ರುಚಿಕರವಾದ ಕಡಲೇಬೀಜ ಉಂಡೆ ಮಾಡುವ ವಿಧಾನ…
ಬೇಕಾಗುವ ಪದಾರ್ಥಗಳು…
- ಕಡಲೇಬೀಜ – 2 ಬಟ್ಟಲು ( ಹುರಿದು ಸಿಪ್ಪೆ ತೆಗೆದದ್ದು)
- ಬೆಲ್ಲ – 2 ಬಟ್ಟಲು
- ತುಪ್ಪ – ಸ್ವಲ್ಪ
ಮಾಡುವ ವಿಧಾನ…
- ಮೊದಲಿಗೆ ಮಧ್ಯಮ ಉರಿಯಲ್ಲಿ ಕಡಲೇಬೀಜವನ್ನು ಚೆನ್ನಾಗಿ ಹುರಿಯಿರಿ. ನಂತರ ಇದನ್ನು ಒಂದು ಬಟ್ಟೆಗೆ ಹಾಕಿ ಆರಿದ ನಂತರ ಅದರ ಸಿಪ್ಪೆಯನ್ನು ತೆಗೆದು, ಬಳಿಕ ಸ್ವಲ್ಪ ಕುಟ್ಟಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ.
- ನಂತರ ಒಂದು ಬಾಣಲೆಗೆ ಬೆಲ್ಲ ಹಾಕಿ ಸ್ವಲ್ಪ ನೀರು ಹಾಕಿ ಕುದಿಸಿ. ಈ ಪಾಕವನ್ನು ಶೋಧಿಸಿ ಮತ್ತೆ ಬಾಣನೆಗೆ ಬಾಕಿ. ನಂತರ ಪಾಕ ಆದ ಬಳಿಕ ತುಪ್ಪ ಹಾಕಿ.
- ಬಳಿಕ ಕಡಲೇಬೀಜ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಸ್ಟೌ ಆಫ್ ಮಾಡಿ ಚೆನ್ನಾಗಿ ಮಿಕ್ಸ್ ಮಾಡಿ. ಪಾಕ ಸ್ವಲ್ಪ ಆರಿದ ಮೇಲೆ ಉಂಡೆ ಕಟ್ಟಿದರೆ ರುಚಿಕರವಾದ ಕಡಲೇಬೀಜಜ ಉಂಡೆ ಸವಿಯಲು ಸಿದ್ಧ.