ಮಂಡ್ಯ: ಸಕ್ಕರೆನಾಡು ಮಂಡ್ಯ ಜಿಲ್ಲೆಗೆ ಮತ್ತೊಂದು ಪ್ರವಾಸಿ ತಾಣ ಸೇರ್ಪಡೆಯಾಗಿದ್ದು, ವಿಟೇಂಜ್ ಮ್ಯೂಸಿಯಂ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಶ್ರೀರಂಗಪಟ್ಟಣ ಹೊರವಲಯದಲ್ಲಿರುವ ವಿಟೇಂಜ್ ವಾಹನಗಳ ‘ಪಯಣ’ ಹೆಸರಿನ ಮೂಸಿಯಂನ ಒಳ ಹಾಗು ಹೊರ ನೋಟಕ್ಕೆ ಪ್ರವಾಸಿಗರು ಫಿಧಾ ಆಗಿದ್ದಾರೆ.

ಧರ್ಮಸ್ಥಳ ಸಂಸ್ಥೆಯ ವತಿಯಿಂದ ಮೈ – ಬೆಂ ದಶಪಥ ಹೆದ್ದಾರಿಯ ಪಕ್ಕದಲ್ಲೆ ನಿರ್ಮಿಸಿಲಾಗಿರುವ ಪಯಣ ಪಾರಂಪರಿಕ ವಾಹನಗಳ ವಸ್ತು ಸಂಗ್ರಹಾಲಯ ಇದಾಗಿದ್ದು, ಈ ಸಂಗ್ರಹಾಲಯದಲ್ಲಿ ಪಾರಂಪರಿಕ ವಾಹನಗಳು ಕಣ್ಮನ ಸೆಳೆಯುತ್ತವೆ.
ಈ ಪಾರಂಪರಿಕ ವಸ್ತು ಸಂಗ್ರಹಾಲಯದ ಸೊಬಗಿಗೆ ಪ್ರವಾಸಿಗರು ಮನ ಸೋತಿದೆ.
ಪಯಣ ಹೆಸರಿನ ಮ್ಯೂಸಿಯಂಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.