ಬೆಂಗಳೂರು: ಪಾರ್ಟ್ ಟೈಂ ಜಾಬ್ ಹುಡುಕುತ್ತಿರುವವರಿಗೆ ವೀರಲೋಕ ವತಿಯಿಂದ ಉತ್ತಮ ಅವಕಾಶವಿದ್ದು, ಪ್ರತಿ ಭಾನುವಾರ ಕನ್ನಡ ಪುಸ್ತಕಗಳನ್ನ ಮಾರಾಟ ಮಾಡಿ ಕನ್ನಡ ಪುಸ್ತಕಗಳನ್ನ ಓದುಗರಿಗೆ ತಲುಪಿಸುವ ಮೂಲಕ ಹಣ ಗಳಿಸಬಹುದಾಗಿದೆ.
ಹೌದು ಮಾಡ್ಬೇಕಾದ್ದು ಇಷ್ಟೇ… ಬೆಂಗಳೂರಿನ ಪಾರ್ಕು, ಹೋಟೆಲ್ ಸೇರಿದಂತೆ ಜನದಟ್ಟಣೆಯ ಪ್ರದೇಶಗಳಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ 6.30 ಯಿಂದ 10.30 ತನಕ ಪುಸ್ತಕದ ಸ್ಟಾಂಡ್ ಇಟ್ಟು ಕನ್ನಡ ಪುಸ್ತಕ ಮಾರಬೇಕು.
ಪ್ರತಿ ಭಾನುವಾರ ಸುಮಾರು ನೂರು ಕಡೆ ಈ ತರ ಕನ್ನಡ ಪುಸ್ತಕ ಓದು ಅಭಿಯಾನ ಆರಂಭಿಸುವ ಯೋಚನೆ ನಮ್ಮದು. ಲಾಭ ಇದರ ಉದ್ದೇಶವಲ್ಲ! ಯಾವುದು ಕಣ್ಣಿಗೆ ಕಾಣುವುದೋ ಅದೇ ಚಾಲ್ತಿಯಲ್ಲಿರುವುದು ಎಂಬುದು ನಮ್ಮ ಉದ್ದೇಶ. ಮೂರೂವರೆಯಿಂದ ನಾಲ್ಕುಗಂಟೆಯ ಕೆಲಸಕ್ಕಾಗಿ ಪ್ರಯಾಣದ ವೆಚ್ಚಗಳನ್ನು ಕಳೆದು ತಲಾ ರೂ.750/- ಪಾಕೆಟ್ ಮನಿ ಕೂಡ ಸಿಗುತ್ತೆ ಎಂದು ವೀರಲೋಕ ಟೀಮ್ ತಿಳಿಸಿದೆ.
ಇದು ಅವಮಾನದ ಕೆಲಸವೇನಲ್ಲ, ಅಭಿಮಾನದ ಕೆಲಸ ಜೊತೆಗೆ ಆದಾಯದ ಕೆಲಸವೂ ಹೌದು. ಆದ್ದರಿಂದ ಯಾರಿಗಾದ್ರೂ ಅನುಕೂಲವಾಗಬಹುದು ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ಈ ಅವಕಾಶ ಬೆಂಗಳೂರಿನಲ್ಲಿರುವವರಿಗೆ ಮಾತ್ರ. ಹೆಚ್ಚಿನ ಮಾಹಿತಿಗಾಗಿ 7022122121 ಈ ನಂಬರ್ ಗೆ ಸಂಪರ್ಕಿಸಬಹುದು.