Friday, April 4, 2025
Google search engine

Homeರಾಜ್ಯಸುದ್ದಿಜಾಲಜನಾಂದೋಲನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪಂಚವಳ್ಳಿ ಲೋಹಿತ್ ಮನವಿ

ಜನಾಂದೋಲನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪಂಚವಳ್ಳಿ ಲೋಹಿತ್ ಮನವಿ

ವರದಿ: ಸತೀಶ್ ಆರಾಧ್ಯ

ಪಿರಿಯಾಪಟ್ಟಣ: ಮೈಸೂರಿನಲ್ಲಿ ಆ.9 ರಂದು ನಡೆಯುವ ಜನಾಂದೋಲನ ಕಾರ್ಯಕ್ರಮಕ್ಕೆ ಪಿರಿಯಾಪಟ್ಟಣ ತಾಲೂಕಿನವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕುರುಬ ಸಮಾಜ ಯುವ ಘಟಕ ಅಧ್ಯಕ್ಷ ಪಂಚವಳ್ಳಿ ಲೋಹಿತ್ ಮನವಿ ಮಾಡಿದರು.

ಪಿರಿಯಾಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಮಾತನಾಡಿದ ಅವರು ರಾಜ್ಯ ಕಂಡ ಹಿರಿಯ ರಾಜಕೀಯ ಮುತ್ಸದ್ದಿ ಅಹಿಂದ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಹೆಸರಿಗೆ ಕಳಂಕ ತರಲು ಯತ್ನಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಆರೋಪ ರಹಿತ ವಾದ ಮಾಡುತ್ತಿರುವುದು ಖಂಡನೀಯ ಇದರ ವಿರುದ್ಧ ಮೈಸೂರಿನಲ್ಲಿ ನೆಡೆಯುವ ಜನಾಂದೋಲನ ಕಾರ್ಯಕ್ರಮದಲ್ಲಿ ರಾಜ್ಯದ 224 ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರು ಸಂಸದರು ಹಾಗೂ ಕೇಂದ್ರದ ನಾಯಕರು ಪಾಲ್ಗೊಳ್ಳುತ್ತಿದ್ದು ರಾಜ್ಯಪಾಲರು ನೀಡಿರುವ ಶೋಕಸ್ ನೋಟೀಸ್ ಖಂಡಿಸಿ ರಾಜ್ಯಾಧ್ಯoತ ಎಲ್ಲಾ ಅಹಿಂದ ಸಂಘಟನೆಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಸಿದ್ದರಾಮಯ್ಯನವರ ಕೈ ಬಲಪಡಿಸಲು ಒಂದಾಗಿ ಜನಾಂದೋಲನ ಕಾರ್ಯ ಕ್ರಮವನ್ನು ಯಶಸ್ವಿಗೊಳಿಸಲು ಕೋರಿದರು.

ಈ ಸಂದರ್ಭ ಯುವ ಮುಖಂಡ ರಕ್ಷಿತ್ ಗೊರಹಳ್ಳಿ, ಸತ್ಯನಾರಾಯಣ ಸುಂಡವಾಳು, ಅಲ್ಪ ಸಂಖ್ಯಾತ ಘಟಕ ಯುವ ಮುಖಂಡ ಮಕ್ಸುದ್, ಮಾಜಿ ಗ್ರಾ.ಪo ಮಾಜಿ ಅಧ್ಯಕ್ಷ ಗೋವಿಂದ್ ರಾಜ್, ಸಯ್ಯದ್ ರಫಿಕ್, ಸುಂಡವಾಳು ಪೃಥ್ವಿರಾಜ್ ಇದ್ದರು.


RELATED ARTICLES
- Advertisment -
Google search engine

Most Popular