ಮಂಡ್ಯ : ಖಾಸಗಿ ಶಾಲೆಗಳಲ್ಲಿ ದುಬಾರಿ ಶುಲ್ಕದಿಂದ ನಿಯಂತ್ರಣ ಮಾಡಲು ರಾಜ್ಯದ ಆ ಜಿಲ್ಲೆಯ ಜಿಲ್ಲಾ ಅಧಿಕಾರಿಗಳ ನೇತೃತ್ವದಲ್ಲಿ ಇರುವ ಜಿಲ್ಲೆ ಡೇರ ಸಮಿತಿ ಸರ್ಕಾರದ ಶಿಕ್ಷಣ ಇಲಾಖೆ ಕಾಯ್ದೆಗಳ ಮಾರ್ಗಸೂಚಿ ಸುತ್ತೋಲೆಗಳನ್ನು ಪರಿಪಾಲನೆ ಮಾಡಬೇಕೆಂದು ಖಾಸಗಿ ಶಾಲೆಗಳಲ್ಲಿ ಕಟ್ಟುನಿಟ್ಟಿನ ಆದೇಶ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತಸಂಘದ ಮುಖಂಡರಾದ ಕಿರಂಗೂರು ಪಾಪು ಮೋಹನ್‌ಕುಮಾರ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಗಳಲ್ಲಿ ಖಾಸಗಿ ಶಾಲೆಗಳು ಲಂಗುಲಗಾಮಿಲ್ಲದೆ ಕೆಲವು ಶಾಲೆಗಳು ಪ್ರೀ ಕೆಜಿ, ಎಲ್‌ಕೆಜಿ, ಯುಕೆಜಿಗಳು, ಇನ್ನಿತರ ತರಗತಿಗಳು ಕೆಲವು ಸರ್ಕಾರದ ಹಾಗೂ ಶಿಕ್ಷಣ ಇಲಾಖೆಗಳ ಅನುಮತಿ ಪಡೆಯದೇ ಶಾಲೆಗಳನ್ನು ತೆರೆದಿರುವುದನ್ನು ಪತ್ತೆಹಚ್ಚಲು ಜಿಲ್ಲಾಮಟ್ಟದ ಅಧಿಕಾರಿಗಳು, ಶಿಕ್ಷಣ ಅಧಿಕಾರಿ, ವಿಷಯ ನಿರೀಕ್ಷಕರನ್ನು ಒಳಗೊಂಡಂತೆ ಒಂದು ತಂಡ ರಚನೆ ಮಾಡುವಂತೆ ಒತ್ತಾಯಿಸಿದ್ದಾರೆ.
ಖಾಸಗಿ ಶಾಲಾ-ಕಾಲೇಜುಗಳಲ್ಲಿ ದುಬಾರಿ ಶುಲ್ಕಗಳ ಬರೆ, ಬಟ್ಟೆ, ಬ್ಯಾಗ್, ಪುಸ್ತಕ, ವಾಹನಗಳ ಶುಲ್ಕದ ಬಗ್ಗೆ ಶಿಕ್ಷಣ ಇಲಾಖೆ ಮಾರ್ಗಸೂಚಿ ಕಾಯ್ದೆಗಳ ಸುತ್ತೋಲೆ ಪ್ರಕಾರ ಶಾಲೆಯ ಆಡಳಿತ ಮಂಡಳಿಗಳ ನಡೆಯುತ್ತಿದ್ದೆಯೇ ಅಥವಾ ಇಲಾಖೆಗಳ ಸುತ್ತೋಲೆಗಳನ್ನು ಗಾಳಿಗೆ ತೂರಿ ದುಬಾರಿ ಶುಲ್ಕ ವಿಧಿಸುವ ಮೂಲಕ ಪೋಷಕರ ಜೇಬಿಗೆ ಕತ್ತರಿ ಹಾಕುವ ಮೂಲಕ ಹಗಲುದರೋಡೆಗೆ ಇಳಿದಿವೆ. ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ದಾಖಲಿಸಿದರೆ ಆ ಶುಲ್ಕ, ಈ ಶುಲ್ಕ ಎಂದು ಹಣವನ್ನು ರಾಜಾರೋಷವಾಗಿ ಪೀಕುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ.
ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಆಟದ ಮೈದಾನಗಳು ಇರುವುದಿಲ್ಲ, ಸ್ವಚ್ಛತೆಯಂತೂ ಇಲ್ಲಿ ಕಾಣದಾಗಿದೆ. ಹಂದಿಗೂಡಿನಂತೆ ಶಾಲಾ ಕೊಠಡಿಗಳು ಇರುತ್ತವೆ. ಬೀದಿಗೊಂದು-ಗಲ್ಲಿಗೊಂದು ನಾಯಿಕೊಡೆಗಳಂತೆ ಖಾಸಗಿ ಶಾಲೆಗಳ ಆರ್ಭಟ ಜೋರಾಗುತ್ತಿವೆ. ಪೋಷಕರು ಚಿನ್ನಾಭರಣ ಮಾರಿ ಇಲ್ಲವೇ ಕೈಸಾಲ ಮಾಡಿಕೊಂಡುಮಕ್ಕಳನ್ನು ಸುಶಿಕ್ಷಿತರನ್ನಾಗಿಸುವ ಮಾಡುವ ಸಲುವಾಗಿ ಖಾಸಗಿ ಶಾಲೆಗಳಲ್ಲಿ ಓದಿಸುವ ದುರ್ಗತಿ ಬಂದೊದಗಿದೆ.
ಖಾಸಗಿ ಶಾಲಾ-ಕಾಲೇಜುಗಳಲ್ಲಿ ತಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸಾವಿರಾರು, ಲಕ್ಷಾಂತರ ವಾರ್ಷಿಕವಾಗಿ ಖರ್ಚು ಮಾಡುವ ಪರಿಸ್ಥಿತಿ ಎಲ್ಲೆಡೆ ಎಗ್ಗಿಲ್ಲದೇ ವ್ಯಾಪಕವಾಗಿ ನಡೆಯುತ್ತಿವೆ. ಖಾಸಗಿ ಶಾಲೆಗಳ ಆಡಳಿತ ಮಂಡಳಿ ವಸೂಲಿ ದಂಧೆಯೊಂದೇ ಕಾಯಕ ಎಂದು ಪೋಷಕರನ್ನು ಸುಲಿಯುವುದೇ ತಮ್ಮ ಗುರಿ ಎಂದು ವರ್ತಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ, ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಖಾಸಗಿ ಶಾಲಾ-ಕಾಲೇಜುಗಳ ದುಬಾರಿ ಶುಲ್ಕವನ್ನು ಇಳಿಕೆ ಮಾಡುವ ಮೂಲಕ ಶಿಕ್ಷಣವಂಚಿತ ಮಕ್ಕಳು ಹಾಗೂ ಬಡಮಕ್ಕಳಪೋಷಕರ ಪರವಾಗಿ ಕಿರಂಗೂರು ಪಾಪು ಕಳಕಳಿಯಿಂದ ಒತ್ತಾಯಿಸಿದ್ದಾರೆ.