Thursday, June 5, 2025
Google search engine

Homeಅಪರಾಧಕಾನೂನುಪತಂಜಲಿ ಆಯುರ್ವೇದ್‌ಗೆ ₹273 ಕೋಟಿ ಜಿಎಸ್ಟಿ ದಂಡ: ಹೈಕೋರ್ಟ್‌ನಲ್ಲಿ ಅರ್ಜಿ ವಜಾ

ಪತಂಜಲಿ ಆಯುರ್ವೇದ್‌ಗೆ ₹273 ಕೋಟಿ ಜಿಎಸ್ಟಿ ದಂಡ: ಹೈಕೋರ್ಟ್‌ನಲ್ಲಿ ಅರ್ಜಿ ವಜಾ

ಪ್ರಯಾಗ್ ರಾಜ್: ಪತಂಜಲಿ ಆಯುರ್ವೇದ್ ಲಿಮಿಟೆಡ್ ಕಂಪನಿಗೆ ವಿಧಿಸಲಾದ ₹273.5 ಕೋಟಿ ಜಿಎಸ್ಟಿ ದಂಡವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾ ಮಾಡಿದೆ. ಕಂಪನಿ ಈ ದಂಡ ಕ್ರಿಮಿನಲ್ ಸ್ವಭಾವದ್ದಾಗಿದ್ದು, ಪ್ರತ್ಯೇಕ ವಿಚಾರಣೆ ಬಳಿಕವೇ ವಿಧಿಸಬಹುದು ಎಂದು ವಾದಿಸಿತ್ತು. ಆದರೆ, ನ್ಯಾಯಮೂರ್ತಿಗಳಾದ ಶೇಖರ್ ಬಿ. ಸರಾಫ್ ಮತ್ತು ವಿಪಿನ್ ಚಂದ್ರ ದೀಕ್ಷಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ವಾದವನ್ನು ತಳ್ಳಿಹಾಕಿದೆ.

ನ್ಯಾಯಾಲಯವು ಸ್ಪಷ್ಟಪಡಿಸಿದ್ದು, ಜಿಎಸ್ಟಿ ಸಂಬಂಧಿತ ದಂಡಗಳು ಸಿವಿಲ್ ಸ್ವರೂಪದ್ದಾಗಿದ್ದು, ಸಿಜಿಎಸ್ಟಿ ಕಾಯ್ದೆಯ ಸೆಕ್ಷನ್ 122ರಡಿ ಅಧಿಕಾರಿಗಳು ತೀರ್ಮಾನಿಸಲು ಸಂಪೂರ್ಣ ಹಕ್ಕು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ, ಕ್ರಿಮಿನಲ್ ವಿಚಾರಣೆ ಅಗತ್ಯವಿಲ್ಲ ಎಂಬುದಾಗಿ ಪೀಠ ಅಭಿಪ್ರಾಯಪಟ್ಟಿದೆ.

ಪತಂಜಲಿ ಆಯುರ್ವೇದ್ ಕಂಪನಿಯು ಹರಿದ್ವಾರ, ಸೋನಿಪತ್ ಮತ್ತು ಅಹ್ಮದ್ನಗರ್ನಲ್ಲಿ ಘಟಕಗಳನ್ನು ಹೊಂದಿದ್ದು, ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಬಳಸಿದರೂ, ಅಗತ್ಯ ದಾಖಲೆಗಳಿಲ್ಲದೆ ಶಂಕಾಸ್ಪದ ವಹಿವಾಟುಗಳಲ್ಲಿ ತೊಡಗಿಸಿಕೊಂಡಿದೆ ಎಂಬ ಮಾಹಿತಿಗಳನ್ನು ಆಧರಿಸಿ, ಜಿಎಸ್‌ಟಿ ಅಧಿಕಾರಿಗಳು ಈ ಕಂಪನಿಯ ವಿರುದ್ಧ ತನಿಖೆ ಕೈಗೊಂಡಿದ್ದರು.

ಎಪ್ರಿಲ್ 19, 2024ರಂದು 273 ಕೋಟಿ ರೂ. ಜಿಎಸ್‌ಟಿ ದಂಡ ಪಾವತಿಸುವಂತೆ ಘಾಝಿಯಾಬಾದ್‌ನ ಜಿಎಸ್‌ಟಿ ಗುಪ್ತಚರ ಪ್ರಧಾನ ನಿರ್ದೇಶನಾಲಯವು ಪತಂಜಲಿ ಆಯುರ್ವೇದ್ ಲಿಮಿಟೆಡ್ ಕಂಪನಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು.

RELATED ARTICLES
- Advertisment -
Google search engine

Most Popular