ಹನೂರು: ಬಂಡಳ್ಳಿ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಸಂಸತ್ ಚುನಾವಣೆ ಪ್ರಕ್ರಿಯೆ ಜರುಗಿತು.
2023-24ನೇ ಸಾಲಿನಲ್ಲಿ ತಮ್ಮ ಕಾಲೇಜಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಪ್ರತಿನಿಧಿ ಆಯ್ಕೆ ಸಂಬಂಧ ಚುನಾವಣೆ ನಡೆಸಲಾಯಿತು.
ಒಟ್ಟು ನೋಟ ಸಹಿತ ಏಳು ಅಭ್ಯರ್ಥಿ ಗಳು ಕಣದಲ್ಲಿದ್ದು, ಬಾಲಕರ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ನಿಂಗರಾಜು ಎಂ, ಬಾಲಕಿಯರ ವಿಭಾಗದಲ್ಲಿ ಶಿವರಂಜನಿ ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ಪ್ರಾಂಶುಪಾಲ ಮುತ್ತುರಾಜ್. ಎಂ., ಮಹೇಂದ್ರ ಎಚ್.ಸಿ. ನಾಗರಾಜುಕೆ, ನಾಗಸಂದ್ರ, ರಾಜೇಶ್, ಎ. ಆರ್., ನರೇಂದ್ರ ನಾಥ್, ಆರ್. ಪಿ ಆನಂದ್ ಆರ್, ಬಸವರಾಜ್, ಮಹಾದೇವ ಶೆಟ್ಟಿ ಮಹೇಂದ್ರ ಎಂ, ಕಾರ್ಯನಿರ್ವಹಿಸಿದರು.