ಗುಂಡ್ಲುಪೇಟೆ : ಬಂಡೀಪುರ ಅರಣ್ಯ ಇಲಾಖೆಯ ವ್ಯಾಪ್ತಯಲ್ಲಿ ಬರುವ ಯಡಿಯಾಲ ವಲಯದ ಕಾಡಂಚಿನ ಗ್ರಾಮಗಳ ಜನರು ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಹಕರಿಸಿ ಆಗ ನಾವು ನಿಮ್ಮ ಸಮಸ್ಯಗಳಿಗೆ ಸ್ಪಂದಿಸಲು ಅನುಕೂಲವಾಗುತ್ತದೆ.
ಕಾಡಂಚಿನ ಗ್ರಾಮದ ಜನರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಯದೇ ಕಾಡಿನ ಒಳಗೆ ಹೋಗಬಾರದು,ಅರಣ್ಯ ಸಂಪತ್ತನ್ನು ನಾಶಪಡಿಸಬಾರದು,ಯಾವುದೇ ರೀತಿಯ ಅಹಿತಕರ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು, ಕಾಡಂಚಿನ ಭಾಗದಲ್ಲಿ ಜನರು ಜಾನುವಾರುಗಳನ್ನು ತಂದು ಮೇಯಿಸಬಾರದು ಈ ವೇಳೆ ಕಾಡುಪ್ರಾಣಿಗಳ ದಾಳಿಗೆ ತುತ್ತಾಗಬೇಕಾಗುತ್ತದೆ.
ಈ ವೇಳೆ ತಾವು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಆದ್ದರಿಂದ ಕಾಡಂಚಿನ ಭಾಗದ ಜನರ ಯಾವುದೇ ಸಮಸ್ಯ ಇರಲಿ ನಮ್ಮ ಗಮನಕ್ಕೆ ತಂದರೆ ನಾವು ಇಲಾಖೆಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ತಮ್ಮ ಸಮಸ್ಯೆ ಗಳಿಗೆ ಪರಿಹಾರ ನೀಡಲು ಸಹಾಯವಾಗುತ್ತದೆ. ಆದ್ದರಿಂದ ಕಾಡಂಚಿನ ಗ್ರಾಮದ ಜನರು ಇಲಾಖೆಯ ಅಧಿಕಾರಿಗಳ ಜೊತೆ ಸಹಕರಿಸಿ ಎಂದು ಯಡಿಯಾಲ ವಲಯದ ಪ್ರಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ರವರು ಮನವಿ ಮಾಡಿದ್ದಾರೆ.