Monday, April 21, 2025
Google search engine

Homeರಾಜ್ಯಸುದ್ದಿಜಾಲದಸರಾ ಪೂಜಾ ಕೈಂಕರ್ಯದ ನಿಮಿತ್ತ ಅರಮನೆ ಪ್ರವೇಶ ನಿಷೇಧ

ದಸರಾ ಪೂಜಾ ಕೈಂಕರ್ಯದ ನಿಮಿತ್ತ ಅರಮನೆ ಪ್ರವೇಶ ನಿಷೇಧ

ಮೈಸೂರು: ಮೈಸೂರು ದಸರಾ ಪ್ರಯುಕ್ತ ಮೈಸೂರು ರಾಜ ಮನೆತನದವರು ದಸರಾ ಮಹೋತ್ಸವ- 2023ರ ನಿಮಿತ್ತ ಧಾರ್ಮಿಕ ಪೂಜಾ ಕೈಂಕರ್ಯಗಳು ಅರಮನೆಯಲ್ಲಿ ನಡೆಸಲಿದ್ದು, ಅ. 9 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1:00 ವರೆಗೆ ಸಿಂಹಾಸನ ಜೋಡಣೆ, ಅ. 15 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಖಾಸಗಿ ದರ್ಬಾರ್‌ನಲ್ಲಿ ರಾಜ ವಂಶಸ್ಥರ ಪೂಜಾ ಕೈಂಕರ್ಯ, ಅ.23 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಆಯುಧಪೂಜೆ ಪ್ರಯುಕ್ತ ಹಾಗೂ ಅ. 24 ರಂದು ವಿಜಯದಶಮಿ ಪ್ರಯುಕ್ತ ಸಂಪೂರ್ಣ ದಿನ ಅರಮನೆಗೆ ಪ್ರವೇಶವಿರುವುದಿಲ್ಲ.

ನ. 8 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಿಂಹಾಸನ ವಿಸರ್ಜನೆ ಪ್ರಯುಕ್ತ ಪ್ರವಾಸಿಗರಿಗೆ ಅರಮನೆ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಮೈಸೂರು ಅರಮನೆ ಮಂಡಳಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular