ಮದ್ದೂರು : ಪಟ್ಟಣದಲ್ಲಿ ೨೦೧೯ ರಂದು ಆರಂಭವಾಗಿ ಕಾರ್ಯ ನಿರ್ವಹಿಸುತ್ತಿರುವ ಪಾಸ್ ಪೋರ್ಟ್ ಸೇವಾ ಕೇಂದ್ರವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಗೊಳ್ಳಲು ಬಿಡುವುದಿಲ್ಲ ಎಂದು ಶಾಸಕ ಕೆ. ಎಂ ಉದಯ್ ತಿಳಿಸಿದರು.
ತಾಲ್ಲೂಕಿನ ನಿಡಘಟ್ಟ ಬಳಿ, ನಿಡಘಟ್ಟ ದಿಂದ ಕೊಲ್ಲಿ ಸರ್ಕಲ್ ವರೆಗೆ ಮೈಸೂರು ಬೆಂಗಳೂರು ಹೆದ್ದಾರಿಗೆ ( ಹಳೇ ರಸ್ತೆ ) ೭.೯ ಕೋಟಿ ರೂ ವೆಚ್ಚದಲ್ಲಿ ಮರು ಡಾoಬರೀಕರಣ ಹಾಕುವ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಅವರು ಸುದ್ಧಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಒಂದು ಸೇವಾ ಕೇಂದ್ರವು ನಮ್ಮ ತಾಲ್ಲೂಕು ಕೇಂದ್ರ ಸ್ಥಾನದಲ್ಲಿದೆ, ಹಿಂದೆ ಈ ವಿಷಯದಲ್ಲಿ ಕೆಲವರ ಪ್ರಯತ್ನದಿಂದ ಈ ಸೇವಾ ಕೇಂದ್ರ ಬಂದಿದೆ ಎನ್ನುವುದು ಒಂದು ಕಡೆಯಾದರೆ ಈಗ ಅದನ್ನು ಸ್ಥಾಳಾo ತರ ಮಾಡುವ ಚರ್ಚೆಗಳು ಆಗುತ್ತಿರುವುದು ಸರಿಯಲ್ಲ ಅದಕ್ಕೆ ಬಿಡುವುದೂ ಇಲ್ಲ ಎಂದರು.
ಪಾಸ್ ಪೋರ್ಟ್ ಸೇವಾ ಕೇಂದ್ರದಿಂದಾಗಿ ತಾಲ್ಲೂಕು ಸೇರಿದಂತೆ ಜಿಲ್ಲೆಯ ಹಾಗೂ ಬೇರೆ ಜಿಲ್ಲೆಗಳ ಜನರಿಗೂ ಅನುಕೂಲವಾಗುತ್ತಿದೆ ಎಂದ ಅವರು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮದ್ದೂರು ತಾಲ್ಲೂಕಿನಿಂದ ಹೆಚ್ಚು ಮತಗಳು ಬಂದಿರುವುದರ ಪ್ರತಿಫಲವಾಗಿ ಮದ್ದೂರಿನಿಂದ ಸೇವಾ ಕೇಂದ್ರವನ್ನು ಬೇರೆಡೆಗೆ ಸ್ಥಾಳಾoತರ ಮಾಡಲು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ರವರು ಹೊರಟಿದ್ದಾರೆ ಎಂದು ಕಿಡಿ ಕಾರಿದ ಅವರು, ಬೇಕಿದ್ದರೆ ಮಂಡ್ಯದಲ್ಲೂ ಒಂದು ಪಾಸ್ ಪೋರ್ಟ್ ಸೇವಾ ಕೇಂದ್ರವನ್ನು ತೆರೆಯಲಿ ಎಂದರು.
ಕೋವಿಡ್ ಸಂಧರ್ಭದಲ್ಲಿ ಆಗಿನ ಸಂಧರ್ಭದಲ್ಲಿ ಅಧಿಕಾರದಲ್ಲಿದ್ದಾಗ ಸಾವಿರಾರು ಕೋಟಿ ಅವ್ಯವಹಾರ ನಡೆದಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಕೆಯಾಗಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ತನಿಖೆ ನಡೆಸಲಾಗುವುದು ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಇದೇ ಸೆ.೯ ರಂದು ಮದ್ದೂರು ಪಟ್ಟಣದ ಸ್ಥಳೀಯ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ಜೆಡಿಎಸ್ ಗೆ ಸಂಖ್ಯಾಬಲವಿದೆ ಆದರೆ ಪಕ್ಷತರ ಸದಸ್ಯರ ಬೆಂಬಲ ಹಾಗೂ ಅವಕಾಶ ಸಿಕ್ಕರೆ ಅಧಿಕಾರ ಚುಕ್ಕಾಣಿಯಿಡಿಯಲು ಪ್ರಯತ್ನಿಸಲಾಗುವುದು ಎಂದರು.
ಈ ವೇಳೆ ಮುಖಂಡರಾದ ಮಾಜಿ ಗ್ರಾ. ಪಂ ಅಧ್ಯಕ್ಷ ನಿಡಘಟ್ಟ ಪ್ರಕಾಶ್, ಹರೀಶ್, ತಿಮ್ಮೆಗೌಡ, ಆರ್. ಸಿ ಎಸ್ ಶಿವು, ಶರತ್, ರಾಜಣ್ಣ, ಮಹಾದೇವಯ್ಯ,ದೊರೆಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.