ಹೆಚ್ .ಡಿ ಕೋಟೆ: ಹೆಚ್.ಡಿ.ಕೋಟೆ ತಾಲೂಕು ಕೇಂದ್ರ ಸ್ಥಾನದಿಂದ ಸರಗೂರು ಪಟ್ಟಣಕ್ಕೆ ಸಂಜೆ 5 ಗಂಟೆಯಿಂದ ರಾತ್ರಿ 9 ರ ವರೆಗೂ ಗಂಟೆಯ ತನಕ ಬಸ್ ಇಲ್ಲದೇ ಪ್ರಯಾಣಿಕರು ಪರದಾಡಿದ ಪ್ರಸಂಗ ನಡೆದಿದೆ.
ಅವಳಿ ತಾಲೂಕು ಭೌಗೋಳಿಕವಾಗಿ ದೊಡ್ಡದಾಗಿರುವುದರಿಂದ ಆಸ್ಪತ್ರೆ, ಶಿಕ್ಷಣ, ವ್ಯಾಪಾರ, ಉದ್ಯೋಗ ಸೇರಿದಂತೆ ವಿವಿಧ ಕಾರಣಗಳಿಂದ ಜನತೆ ದೂರ ದೂರುಗಳಿಂದ ಹೆಚ್.ಡಿ.ಕೋಟೆಗೆ ಆಗಮಿಸಿ ತಮ್ಮ ಕಾರ್ಯ ಮುಗಿಸಿ ಹಿಂತಿರುಗಲಿದ್ದಾರೆ.
ತಾಲೂಕಿನಲ್ಲಿ ಡಿಪೋ ನಿರ್ಮಾಣ ವಾಗುವ ಮೊದಲು ಸರಗೂರಿನಿಂದ ಹೆಚ್.ಡಿ.ಕೋಟೆಗೆ ಪ್ರತೀ 15 ನಿಮಿಷಗಳಿಗೊಮ್ಮೆ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಳೆದ 15 ವರ್ಷಗಳಿಂದ ಕೋಟೆ ಪಟ್ಟಣದಲ್ಲಿಯೇ ಡಿಪೋ ನಿರ್ಮಾಣಗೊಂಡರೂ ಸಮೀಪದ ಸರಗೂರಿಗೆ ಬಸ್ ಸಂಪರ್ಕ ಕಲ್ಪಿಸದೆ ಪ್ರಯಾಣಿಕರು ಪರದಾಡುವಂತಾಗಿದೆ.

ಹೆಚ್.ಡಿ.ಕೋಟೆಯಿಂದ ಸರಗೂರು ತಲುಪಿ, ಸರಗೂರಿನಿಂದ ಬೇರೆಡೆಗೆ ತೆರಳಲು ಅನೇಕ ಕಾಡಂಚಿನ ಗ್ರಾಮಗಳಿರು ವುದರಿಂದ ಕೋಟೆಯಲ್ಲಿಯೇ ರಾತ್ರಿ 9 ಗಂಟೆಯಾದರೇ ನಾವು ಮನೆ ಸೇರುವುದು ಸರಿ ಸುಮಾರು 10 ಗಂಟೆಯಾದರೂ ಆಗಬಹುದು ಇದು ಎಂದು ಪ್ರಯಾಣಿಕರಾದ ಮುಳ್ಳೂರು ಗ್ರಾಮದ ಚಿನ್ನಮ್ಮ ಅಲವತ್ತುಕೊಂಡರು.
ಕಾದು ಕಾದು ಸುಸ್ತಾದ ಪ್ರಯಾಣಿಕರು ಸಂಚಾರಿ ನಿಯಂತ್ರಕರನ್ನು ಕೇಳಿದರೆ ಅಸಡ್ಡೆಯಾಗಿ ಉತ್ತರಿಸಿದ್ದಾರೆ. ಈ ಬಗ್ಗೆ ಕೆಎಸ್ ಆರ್ ಟಿ ಸಿ ಯ ಜಿಲ್ಲಾಮಟ್ಟದ ಅಧಿಕಾರಿಗಳು ಕರೆಗೆ ಉತ್ತರಿಸುವ ಗೋಜಿಗೆ ಹೋಗಿಲ್ಲ ಕೇಂದ್ರ ಕಚೇರಿಗೆ ಕರೆ ಮಾಡಿ ದೂರು ನೀಡಿದರೆ, 5:30 ರಿಂದ ನಡೆದುಕೊಂಡು ಹೋಗಿದ್ದರೂ ನೀವು ಊರು ಸೇರಬಹುದಿತ್ತು ಎಂಬ ಉಡಾಫೆ ಉತ್ತರ ನೀಡಿದ ಮಹಿಳಾ ಅಧಿಕಾರಿಗೆ, ಪ್ರಯಾಣಿಕರು ಬಯ್ಯತೊಡಗಿದ ನಂತರ ಏಕಾಏಕಿ ದೂರವಾಣಿ ಸಂಪರ್ಕ ಕಡಿತಗೊಳಿಸಿದ್ದಾರೆ ಇತ್ತ ಪರಯಾಣಿಕರು ನಮ್ಮ ಪರದಾಟಕ್ಮೆ ಕೊನೆ ಎಂದು ಹಿಡಿಶಾಪ ಹಾಕಿದ್ದಾರೆ.