂಬಂಧವನ್ನೇ ಕಳೆದುಕೊಳ್ಳುತ್ತದೆ. ಹೀಗಾಗಿ ಎರಡನೇ ಮಹಾಯುದ್ಧದ ಬಳಿಕ ಇಲ್ಲಿಯವರೆಗೆ ಯಾವುದೇ ದೇಶ ಪರಮಾಣು ಅಸ್ತ್ರವನ್ನು ಬಳಸಿಲ್ಲ.