ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಜನತೆ ಅಧಿಕಾರ ಕೊಡುವುದು ಸಮಾಜದ ಉದ್ದಾರಕ್ಕಾಗಿಯೇ ಹೊರತು ಸ್ವಹಿತಕ್ಕಾಗಿ ಅಲ್ಲ ಎಂದು ಮಾಜಿ ಸಚಿವ ಸಾರಾ ಮಹೇಶ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದಲ್ಲಿ ಇತ್ತೀಚಿಗೆ ಮೃತಪಟ್ಟ ಜಮೀಲ್ ಅವರ ಪುತ್ರ ಸಯ್ಯದ್ಇ ಮ್ರಾನ್ ಅವರ ಮಗಳ ಹೆಸರಿಗೆ ನವನಗರ ಅರ್ಬನ್ ಬ್ಯಾಂಕ್ನಲ್ಲಿ ಠೇವಣಿ ಇಡಲಾಗಿರುವ ಒಂದು ಲಕ್ಷದ ವಿಮಾ ಪಾಲಿಸಿಯ ಬಾಂಡ್ ವಿತರಿಸಿ ಅವರು ಮಾತನಾಡಿದರು.
ಮನುಷ್ಯರಿಗೆ ಕಷ್ಟಗಳು ಯಾವಾಗ ಬರಲಿದೆ ಎಂದು ಯಾರಿಗೂ ಅರಿವಿರುವುದಿಲ್ಲ ಈ ರೀತಿ ಅಪಘಾತಗಳಿಂದ ಆಕಸ್ಮಿಕವಾಗಿ ಮೃತಪಟ್ಟವರಿಗೆ ನೆರವಿಗೆ ಸಮಾಜದಲ್ಲಿ ಉಳ್ಳವರು ಬರಬೇಕು ಅಂತಹ ಕುಟುಂಬಗಳನ್ನು ಹಿಂದುಳಿಯಲು ಬಿಡದೆ ಜೊತೆಯಲ್ಲಿ ಕರೆದುಕೊಂಡು ಹೋದಾಗ ಮಾತ್ರ ನಾವೆಲ್ಲರೂ ಒಗ್ಗಟ್ಟಿನಿಂದ ಬದುಕಲು ಸಾಧ್ಯ ಎಂದರು.
ಇದೇ ವೇಳೆಯಲ್ಲಿ ಸಾ ರಾ ಮಹೇಶ್ ಅವರನ್ನು ಗ್ರಾಮದ ಮುಖಂಡರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಒಕ್ಕಲಿಗ ಸಂಘದ ಉಪಾಧ್ಯಕ್ಷ ಕುಚೇಲ್, ಸಹಕಾರ ಸಂಘದ ಅಧ್ಯಕ್ಷ ಹಳಿಯೂರು ನವೀನ್, ಮಾಜಿ ಅಧ್ಯಕ್ಷರಾದ ಎಚ್.ಅರ್. ಮಹೇಶ್, ಕೋಳಿ ಕೃಷ್ಣಮೂರ್ತಿ, ಎಚ್.ಎಸ್. ಜಗದೀಶ್ ನಿರ್ದೇಶಕರಾದ ರಮೇಶ್, ಗ್ರಾಪಂ ಮಾಜಿ ಅಧ್ಯಕ್ಷ ಕಿಟ್ಟಿ, ಮುಖಂಡರಾದ ಬಿ ರಮೇಶ್, ಕೀರ್ತಿ, ಜಮೀಲ್,ಪಾಪಣ್ಣ ಆಟೋ ಚಾಲಕರ ಸಂಘದ ಅಧ್ಯಕ್ಷ ಪುರಿ ಮಂಜು ಸೇರಿದಂತೆ ಮತ್ತಿತರರು ಹಾಜರಿದ್ದರು.



