Friday, April 11, 2025
Google search engine

Homeಸ್ಥಳೀಯಫೆ.1 ಮತ್ತು 2 ರಂದು ಪರಿದೃಶ್ಯ ಚಿತ್ರೋತ್ಸವ: ಪೋಸ್ಟರ್ ಬಿಡುಗಡೆ

ಫೆ.1 ಮತ್ತು 2 ರಂದು ಪರಿದೃಶ್ಯ ಚಿತ್ರೋತ್ಸವ: ಪೋಸ್ಟರ್ ಬಿಡುಗಡೆ

ಮೈಸೂರು: ಮೈಸೂರು ಸಿನಿಮಾ ಸೊಸೈಟಿ ಮತ್ತು ಭಾರತೀಯ ಚಿತ್ರ ಸಾಧನದ ಸಹಯೋಗದೊಂದಿಗೆ ಫೆಬ್ರವರಿ 1ಮತ್ತು 2ರಂದು ಪರಿದೃಶ್ಯ ಚಿತ್ರೋತ್ಸವ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ.

ನಗರದ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಕಾವೇರಿ ಮತ್ತು ನಳ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ, ಬರಹಗಾರ ಮನೇಕ್ ಪ್ರೇಮಚಂದ್ ಮತ್ತು ಕೆಎಸ್ ಒಯು ಕುಲಪತಿ ಶರಣಪ್ಪ ಹಲಸೆ ಉದ್ಘಾಟಿಸಲಿದ್ದಾರೆ. ಪೃಥ್ವಿ ಕೊಣನೂರ್, ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ, ಹಾಗೂ ಇನ್ನಿತರ ಶಾಸಕರು ಉಪಸ್ಥಿತರಿರಲಿದ್ದಾರೆ.

ಪರಿದೃಶ್ಯ ಚಿತ್ರೋತ್ಸವಕ್ಕೆ ಪ್ರಪಂಚದಾದ್ಯಂತ 109 ದೇಶಗಳಿಂದ 3123 ಕಿರು ಮತ್ತು ಸಾಕ್ಷ್ಯಚಿತ್ರಗಳು ಬಂದಿವೆ. ಈ ಚಿತ್ರಗಳಲ್ಲಿ ಆಯ್ಕೆಯಾದ ಸಿನಿಮಾಗಳಿಗೆ 26 ವರ್ಗಗಳ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಭಾರತದಿಂದ 985, ಇರಾನ್, 42, ಫ್ರಾನ್ಸ್ 138, ಇಟಲಿ 5, ಜರ್ಮನಿ 137, ರಷ್ಯಾದಿಂದ 108 ಸೇರಿ 3123 ಸಿನಿಮಾಗಳು ಬಂದಿವೆ. ಕನ್ನಡದ ಒಟ್ಟು 73 ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳು ಸೇರಿವೆ.

ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕೇಂದ್ರ ಸಚಿವ ಡಾ.ಎಲ್ ಮುರುಗನ್ ಅವರು ಉಪಸ್ಥಿತರಿರಲಿದ್ದಾರೆ. ಈ ಕುರಿತ ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಮೈಸೂರು ಸಿನಿಮಾ ಸೊಸೈಟಿ ಕಾರ್ಯದರ್ಶಿ ಪದ್ಮವಾತಿ ಭಟ್, ಸಂಯೋಜಕ ಚೇತನ ಜಿ.ಅರ್, ಸದಸ್ಯರುಗಳಾದ ಜೋಗಿ ಮಂಜು, ಸೀಮಾ ಬುರುಡೆ, ವೇಣುಗೋಪಾಲ್ ಇದ್ದರು.

RELATED ARTICLES
- Advertisment -
Google search engine

Most Popular