ಬೆಂಗಳೂರು: ಹೊಸ ಪಾರ್ಕಿಂಗ್ ಶುಲ್ಕ ಹಾಗೂ ಕಸಕ್ಕೆ ತೆರಿಗೆ ವಿಧಿಸಲು ನಿರ್ಧರಿಸಿರುವ ನಮ್ಮ ನಿರ್ಧಾರ ಸಾರ್ವಜನಿಕರಿಗೆ ಹೊರೆಯಾಗುವುದಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ಗಿರಿನಾಥ್ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಪೌಂಡ್ ಒಳಗೆ ವಾಹನಗಳ ಪಾರ್ಕಿಂಗ್ ಗೆ ತೆರಿಗೆ ವಿಚಾರ, ವಾಹನಗಳ ತೆರಿಗೆ ಬಗ್ಗೆ ಸ್ಪಷ್ಟನೆ ನೀಡಿದರು. ಈ ಹಿಂದೆ ಪಾರ್ಕಿಂಗ್ ಶುಲ್ಕ ಅಂತ ಶೇ.50 ರಷ್ಟು ಹಣ ಕಟ್ಟಲಾಗ್ತಿತ್ತು.
ಈಗ ಅದು ಜಾಸ್ತಿಯಿದೆ ಅಂತಾ ಆಕ್ಷೇಪಗಳು ಕೇಳಿಬಂದಿವೆ. ಹಿಂದೆ ಜೋನ್ ಗಳ ಆಧಾರದ ಮೇಲೆ ಶುಲ್ಕ ನಿಗದಿಯಾಗಿತ್ತು ಆಗ ನಮಗೆ 211 ಕೋಟಿ ರೂ.ಗಳ ಅದಾಯ ಬರುತ್ತಿತ್ತು. ಆದರೆ, ಹೊಸ ಪದ್ದತಿಯಿಂದ 43 ಕೋಟಿ ಅಷ್ಟು ಆದಾಯ ಕಡಿಮೆಯಾಗ್ತಿದೆ ಎಂದು ಅವರು ಮಾಹಿತಿ ನೀಡಿದರು.
ನಮಗೆ ಕೋಟಿ ಕೋಟಿ ಹೊರೆಯಾದರೂ ಕೂಡ ಜನರಿಗೆ ಸಹಾಯವಾಗಲಿ ಅಂತಾ ಹೊಸ ವ್ಯವಸ್ಥೆ ಮಾಡಿದ್ದೇವೆ ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.
ಅದೇ ರೀತಿ ಕಸ ಸಂಗ್ರಹ ತೆರಿಗೆ ವಿಚಾರವಾಗಿ ಸಾಕಷ್ಟು ಚರ್ಚೆಯಾಗ್ತಿದೆ. 1986ರ ಪರಿಸರ ಸಂರಕ್ಷಣೆ ಕಾಯ್ದೆಯಲ್ಲಿ ಬೈಲಾ ಇದೆ. ಬಿಬಿಎಂಪಿಯಲ್ಲಿ 2020ರಲ್ಲಿ ಬೈಲಾ ಮಾಡಿ, ತ್ಯಾಜ್ಯ ಉತ್ಪತಿಯ ಮೇಲೆ ರೇಟ್ ನಿಗದಿ ಮಾಡಿದ್ದೇವೆ ಎಂದು ಅವರು ಹೇಳಿದರು.
2020ರಲ್ಲಿ ಜನಪ್ರತಿನಿಧಿಗಳು ಇದ್ದಾಗಲೇ ಇದು ರೆಡಿಯಾಗಿತ್ತು. ಜನಸಾಮಾನ್ಯರ ಮೇಲೆ ಯಾವ ರೀತಿ ತೆರಿಗೆ ಹಾಕಬೇಕು ಪ್ಲಾನ್ ಆಗಿತ್ತು. ಈಗಾಗಲೇ ಬೇರೆ ಬೇರೆ ರಾಜ್ಯ, ಲೋಕಲ್ ಆಡಳಿತದಲ್ಲೂ ಈ ಪದ್ಧತಿ ಜಾರಿಯಿದೆ ಎಂದು ಅವರು ಸಮಜಾಯಿಷಿ ನೀಡಿದರು.
ಪುಣೆ, ಮುಂಬೈ ಸೇರಿ ಹಲವೆಡೆ ಈಗಾಗಲೇ ಕಸಕ್ಕೆ ತೆರಿಗೆ ವಿಧಿಸುವ ಪದ್ಧತಿ ಚಾಲ್ತಿಯಲ್ಲಿದೆ. 2020ರಲ್ಲಿ ಕೋವಿಡ್ ಬಂದ ಹಿನ್ನೆಲೆ ನಾವು ಜಾರಿ ಮಾಡೋಕೆ ಆಗಿರಲಿಲ್ಲ ಈಗ ಸರ್ಕಾರದ ಅನುಮತಿ ಪಡೆದು ಜಾರಿ ಮಾಡುತ್ತಿದ್ದೇವೆ ಎಂದು ಆಯುಕ್ತರು ವಿವರಿಸಿದರು.
ಆದ್ರೆ ಬೈಲಾಗಿಂತ ಶೇ.50 ರಷ್ಟು ಕಡಿಮೆ ತೆರಿಗೆ ವಸೂಲಿಗೆ ಜಾರಿ ಮಾಡುತ್ತಿದ್ದೇವೆ. ಕಮರ್ಷಿಯಲ್, ಬಲ್ಕ್
ತ್ಯಾಜ್ಯ ಉತ್ಪಾದಕರಿಂದ ಚಾರ್ಜ್ ಮಾಡಿದ್ದೇವೆ. ರೂಲ್ಸ್ ಮಾಡೋದು 2020ರಲ್ಲೇ ಆಗಿತ್ತು, ಜಾರಿಯಾಗಿರಲಿಲ್ಲ. ಈಗ ಬೈಲಾ ಇದ್ದಿದ್ದರಿಂದ ಜಾರಿ ಮಾಡಿದ್ದೇವೆ. ಈಗ ಸಂಗ್ರಹವಾಗೋ ಹಣದಿಂದ ಕಸ ವಿಲೇವಾರಿ ನಿರ್ವಹಣೆ ಖರ್ಚು ನಿಭಾಯಿಸ್ತೀವೆ ಎಂದು ಅವರು ತಿಳಿಸಿದರು.