Sunday, April 6, 2025
Google search engine

Homeರಾಜಕೀಯಪಪ್ಪುಗಳಿಂದ ಭಾರತ ಉದ್ದಾರ ಆಗದು: ಕಾಂಗ್ರೆಸ್ ಮುಖಂಡರ ವಿರುದ್ಧ ಶ್ರೀರಾಮುಲು ವಾಗ್ದಾಳಿ

ಪಪ್ಪುಗಳಿಂದ ಭಾರತ ಉದ್ದಾರ ಆಗದು: ಕಾಂಗ್ರೆಸ್ ಮುಖಂಡರ ವಿರುದ್ಧ ಶ್ರೀರಾಮುಲು ವಾಗ್ದಾಳಿ

ಬಳ್ಳಾರಿ: ಸನಾತನ ಹೆಸರಿನಲ್ಲೆ ಸನಾತನ ಎನ್ನುವ ಮಹತ್ವ ನಮ್ಮ ಧರ್ಮಕ್ಕಿದೆ. ಇಂತದರ ಬಗ್ಗೆ ಹೇಳಿಕೆ ನೀಡುವ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮಗನಿಗೇನು ಗೊತ್ತು. ಇಂಡಿಯಾ ಒಕ್ಕೂಟದ ಸದಸ್ಯ ರಾಜ್ಯ ತಮಿಳುನಾಡು ಮುಖ್ಯಮಂತ್ರಿ ಒಲೈಕೆಗೆ ಕಾವೇರಿ ನೀರು ಬಿಡುಗಡೆ ಮಾಡಿದ ರಾಜ್ಯ ಸರ್ಕಾರಕ್ಕೆ ನಮ್ಮ ರೈತರ ಹಿತ ಬೇಕಾಗಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.

ಅವರು ಇಂದು ನಗರದ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಭಾರತ ಎಂದು ಪ್ರಧಾನಿ ಮೋದಿಯವರು ನಾಮಕರ ಪ್ರಸ್ಥಾಪ ಮಾಡಿರುವುದು ಇಂಡಿಯಾ ಒಕ್ಕೂಟದ ಬಯಕಲ್ಲ, ಭಾರತ ಎನ್ನುವುದು ಮಹಾಭಾರತ ಕಾಲದಿಂದಲು ಪ್ರಚಲಿತವಿದೆ. ಭಾರತವನ್ನ ಅಭಿವೃದ್ಧಿ ಗೊಳಿಸಲು ಮೋದಿ ನಾಯಕತ್ವದಿಂದ ಮಾತ್ರ ಸಾಧ್ಯ. ಪಪ್ಪುಗಳಿಂದ ಯಾವ ಅಭಿವೃದ್ಧಿಯು ಆಗದು ಎಂದು ಹೇಳಿದರು.

ಇನ್ನು, ಕರ್ನಾಟಕದಲ್ಲಿ ಲಾಟರಿ ಮೂಲಕ ರಾಜ್ಯಸರ್ಕಾರ ಅಧಿಕಾರಕ್ಕೆ ಬಂದಂತಿದೆ ಎಂದು ಲೇವಡಿ ಮಾಡಿದ ಅವರು, ನಮ್ಮ ಸರ್ಕಾರದಲ್ಲಿ ಅನುಷ್ಠಾನಕ್ಕೆ ತಂದ ರೈತ ಪರ ಕೃಷಿಕ ಪರ, ದಲಿತ ಪರ, ಅಭಿವೃದ್ಧಿ ಪರ ಯೋಜನೆಗಳನ್ನು ಸಂಪೂರ್ಣವಾಗಿ ಕೈಬಿಟ್ಟು ಸಿದ್ದರಾಮಯ್ಯ ತುಘಲಕ್ ಸರ್ಕಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ರಾಜ್ಯದಲ್ಲಿ ಸಚಿವರುಗಳು ಬಚ್ಚಿಟ್ಟುಕೊಂಡಂತಿದೆ. ಈ ಕೂಡಲೆ ಬರ ವೀಕ್ಷಣೆ ನಡೆಸಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ದಾವಿಸಲಿ.ಇಲ್ಲವಾದಲ್ಲಿ ಬಿಜೆಪಿ ಪಕ್ಷದಿಂದ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಏಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ, ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ಜಿಲ್ಲಾ ರೈತ ಮೊರ್ಚಾ ಅಧ್ಯಕ್ಷ್ಯ ಗುರುಲಿಂಗನ ಗೌಡ, ಮುಂಡರಾದ ವಿರುಪಾಕ್ಷಗೌಡ, ಹನುಮಂತಪ್ಪ ಮತ್ತು ಮಹಿಪಾಲ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular