ಮೈಸೂರು: ಕಾಳಿದಾಸ ರಸ್ತೆಯಲ್ಲಿರುವ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ರವರ ಮಾರ್ಗದರ್ಶನದಲ್ಲಿ ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ಇರುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ನಡೆಯುವ ಪಂಚಗರುಡೋತ್ಸವ ಕಾರ್ಯಕ್ಕೆ ಕೆ.ಅರ್.ಕ್ಷೇತ್ರದ ಶಾಸಕರು ಸಮಿತಿಯ ಕಾರ್ಯಧ್ಯಕ್ಷರಾದ ಟಿ.ಎಸ್. ಶ್ರೀವತ್ಸ ರವರು ಚಾಲನೆ ನೀಡಿದರು.
ನಂತರ ಟಿ.ಎಸ.ಶ್ರೀ ವತ್ಸ ರವರು ಮಾತನಾಡಿ, ಲೋಕ ಕಲ್ಯಾಣಕ್ಕಾಗಿ ಎರಡನೆ ಬಾರಿಗೆ ಪಂಚಗರೋಡತ್ಸವ ಸೇವೆಯನ್ನು ಪ್ರಾರಂಭಮಾಡಲಾಗಿದೆ. ಶಾಸ್ತ್ರಗಳಲ್ಲಿ ಉಲ್ಲೇಖದಂತೆ ಭಕ್ತಿ ಭಾವದಿಂದ ಸ್ವಾಮಿ ನಿಷ್ಠೆ ಇರುವ ಗರುಡನ ಮೇಲೆ ಬರುವ ಸ್ವಾಮಿಯ ದರ್ಶನ ಮಾಡುವುದರಿಂದ ನಮ್ಮ ಜೀವನ ಸಾರ್ಥಕವಾಗುತ್ತದೆ. ಆರೋಗ್ಯ ಸುಧಾರಿಸುತ್ತದೆ .ಸಜ್ಜನರ ಸಹವಾಸ ಸದಾ ಇರುತ್ತದೆ ಲೋಕ ಕಲ್ಯಾಣವಾಗಿ ಸಕಲ ಸೌಭಾಗ್ಯ ದೊರೆಯುತ್ತದೆ ಎಂದರು.
ಪಂಚ ಗರುಡೋತ್ಸವ ಸೇವೆಯು 29 ಜನವರಿ ಸಂಜೆ 5 ಗಂಟೆ ಪ್ರಾರಂಭವಾಗಿ ವೇದಿಕೆ ಕಾರ್ಯಕ್ರಮ,ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ಪಂಚಗರಡೋತ್ಸವ ಉತ್ಸವ ಮಾಡಲಾಗುವುದು.
ಈ ಸಭಾ ಕಾರ್ಯಕ್ರಮದಲ್ಲಿ ಬ್ರಹ್ಮ ತಂತ್ರ ಪರಕಾಲ ಮಠದ ಸ್ವಾಮಿ ಜೀ,ಯತಿರಾಜ ನಾರಯಣ ಜೀ ರವರು, ಸಂಸದರಾದ ಶ್ರೀ ಕೃಷ್ಣ ದತ್ತ ನರಸಿಂಹರಾಜ ಒಡೆಯರ್, ಭಾಷ್ಯಂ ಸ್ವಾಮೀ ಜೀ ಉಪಸ್ಥಿತಿ ಇರುವರು.
ಈ ಸಂಧರ್ಭದಲ್ಲಿ ಯೋಗಾ ನರಸಿಂಹನ್, ವೀರ ರಾಘವನ್, ಪ್ರದೀಪ್, ಶ್ರೀಮತಿನಾಗಲಕ್ಷಿ, ಜಾನಕಿಶೇಷಾದ್ರಿ, ರಾಧಿಕಾ, ರಾಮಸ್ವಾಮಿ ಅಯ್ಯಂಗಾರ್, ಶೇಷಾದ್ರಿ ಅಯ್ಯಂಗಾರ್, ಜಗದೀಶ್, ಪ್ರಸನ್ನ, ಶಾಂತರಾಮ್, ಆನಂದ್, ರಾಜಗೋಪಾಲ್ ಮುಂತಾದವರು ಇದ್ದರು.