Sunday, April 20, 2025
Google search engine

Homeರಾಜ್ಯನಾವು ಮಾಡಿದ ಕೆಲಸಕ್ಕೆ ಪಟ್ಟಿ ಹಾಕಿ ಚನ್ನಪಟ್ಟಣದ ಜನ ಮಾರ್ಕ್ಸ್ ಕೊಡ್ತಾರೆ: ಡಿ.ಕೆ ಶಿವಕುಮಾರ್

ನಾವು ಮಾಡಿದ ಕೆಲಸಕ್ಕೆ ಪಟ್ಟಿ ಹಾಕಿ ಚನ್ನಪಟ್ಟಣದ ಜನ ಮಾರ್ಕ್ಸ್ ಕೊಡ್ತಾರೆ: ಡಿ.ಕೆ ಶಿವಕುಮಾರ್

ಬೆಂಗಳೂರು: ಚನ್ನಪಟ್ಟಣದಲ್ಲಿ ರಣರಂಗ ಆಡಿದವರೆಲ್ಲಾ ಮುಗಿದು ಹೋಗಿದ್ದಾರೆ. ನಾವು ಮಾಡಿದ ಕೆಲಸಕ್ಕೆ ಪಟ್ಟಿ ಹಾಕಿ ಚನ್ನಪಟ್ಟಣದ ಜನ ಮಾರ್ಕ್ಸ್ ಕೊಡುತ್ತಾರೆ ಎಂದು ಡಿಕೆ ಶಿವಕುಮಾರ್ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಚನ್ನಪಟ್ಟಣ ಪ್ರಚಾರದ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಚನ್ನಪಟ್ಟಣದಲ್ಲಿ ಯಾವ ರಣನೂ ಇಲ್ಲ, ರಂಗವೂ ಇಲ್ಲ. ಮತದಾರನ ಹೃದಯ ಗೆಲ್ಲಬೇಕು. ನಾವು ಮಾಡಿರುವ ಕೆಲಸಕ್ಕೆ, ಮಾಡುತ್ತಿರುವ ಕೆಲಸಕ್ಕೆ ಜನ ಗುರುತಿಸಿ ಎಂದು ಕೇಳಲು ಹೋಗುತ್ತಿದ್ದೇವೆ. ರಣರಂಗ ಆಡಿದವರೆಲ್ಲ ಮುಗಿದು ಹೋಗಿದ್ದಾರೆ. ಈಗ ಏನಿದ್ದರೂ ಜನರ ಲಾಭ ಮಾತ್ರ ಎಂದು ವಾಗ್ದಾಳಿ ನಡೆಸಿದರು.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾಯಕ ಆದವನು ಮತದಾರರಿಗೆ ಏನು ಕೊಡುತ್ತಾನೆ, ಯಾವ ರೀತಿ ಸಹಾಯ ಮಾಡುತ್ತಾನೆ ಅವರ ಬದುಕನ್ನು ಯಾವ ರೀತಿ ಬದಲಾವಣೆ ಮಾಡುತ್ತಾನೆ ಅದು ಬಹಳ ಮುಖ್ಯ. ಯಾರು ಏನೇನು ಮಾಡಿದ್ದಾರೆ ಅನ್ನೋ ಪಟ್ಟಿ ಈ ಚುನಾವಣೆಯಲ್ಲಿ ಲೆಕ್ಕಕ್ಕೆ ಬರುತ್ತದೆ. ಜನ ತೀರ್ಮಾನ ಮಾಡುತ್ತಾರೆ. ಡಿಕೆ ಸುರೇಶ್, ಡಿಕೆ ಶಿವಕುಮಾರ್, ಕುಮಾರಸ್ವಾಮಿ, ಯೋಗೇಶ್ವರ್ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಜನರು ಪಟ್ಟಿ ಹಾಕುತ್ತಾರೆ ಎಂದರು.

ಇನ್ನು ಚನ್ನಪಟ್ಟಣದಲ್ಲಿ ಬಿಜೆಪಿ ನಾಯಕರಿಂದ ಪ್ರಚಾರ ಮಾಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ನಾಯಕರು ಸಾಥ್ ಕೊಟ್ಟಿರೋದು ಒಳ್ಳೆಯದು ಅಲ್ಲವಾ. ಬಿಜೆಪಿ ಪಾದಯಾತ್ರೆಗಂತೂ ಜೆಡಿಎಸ್ ಅವರು ಸಾಥ್ ಕೊಟ್ಟಿರಲಿಲ್ಲ. ಆದರೂ ಜೆಡಿಎಸ್‌ಗೆ ಬಿಜೆಪಿ ಅವರು ಸಾಥ್ ಕೊಡುತ್ತಿದ್ದಾರೆ, ಕೊಡಲಿ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular