Tuesday, April 8, 2025
Google search engine

Homeಕ್ರೀಡೆಪ್ಯಾರಿಸ್ ಒಲಿಂಪಿಕ್ಸ್‌: ಶೂಟಿಂಗ್‌ ನಲ್ಲಿ ಚಿನ್ನ ಗೆದ್ದ ಚೀನಾ

ಪ್ಯಾರಿಸ್ ಒಲಿಂಪಿಕ್ಸ್‌: ಶೂಟಿಂಗ್‌ ನಲ್ಲಿ ಚಿನ್ನ ಗೆದ್ದ ಚೀನಾ

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮೊದಲ ಚಿನ್ನ ಗೆದ್ದ ಚೀನಾ ಶುಭಾರಂಭ ಮಾಡಿಕೊಂಡಿದೆ.

ಶೂಟಿಂಗ್‌ ‌ನ 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಚೀನಾದ ಸ್ಪರ್ಧಿಗಳು ಸ್ವರ್ಣ ಸಾಧನೆ ಮಾಡಿದ್ದಾರೆ.

ಚೀನಾದ ಹುವಾಂಗ್ ಯುಟಿಂಗ್ ಮತ್ತು ಶೆಂಗ್ ಲಿಹಾವೊ ಜೋಡಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಫೈನಲ್‌ನಲ್ಲಿ 16-12ರ ಅಂತರದಲ್ಲಿ ಚೀನಾದ ಜೋಡಿ ರಿಪಬ್ಲಿಕ್ ಆಫ್ ಕೊರಿಯಾ ವಿರುದ್ಧ ಜಯ ಗಳಿಸಿದೆ. 

ಈ ವಿಭಾಗದಲ್ಲಿ ರಿಪಬ್ಲಿಕ್ ಆಫ್ ಕೊರಿಯಾದ ಕೆಯುಮ್ ಜಿ-ಹೈಯಾನ್ ಮತ್ತು ಪಾರ್ಕ್ ಹಾ-ಜುನ್ ಜೋಡಿ ಬೆಳ್ಳಿ ಮತ್ತು ಕಜಕಸ್ತಾನದ ಅಲೆಕ್ಸಾಂಡ್ರಾ ಲೆ ಮತ್ತು ಇಸ್ಲಾಂ ಸತ್ಪಯೇವ್ ಜೋಡಿ ಕಂಚಿನ ಪದಕ ಗೆದ್ದಿದೆ.

ಮೂರು ವರ್ಷಗಳ ಹಿಂದಿನ ಟೊಕಿಯೊ ಒಲಿಂಪಿಕ್ಸ್‌ನಲ್ಲೂ ಈ ವಿಭಾಗದಲ್ಲಿ ಚೀನಾ ದೇಶದ ಸ್ಪರ್ಧಿಗಳೇ ಚಿನ್ನದ ಪದಕ ಜಯಿಸಿದ್ದರು. 

ಪ್ಯಾರಿಕ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಶುಕ್ರವಾರ ಅದ್ದೂರಿ ಚಾಲನೆ ದೊರಕಿತ್ತು. ಶೂಟಿಂಗ್ ವಿಭಾಗದ ಸ್ಪರ್ಧೆಗಳು ಈಗಾಗಲೇ ಆರಂಭಗೊಂಡಿವೆ.

RELATED ARTICLES
- Advertisment -
Google search engine

Most Popular