ಮಂಡ್ಯ: ಸೀಮೆ ಹಸುವೊಂದು ಒಮ್ಮೆಗೆ ಮೂರು ಕರುಗಳಿಗೆ ಜನ್ಮ ನೀಡಿರುವ ಘಟನೆ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದಲ್ಲಿ ನಡೆದಿದೆ.
ಕಂಠಿ ಶಿವಣ್ಣ (ಚಂದ್ರು) ಎಂಬುವವರು ಸಾಕಿದ ಹಸು. ಇದೀಗ ಒಂದೇ ಬಾರಿಗೆ ಮೂರು ಕರುಗಳಿಗೆ ಜನ್ಮ ನೀಡಿದೆ. ಕರುಗಳು ಮುದ್ದು ಮುದ್ದಾಗಿದ್ದು ನೋಡಲು ಅಂದವಾಗಿವೆ. 3 ಹೆಣ್ಣು ಕರುಗಳಾಗಿದ್ದು, ಕರುಗಳು ಮತ್ತು ಹಸು ಸುರಕ್ಷಿತವಾಗಿದೆ ಎಂದು ಊರಿನ ಗ್ರಾಮಸ್ಥರು ತಿಳಿಸಿದ್ದಾರೆ.
ಮೂರು ಕರುಗಳಿಗೆ ಹಸು ಜನ್ಮ ನೀಡಿದ ಹಿನ್ನೆಲೆಯಲ್ಲಿ ಮಾಲೀಕ ಕಂಠಿ ಶಿವಣ್ಣ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಹಸು-ಕರು ನೋಡಲು ಅಕ್ಕಪಕ್ಕ ಊರಿನ ಜನರು ಕಂಠಿ ಶಿವಣ್ಣನ ಮನೆಗೆ ಆಗಮಿಸುತ್ತಿದ್ದಾರೆ. ಹಾಗೇ ಫೋಟೋ ಕೂಡ ತೆಗೆದುಕೊಂಡು ಹೋಗುತ್ತಿದ್ದಾರೆ.