ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ AICC ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ರಚಿಸಿರುವ ಕುರಿತು ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಿದ್ದರಾಮಯ್ಯ ಸಾಹೇಬರು ದೇಶ ಕಂಡಿರುವ ಮಾಸ್ ಲೀಡರ್ ಅವರ ಸೇವೆ ವಿಸ್ತಾರ ಮಾಡಲು ಪಕ್ಷ ಚಿಂತನೆ ನಡೆಸಿದೆ ಎಂದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸಿಎಂ ಸಿದ್ದರಾಮಯ್ಯ ಜನಪ್ರಿಯತೆ ರಾಜ್ಯಕ್ಕೆ ಸೀಮಿತ ಆಗಬಾರದು. ಇಡೀ ದೇಶದಲ್ಲಿ ಸಿದ್ದರಾಮಯ್ಯ ಜನಪ್ರಿಯ ಆಗಿದ್ದಾರೆ. ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ಕಾಳಜಿ ದಮನಿತರ ಪರ ಇದೆ. ಹಿಂದುಳಿದ ದಮನಿತರು ಮಹಿಳೆಯರು ಬಡವರ ಪರವಿದೆ. ಸಿಎಂ ಸಿದ್ದರಾಮಯ್ಯ ಅವರೂ ಇದೆಲ್ಲಾ ಕಾಳಜಿಯುಳ್ಳವರು ಅದಕ್ಕಾಗಿ ಸಿದ್ದರಾಮಯ್ಯರನ್ನ ಒಬ್ಬ ಲೀಡರ್ ಎಂದು ಹೇಳುತ್ತೇವೆ. ಅವರ ಸೇವೆ ವಿಸ್ತಾರ ಮಾಡಲು ಕಾಂಗ್ರೆಸ್ ಪಕ್ಷ ಚಿಂತನೆ ಮಾಡಿದೆ. ಇದರಲ್ಲಿ ಬಿಜೆಪಿ ಏನಾದರೂ ಹುಡುಕುತ್ತಿದ್ದರೆ ನಿರಾಸೆ ಕಟ್ಟಿಟ್ಟ ಬುತ್ತಿ ಎಂದರು.
ಸಿಎಂ ಬದಲಾವಣೆ ಬಗ್ಗೆ ಸ್ವಾಮೀಜಿಗಳ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸ್ವಾಮೀಜಿಗಳು ಅವರ ಮೇಲಿನ ಪ್ರೀತಿ ಆಶೀರ್ವಾದಕ್ಕೆ ಹೇಳುತ್ತಾರೆ. ಆದರೆ ಕಾಂಗ್ರೆಸ್ ಒಂದು ಶಿಸ್ತಿನ ಪಕ್ಷ ಇಲ್ಲಿ ಏನಿದ್ದರೂ ಹೈಕಮಾಂಡ್ ಹೇಳಿದ್ದನ್ನ ನಾವು ಕೇಳುತ್ತೇವೆ. ಸಿಎಂ ಬದಲಾವಣೆ ಬಗ್ಗೆ ಯಾರು ಯಾವಾಗ ಗಡುವು ಕೊಟ್ಟಿದ್ದಾರೆ ಗೊತ್ತಿಲ್ಲ. ಏನೇ ಇದ್ದರೂ ನಮ್ಮ ಹೈಕಮಾಂಡ್ ಪಕ್ಷದ ವರಿಷ್ಠರು ಇದ್ದಾರೆ ಎಂದರು.