Monday, May 12, 2025
Google search engine

HomeUncategorizedರಾಷ್ಟ್ರೀಯಪುಲ್ವಾಮಾ ದಾಳಿಗೆ ತಾನೇ ಹೊಣೆಯೆಂದ ಪಾಕ್‌: ಸೇನಾಧಿಕಾರಿಯಿಂದ ವಿವಾದಾಸ್ಪದ ಹೇಳಿಕೆ

ಪುಲ್ವಾಮಾ ದಾಳಿಗೆ ತಾನೇ ಹೊಣೆಯೆಂದ ಪಾಕ್‌: ಸೇನಾಧಿಕಾರಿಯಿಂದ ವಿವಾದಾಸ್ಪದ ಹೇಳಿಕೆ

ಈವರೆಗೂ ಪುಲ್ವಾಮಾ ದಾಳಿಯನ್ನು ನಾವು ಮಾಡಿಲ್ಲ ಎಂದು ಹೇಳುತ್ತ ನಿರಾಕರಿಸುತ್ತಲೇ ಬಂದಿರುವ ಪಾಕಿಸ್ತಾನವು, ಭಾರತದ 40 ಸಿಆರ್‌ಪಿಎಫ್‌ ಯೋಧರನ್ನು ಬಲಿ ಪಡೆದ ಪುಲ್ವಾಮಾ ದಾಳಿ ಮಾಡಿಸಿದ್ದು ನಾವು ಎಂದು ಒಪ್ಪಿಕೊಂಡಿರುವುದು ವರದಿಯಾಗಿದೆ.

ಸುದ್ದಿಗೋಷ್ಠಿಗೋಷ್ಠಿಯಲ್ಲಿ ಮಾತನಾಡಿದ ಪಾಕಿಸ್ತಾನ ಸೇನಾಧಿಕಾರಿಯೊಬ್ಬರು, ಪುಲ್ವಾಮಾ ಒಂದು ಯುದ್ಧತಂತ್ರದ ಅದ್ಭುತವಾಗಿತ್ತು. ಈಗ ನಾವು ಕಾರ್ಯಾಚರಣೆಯ ಪ್ರಗತಿಯನ್ನು ತೋರಿಸಿದ್ದೇವೆ’ ಎಂದು ಹೇಳಿದ್ದಾರೆ.

1999ರಲ್ಲಿ ತನ್ನ ಕಾರ್ಯಕರ್ತರ ಮೂಲಕ ಏರ್‌ಇಂಡಿಯಾ ವಿಮಾನ ಅಪಹರಣ ಮಾಡಿಸಿ, ಬಳಿಕ ವಿಮಾನದಲ್ಲಿನ ಪ್ರಯಾಣಿಕರ ಬಿಡುಗಡೆಗೆ ಬದಲಾಗಿ ಭಾರತದ ಜೈಲಿಂದ ಬಿಡುಗಡೆಯಾಗಿದ್ದ ಜೈಷ್‌ ಎ ಮೊಹಮ್ಮದ್‌ ನಾಯಕ ಅಜರ್‌ ಮಸೂದ್‌ಗೆ ಭಾರತೀಯ ಸೇನೆ ಸರಿಯಾಗಿಯೇ ಬುದ್ಧಿ ಕಲಿಸಿದೆ. ಪಾಕ್‌ ಆಕ್ರಮಿತ ಕಾಶ್ಮೀರದ ಬಹಾವಲ್ಪುರದಲ್ಲಿನ ಮರ್ಕಜ್‌ ಸುಭಾನ್‌ ಉಗ್ರರ ಕ್ಯಾಂಪ್‌ ಮೇಲೆ ಭಾರತೀಯ ಸೇನೆ ನಡೆಸಿದ ದಾಳಿಯಲ್ಲಿ ಅಜರ್‌ ಮಸೂದ್‌ನ ಕುಟುಂಬದ 10 ಸದಸ್ಯರು ಮತ್ತು ಇತರ ನಾಲ್ವರು ಆಪ್ತರು ಸತ್ತಿದ್ದಾರೆ. ಮರ್ಕಜ್‌ ಸುಭಾನ್‌, ಜೈಷ್‌ ಎ ಮೊಹಮ್ಮದ್‌ ಸಂಘಟನೆಯ ಕೇಂದ್ರ ಕಚೇರಿಯಾಗಿದ್ದು, ಉಗ್ರರ ನೇಮಕ, ತರಬೇತಿ ಇಲ್ಲಿ ನಡೆಯುತ್ತಿತ್ತು ಎನ್ನಲಾಗಿದೆ.

ದಾಳಿಯಲ್ಲಿ ಮೃತಪಟ್ಟವರೆಲ್ಲಾ ಅಲ್ಲಾನ ಅತಿಥಿಗಳಾಗಿದ್ದಾರೆ. ಘಟನೆ ಬಗ್ಗೆ ನನಗೆ ವಿಷಾದವೂ ಇಲ್ಲ, ಹತಾಶನೂ ಆಗಿಲ್ಲ. ಆ 14 ಜನರ ಪ್ರಯಾಣದಲ್ಲಿ ನಾನು ಕೂಡಾ ಒಬ್ಬನಾಗಿರಬಾರದಿತ್ತೇ ಎಂದು ಹೃದಯ ಹೇಳುತ್ತಿದೆ. ಅವರ ವಿದಾಯದ ಸಮಯ ಬಂದಿದೆ, ಆದರೆ ದೇವರು ಅವರನ್ನು ಕೊಲ್ಲಲಿಲ್ಲ ಎಂದು ಹೇಳಿದ್ದಾನೆ. ಈ ಕ್ರೂರ ಕೃತ್ಯಕ್ಕೆ ಕ್ಷಮೆಯ ಮಾತೇ ಇಲ್ಲ ಎಂದು ಎಚ್ಚರಿಸಿದ್ದಾನೆ.

RELATED ARTICLES
- Advertisment -
Google search engine

Most Popular