ದಿನವಿಡಿ ಬಿಡುವಿಲ್ಲದೆ ವರದಿಯಲ್ಲಿ ನಿರತರಾಗಿದ್ದ ಪತ್ರಕರ್ತರು ಪತ್ರಿಕಾ ದಿನಾಚರಣೆಯ ಪ್ರಯುಕ್ತ ಪತ್ರಕರ್ತರು ಮತ್ತು ಕುಟುಂಬದವರ ಮಕ್ಕಳನ್ನು ಕರೆದು ಒಂದು ದಿನ ಕ್ರೀಡಾಕೂಟವನ್ನು ಏರ್ಪಡಿಸಿರುವುದು ಬಹಳ ಸಂತೋಷದ ವಿಷಯವಾಗಿದೆ ಎಂದು ತಹಸಿಲ್ದಾರ್ ಎಂ ಜಿ ಸಂತೋಷ್ ಕುಮಾರ್ ತಿಳಿಸಿದರು.
ಕೆ.ಆರ್. ನಗರ: ದಿನವಿಡಿ ಬಿಡುವಿಲ್ಲದೆ ವರದಿಯಲ್ಲಿ ನಿರತರಾಗಿದ್ದ ಪತ್ರಕರ್ತರು ಪತ್ರಿಕಾ ದಿನಾಚರಣೆಯ ಪ್ರಯುಕ್ತ ಪತ್ರಕರ್ತರು ಮತ್ತು ಕುಟುಂಬದವರ ಮಕ್ಕಳನ್ನು ಕರೆದು ಒಂದು ದಿನ ಕ್ರೀಡಾಕೂಟವನ್ನು ಏರ್ಪಡಿಸಿರುವುದು ಬಹಳ ಸಂತೋಷದ ವಿಷಯವಾಗಿದೆ ಎಂದು ತಹಸಿಲ್ದಾರ್ ಎಂ ಜಿ ಸಂತೋಷ್ ಕುಮಾರ್ ತಿಳಿಸಿದರು. ಪಟ್ಟಣದ ಕ್ರಿಕೆಟ್ ಸ್ಟೇಡಿಯಂನಲ್ಲಿ ಏರ್ಪಡಿಸಿದ್ದ ತಾಲೂಕ್ ಪತ್ರಕರ್ತರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಪತ್ರಕರ್ತರ ಕುಟುಂಬ ಮತ್ತು ಮಕ್ಕಳು ಯಾವುದೇ ಕಾರ್ಯಕ್ರಮಕ್ಕೆ ಭಾಗವಹಿಸದೆ ತಮ್ಮ ಕೆಲಸಕ್ಕೆ ತಾವೇ ಎಂಬಂತೆ ಇದ್ದು ಎಲ್ಲಾ ಪತ್ರಕರ್ತರ ಕುಟುಂಬದವರನ್ನು ಕರೆತಂದು ಒಂದು ದಿನ ಕ್ರೀಡಾಕೂಟದ ಹೆಸರಿನಲ್ಲಿ ಸಮಯ ಕಳೆಯುವ ಜೊತೆಗೆ ಸಂತೋಷದಿಂದಿರುವದು ಬಹಳ ಹೆಮ್ಮೆಯ ವಿಚಾರವಾಗಿದೆ ಎಂದರು.
ಕೇವಲ ಮನರಂಜನೆಗಾಗಿ ಕ್ರೀಡಾಕೂಟದಲ್ಲಿ ಭಾಗವಹಿಸುವುದಕ್ಕಿಂತ ವರ್ಷದ ಮೂರ್ನಾಲ್ಕು ಬಾರಿ ಇಂಥ ಕ್ರೀಡಾಕೂಟಗಳನ್ನು ಏರ್ಪಡಿಸುವುದರಿಂದ ಕ್ರೀಡಾಕೂಟದಲ್ಲಿ ಭಾಗವಹಿಸುವ ಆಸಕ್ತರು ಗೆಲ್ಲುವ ಉದ್ದೇಶದಿಂದ ತರಬೇತಿ ಪಡೆಯಲು ಪ್ರಯತ್ನಿಸುತ್ತಾರೆ. ಆಗ ಪ್ರತಿಯೊಬ್ಬರ ಆರೋಗ್ಯ ದೈಹಿಕ ಸಾಮರ್ಥ್ಯ ಹೆಚ್ಚಿಸುತ್ತದೆ ಎಂದು ತಿಳಿಸಿದರು. ಶಾಸಕಾಂಗ ಕಾರ್ಯಂಗ ನ್ಯಾಯಾಂಗ ಮೂರು ಅಂಗಗಳಂತೆ ಪತ್ರಿಕಾರಂಗವು ನಾಲ್ಕನೆಯ ಅಂಗವಾಗಿ ಸಾಮಾಜಿಕ ಕಳಕಳಿಯ ಸಮಾಜವನ್ನು ತಿದ್ದುವ ತಪ್ಪುಗಳನ್ನು ಎತ್ತು ತೋರಿಸುವ ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿ ಕೆಲಸ ನಿರ್ವಹಿಸುವ ಪತ್ರಕರ್ತರ ಜವಾಬ್ದಾರಿ ಬಹಳ ಶ್ರೇಷ್ಠವಾದದ್ದು ಅಂತಹ ಪತ್ರಕರ್ತರ ಕ್ರೀಡಾಕೂಟವನ್ನು ಉದ್ಘಾಟಿಸುವಂತಹ ಜವಾಬ್ದಾರಿಯನ್ನು ನನಗೆ ನೀಡಿರುವುದು ಸಂತೋಷವಾಗಿದೆ ಎಂದರು.
ಪತ್ರಕರ್ತರಂತೆ ನಾವು ಸಹ ನಿಮ್ಮಲ್ಲಿ ಒಬ್ಬರಾಗಿದ್ದು ಯಾವುದೇ ಸಮಯದಲ್ಲಿ ನಮ್ಮಲ್ಲಿ ಏನಾದರೂ ಸಲಹೆ ಸೂಚನೆಗಳು ಮತ್ತು ಇನ್ನಿತರ ಕೆಲಸಗಳು ಆಗಬೇಕಿದ್ದರೆ ತಿಳಿಸಿ ಅದನ್ನು ತಕ್ಷಣ ಮಾಡಿಕೊಡುವ ಹೊಣೆ ನಮ್ಮದಾಗಿದೆ, ನಿಮ್ಮ ಕುಟುಂಬದಲ್ಲಿ ನಮ್ಮನ್ನು ಸೇರಿಸಿಕೊಳ್ಳಿ ಎಂದು ಸಲಹೆ ನೀಡಿದರು. ಮುಂದೆ ನಾಡು ಹಬ್ಬಗಳ ಸಮಿತಿಯಿಂದ ಆಚರಿಸುವ ಕಾರ್ಯಕ್ರಮಗಳಲ್ಲಿ ಪತ್ರಕರ್ತರು ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಆರೋಗ್ಯ ಇಲಾಖೆ, ಪುರಸಭೆ ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕ್ರೀಡಾಕೂಟವನ್ನು ಆಯೋಜಿಸಿ ನಡೆಸಬೇಕೆಂಬ ಅಸೆ ಇದ್ದು ಅದಕ್ಕೆ ನಿಮ್ಮ ಸಹಕಾರ ಬೇಕು ಎಂದು ಕೋರಿದರು.
ಪೊಲೀಸ್ ಇನ್ಸ್ಪೆಕ್ಟರ್ ಎಂಆರ್ ಲವ ಮಾತನಾಡಿ ಕ್ರೀಡೆ ಎಂಬುದು ಮನರಂಜನೆಗಾಗಿ ಪ್ರಶಸ್ತಿಗಾಗಿ ಅಲ್ಲ ಅದರಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಸ್ನೇಹ ಸಂಬಂಧವನ್ನು ಬೆರೆಸುವ ಕ್ರೀಡಾಕೂಟವನ್ನಾಗಿ ಮಾಡಿಕೊಳ್ಳಿ ಗೆದ್ದವರು ಸೋತವರನ್ನು ಸೋತವರು ಗೆದ್ದವರನ್ನು ಪ್ರೋತ್ಸಹಿಸುವ ಜೊತೆಗೆ ಮುಂದೊಂದು ದಿನ ಅವಕಾಶ ಒದಗಿ ಬರುತ್ತದೆ ಎಂಬ ಭಾವನೆಯೊಂದಿಗೆ ಕ್ರೀಡಾಕೂಟವನ್ನು ಎದುರಿಸಿ ಎಂದು ಸಲಹೆ ನೀಡಿದರು. ಪೊಲೀಸರಂತೆ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪತ್ರಕರ್ತರು ಬಿಡುವಿಲ್ಲದೆ ಸಮಾಜ ಸೇವೆಯನ್ನು ಮಾಡುವ ನೀವುಗಳು ನಿಮ್ಮ ಕುಟುಂಬ ಮತ್ತು ಮಕ್ಕಳನ್ನು ಕರೆತಂದು ಕಾರ್ಯಕ್ರಮದ ಹೆಸರಿನಲ್ಲಿ ಕ್ರೀಡಾಕೂಟಗಳನ್ನು ನಡೆಸುವ ಮೂಲಕ ಮನಶ್ಯಾಂತಿ ಮತ್ತು ನೆಮ್ಮದಿಯ ಜೊತೆಗೆ ಎಲ್ಲರೂ ಒಂದೆಡೆ ಸೇರುವ ಅವಕಾಶವನ್ನು ಮಾಡಿಕೊಟ್ಟಿರುವುದು ಒಳ್ಳೆಯ ಕೆಲಸವಾಗಿದೆ ಎಂದು ತಿಳಿಸಿದರು.
ಬೇರೆಡೆಯ ಪತ್ರಕರ್ತರಿಗಿಂತ ಕೆ ಆರ್ ನಗರ ತಾಲೂಕಿನ ಪತ್ರಕರ್ತರು ಸುದ್ದಿಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ವಸ್ತುನಿಷ್ಠೆ ಸಮಾಜಕ್ಕೆ ಉತ್ತಮವಾದ ವಿಚಾರಗಳನ್ನು ತಿಳಿಸುವ ವಿಚಾರದಲ್ಲಿ ಎತ್ತಿದ ಕೈ ಆದ್ದರಿಂದ ತಾಲೂಕಿನ ಪತ್ರಕರ್ತರನ್ನು ಅತ್ಯಂತ ಪ್ರೀತಿ ಮತ್ತು ವಿಶ್ವಾಸದಿಂದ ನೋಡುತ್ತಿದ್ದು ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಹಕಾರ ಸಲಹೆಗಳನ್ನು ನೀಡುವ ಜೊತೆಗೆ ನಮ್ಮಿಂದ ಏನಾದರೂ ಸಹಾಯ ಸಹಕಾರ ಸಲಹೆಗಳಿದ್ದರೆ ಪಡೆದುಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ವಡ್ಡರ ಕೊಪ್ಪಲು ಶಿವರಾಮು, ಪ್ರಧಾನ ಕಾರ್ಯದರ್ಶಿ ಎಂ ಎಸ್ ರವಿಕುಮಾರ್ ಉಪಾಧ್ಯಕ್ಷ ಸಾಲಿಗ್ರಾಮದ ಹರೀಶ್, ಬೇರ್ಯ ಸಿಸಿ ಮಾದೇವ್, ಖಜಾಂಚಿ ಬೇರ್ಯ ಮಹೇಶ್ ನಿರ್ದೇಶಕರುಗಳಾದ ವಿನಯ್ ದೊಡ್ಡಕೊಪ್ಪಲು, ಚೈತನ್ಯ ರಾವ್ ಪಂಡಿತ್, ನಾಟಿಕರ್, ಆನಂದ ಹೊಸೂರ್, ರೋಜಾ ಮಹೇಶ್ ಸದಸ್ಯರಾದ ಕೆ ಟಿ ರಮೇಶ್ ,ಚುಂಚನಕಟ್ಟೆ ಮಧು, ಪ್ರಶಾಂತ, ಶಿಲ್ಪ ಶ್ರೀನಿವಾಸ್, ಕೃಷ್ಣಮೂರ್ತಿ, ಮಹಮ್ಮದ್ ಸಬೀರ್, ಯೋಗಾನಂದ ,ನಾಗೇಗೌಡ, ಜೀಟೆಕ್ ಶಂಕರ್ ಮತ್ತು ಪತ್ರಕರ್ತರ ಕುಟುಂಬದವರು ಮಕ್ಕಳು ದೈಹಿಕ ಶಿಕ್ಷಣ ಸಂಯೋಜಕರಾದ ಕುಮಾರಸ್ವಾಮಿ ಹಾಜರಿದ್ದರು.