ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಪಶುಪತಿ ಜಗದೀಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಸರಗೂರು ಶಿವು ರವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಗೆ ಪಶುಪತಿ ಜಗದೀಶ್ ಅವರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಪಶುಪತಿ ಜಗದೀಶ್ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿಯಾಗಿದ್ದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಎಇಇ ವಿನುತ್ ಅವರು ಅಧಿಕೃತವಾಗಿ ಘೋಷಣೆ ಮಾಡಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಂದರಮ್ಮ, ಸದಸ್ಯರುಗಳಾದ ಕಿಜರ್ ಪಾಷ, ರಾಧ, ಲತಾ, ಚಂದ್ರೇಗೌಡ, ಸಿದ್ದರಾಜು, ರಘುರಾಜೇಅರಸ್, ಕೆ.ಎ.ರತ್ನ, ಜಯಲಕ್ಷ್ಮಿ, ಹೆಚ್.ಕೆ.ಮಹೇಂದ್ರ, ಶಿಲ್ಪ, ಶಾಂತಮ್ಮ, ಶಂಭುಲಿಂಗಚಾರಿ, ಷಣ್ಮುಖ, ಪಿಡಿಓ ಎನ್.ನವೀನ್, ಎಸ್ ಡಿ ಎ ಮಂಜೇಗೌಡ ಪಾಲ್ಗೊಂಡಿದ್ದರು.
ಚುನಾವಣೆಯ ನಂತರ ನೂತನ ಅಧ್ಯಕ್ಷರನ್ನು ಗ್ರಾಮ ಪಂಚಾಯಿತಿ ಸದಸ್ಯರುಗಳು, ಸಿಬ್ಬಂದಿ ವರ್ಗದವರು ಹಾಗೂ ಮುಖಂಡರುಗಳು ಅಭಿನಂದಿಸಿದರು. ಈ ಸಂದರ್ಭದಲ್ಲಿ ಮುಖಂಡರುಗಳಾದ ದಿನೇಶ್, ಸುನೀಲ್ ಕುಮಾರ್, ಅಶೋಕ್, ರಘು, ಕರ್ತಾಳು ಮಧು, ಹೆಚ್.ಎನ್.ರಮೇಶ್, ಬಂಡಹಳ್ಳಿ ಕುಚೇಲ, ನಾಗರಾಜು, ಸೀನಣ್ಣ, ಕೃಷ್ಣ, ಶಾಂತೇಂದ್ರ, ರಾಜೇಶ್, ಡಿಇಓ ಕಾರ್ತಿಕ್ ಸೇರಿದಂತೆ ಹಲವರು ಇದ್ದರು.