ಮಂಡ್ಯ:ಪರಿಷತ್ ಚುನಾವಣೆ ಇದು ಚುನಾವಣೆ ಅಲ್ಲ, ಇದೊಂತರ ದರೋಡೆ.ಎಲ್ಲಾ ಚುನಾವಣೆಗಳು ಇದೇ ಪರಿಸ್ಥಿತಿಯಲ್ಲಿ ಬಂದಿದೆ. ಶಿಕ್ಷಕರ ಚುನಾವಣೆ ಈ ಪರಿಸ್ಥಿತಿಗೆ ಬರಬಾರದು. ಶಿಕ್ಷಕರು ಬಹಳ ದೊಡ್ಡವರು ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹಾದೇವಾ, ಗುರು ಸಾಕ್ಷಾತ್ ಬ್ರಹ್ಮ.ಗುರುಗಳನ್ನ ಕೆಡಸಿ ಆಳುಮಾಡಿದೆ ವ್ಯವಸ್ಥೆ. ನಿಜಕ್ಕೂ ಬಹಳ ನೋವಾಗುತ್ತೆ ಕಣ್ಣಲ್ಲಿ ನೀರು ಬರುತ್ತೆ ಎಂದು ಮಂಡ್ಯದಲ್ಲಿ ವಾಟಾಳ್ ನಾಗರಾಜ್ ನೋವಿನ ನುಡಿಗಳನ್ನು ನಾಡಿದ್ದಾರೆ.
ಶಿಕ್ಷಕರಿಗೆ ಬಹಳ ಕೆಲಸ ಇದೆ ಯಾರು ಸರಿಯಾಗಿ ಅವರ ಕೆಲಸ ಮಾಡ್ತಿಲ್ಲ.ಎಣಿಕೆ ಬಳಿಕ ಯಾವ ರೀತಿ ಮತ ಹಾಕಿದ್ದಾರೆ ಅನ್ನೋದು ಗೊತ್ತಾಗುತ್ತೆ.ನಿಜವಾದ ಶಿಕ್ಷಕರಾಗಿದ್ರೆ ಪ್ರಾಶಸ್ತ್ಯ ಮತ ಯಾರಿಗೆ ಹಾಕಿದ್ದಾರೆ ನೋಡಬೇಕಿದೆ.
ಇತರಹವಾದ್ರೆ ಚುನಾವಣೆ ಮೇಲೆ ನಂಬಿಕೆ ಹೋಗುತ್ತೆ. ಮತದಾರರಿಗೆ 5 ಸಾವಿರ ಕೊಡ್ತಾರೆ.
2.15 ಪೈಸೆಗೆ ಕಡಲೆಕಾಯಿ ಬರಲ್ಲ. 9 ಸಾವಿರ ಕೊಟ್ಟರೆ 4.15 ಪೈಸೆ ಮಸಾಲ ದೋಸೆ ಬರಲ್ಲ. ಈ ಪರಿಸ್ಥಿತಿ ನೋಡಿದ್ರೆ ನೋವಾಗುತ್ತೆ ಶಿಕ್ಷಕರ ದಾರಿ ತಪ್ಪಿಸಲು ದೊಡ್ಡ ದಾಳಿ ವಿಧಾನ ಸಭೆಯಲ್ಲಿ ಒಂದು ಭ್ರಷ್ಟಾಚಾರ, ಪಾರ್ಲಿಮೆಂಟ್ ನಲ್ಲಿ ಭ್ರಷ್ಟಾಚಾರ, ರಾಜ್ಯಸಭೆಯಲ್ಲಿ ಒಂದೊಂದು ಭ್ರಷ್ಟಾಚಾರ.ದುಡ್ಡು ದುಡ್ಡು ಎಲ್ಲಿ ನೋಡಿದರೂ ಸಂವಿಧಾನಕ್ಕೆ ಅನ್ಯಾಯ.
ಮೇಲ್ಮನೆಗೆ ಸದಸ್ಯರಾಗಲು ಎತ್ತರವಾದ ವ್ಯಕ್ತಿ ಇರಬೇಕು.ಇವತ್ತು ರಿಯಲ್ ಎಸ್ಟೇಟ್ ನವರು ಹಣ ವಂತರು ಚುನಾವಣೆಗೆ ಬಂದಿದ್ದಾರೆ.ಕಾಂಗ್ರೆಸ್, ಜೆಡಿಎಸ್-ಬಿಜೆಪಿ ದುಡ್ಡು ಇರುವವರಿಗೆ ಟಿಕೆಟ್ ಕೊಡ್ತಾರೆ.ಇದು ಒಳ್ಳೆಯದಲ್ಲ ಈ ಚುನಾವಣೆಗಳನ್ನ ನಿಲ್ಲಿಸಬೇಕು.ಚುನಾವಣಾ ಆಯೋಗ ಏನು ಮಾಡ್ತಿದೆ?ಬಹಿರಂಗವಾಗಿ ದುಡ್ಡು ಹಂಚಿಕೆ ಮಾಡಿದ್ರು ಆಯೋಗ ಸತ್ತು ಹೋಗಿದೆ. ಪ್ರಮಾಣಿಕವಾಗಿ ಒಂದು ಕಾಫಿ ಕೊಟ್ಟಿಲ್ಲ.ಓಟ್ ಹಾಕಿದ್ರೆ ನಿಮ್ಮ ಪರ ಕೆಲಸ ಮಾಡ್ತೇನೆ ಅಂತ ಹೇಳಿದ್ದೇನೆ. ಶಿಕ್ಷಕರನ್ನ ಎತ್ತರವಾಗಿ ಕಾಣುತ್ತೇನೆ.ಸೂರ್ಯ ಚಂದ್ರ ರಷ್ಟೆ ಎತ್ತರವಾಗಿರುವವರು ನಾವು ದಾರಿ ತಪ್ಪಿಸಬಾರದು. ಬಹಳ ಅನ್ಯಾಯ, ಮೋಸ ನಡೆದಿದೆ. ಲೂಟಿ ಮಾಡಿದ್ದಾರೆ, ಚುನಾವಣಾ ಆಯೋಗಕ್ಕೆ ಗೌರವ ಇದ್ರೆ ಕ್ರಮ ವಹಿಸಲಿ ಎಂದು ಹೇಳಿದರು.