Friday, April 4, 2025
Google search engine

Homeಅಪರಾಧಸಂಸತ್ ಬಾಂಬ್ ಸ್ಪೋಟ ಪ್ರಕರಣ: ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ

ಸಂಸತ್ ಬಾಂಬ್ ಸ್ಪೋಟ ಪ್ರಕರಣ: ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ

ಹೊಸದಿಲ್ಲಿ : ದೇಶಾದ್ಯಂತ ತಲ್ಲಣ ಸೃಷ್ಠಿಸಿದ್ದ ಸಂಸತ್‌ನಲ್ಲಿ ಹೊಗೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿದ್ದು, ಮೈಸೂರಿನ ಡಿ.ಮನೋರಂಜನ್ ಕೃತ್ಯದ ಸೂತ್ರಧಾರ ಎಂದು ದೆಹಲಿ ಪೊಲೀಸರು ಉಲ್ಲೇಖಿಸಿದ್ದಾರೆ.

೨೦೨೩ರ ಡಿಸೆಂಬರ್ ೧೩ ರಂದು ನಡೆದಿದ್ದ ಸಂಸತ್ ಭದ್ರತಾ ಲೋಪ ಪ್ರಕರಣದಲ್ಲಿ ಡಿ.ಮನೋರಂಜನ್, ಲಲಿತ್ ಝಾ, ಅಮೋಲ್ ಶಿಂಧೆ, ಮಹೇಶ್ ಕುಮಾವತ್, ಸಾಗರ್ ಶರ್ಮಾ ಮತ್ತು ನೀಲಂ ಆಜಾದ್ ಅವರು ಆರೋಪಿಗಳಾಗಿದ್ದಾರೆ. ‘ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಪರಿಣಾಮಕಾರಿಯಾಗಿಲ್ಲ ಮತ್ತು ಅದನ್ನು ಬದಲಾಯಿಸಬೇಕಾಗಿದೆ’ ಎಂಬ ಸಂದೇಶವನ್ನು ರವಾನಿಸಲು ಆರೋಪಿಗಳು ಬಯಸಿದ್ದರು. ಹಾಗೂ ಅಲ್ಪ ಸಮಯದಲ್ಲೇ ಜಾಗತಿಕವಾಗಿ ಖ್ಯಾತಿ ಗಳಿಸುವ ಪ್ರಯತ್ನ ಮಾಡಿದ್ದರು ಎಂದು ಮೂಲಗಳು ಹೇಳಿವೆ.

ಸಾಮಾಜಿಕ ಮಾಧ್ಯಮಗಳ ಮೂಲಕ ಪರಸ್ಪರ ಪರಿಚಯವಾಗಿದ್ದ ಆರೋಪಿಗಳು, ತಮ್ಮ ಸಂಚನ್ನು ಕಾರ್ಯಗತಗೊಳಿಸಲು ಸುಮಾರು ಎರಡು ವರ್ಷಗಳ ಕಾಲ ತಯಾರಿ ನಡೆಸಿ, ಡಿಸೆಂಬರ್ ೧೩, ೨೦೨೩ ರಂದು ದೆಹಲಿಯ ಸಂಸತ್ ಭವನದಲ್ಲಿ ಹೊಗೆ ಬಾಂಬ್ ಸ್ಫೋಟ ನಡೆಸಿ, ದಾಂಧಲೆ ಎಬ್ಬಿಸಿದ ಆರೋಪಿಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತರಲು ಪ್ರಯತ್ನಿಸಿದ್ದರು.

ಎಲ್ಲ ಆರೋಪಿಗಳು ಮೈಸೂರಿನ ಮನೋರಂಜನ್ ಗೆಳೆಯನ ಮನೆಯಲ್ಲಿ ಮೊದಲ ಸಭೆ ನಡೆಸಿದ್ದರು. ಬಳಿಕ ೨೦೨೨ರಲ್ಲಿ ಗುರುಗ್ರಾಮದಲ್ಲಿ ಎರಡನೇ ಸಭೆ ನಡೆದಿತ್ತು. ದಿಲ್ಲಿಯ ಪಹಾಢ್ ಗಂಜ್‌ನಲ್ಲಿ ಮೂರನೇ ಸಭೆ ನಡೆಸಿದ್ದ ಆರೋಪಿಗಳು ಸತತ ಎರಡು ವರ್ಷಗಳ ಕಾಲ ಪ್ರಯತ್ನಪಟ್ಟು ಸಂಸತ್‌ನಲ್ಲಿ ಸ್ಮೋಕ್ ಬಾಂಬ್ ಸ್ಪೋಟಕ್ಕೆ ಯತ್ನಿಸಿದ್ದರು. ಈ ಮೂಲಕ ಹಿಂಸಾತ್ಮಕ ವಿಡಿಯೋಗಳನ್ನು ಪ್ರದರ್ಶಿಸಿ ಸಂಘಟನೆ ಹುಟ್ಟುಹಾಕುವ ಯತ್ನಕ್ಕೆ ಮುಂದಾಗಿದ್ದರು ಎಂದು ಚಾರ್ಜ್ ಶೀಟ್‌ನಲ್ಲಿ ತಿಳಿಸಲಾಗಿದೆ.

ಆರು ಆರೋಪಿಗಳ ವಿರುದ್ಧ ಪೊಲೀಸರು ಜೂನ್ ೭ರಂದು ಸುಮಾರು ೧೦೦೦ ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದರು. ಜುಲೈನಲ್ಲಿ ಹೆಚ್ಚುವರಿ ಆರೋಪ ಪಟ್ಟಿಯನ್ನೂ ಸಲ್ಲಿಸಿದ್ದರು. ಸಂಸತ್ ಮೇಲಿನ ದಾಳಿ ಪ್ರಕರಣದ ೨೨ನೇ ವಾರ್ಷಿ ಕೋತ್ಸವದ ಸಂದರ್ಭದಲ್ಲಿ ಸಾಗರ್ ಶರ್ಮಾ ಮತ್ತು ಮನೋರಂಜನ್ ಲೋಕಸಭೆಯ ಸಂದರ್ಶಕರ ಗ್ಯಾಲರಿ ಯಿಂದ ಸದನದೊಳಗೆ ಜಿಗಿದಿದ್ದರು. ಘೋಷಣೆಗಳನ್ನು ಕೂಗುತ್ತಾ ‘ಸ್ಟೋಕ್ ಕ್ಯಾನ್’ ಹಾರಿಸಿ ದಾಂದಲೆ ಎಬ್ಬಿಸಿದ್ದರು. ಅದೇ ಸಮಯಕ್ಕೆ ಸಂಸತ್ ಭವನದ ಹೊರಗೆ ಅಮೋಲ್ ಶಿಂಧೆ ಮತ್ತು ನೀಲಂ ಆಜಾದ್ ಬಣ್ಣದ ಹೊಗೆ ಹಾರಿಸಿ ಘೋಷಣೆ ಕೂಗಿದ್ದರು.

RELATED ARTICLES
- Advertisment -
Google search engine

Most Popular