Saturday, April 19, 2025
Google search engine

Homeರಾಜ್ಯಸುದ್ದಿಜಾಲಜನರು ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಿ: ಸುತ್ತೂರು ಶ್ರೀ

ಜನರು ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಿ: ಸುತ್ತೂರು ಶ್ರೀ

ಗುಂಡ್ಲುಪೇಟೆ: ಆರೋಗ್ಯ ಇದ್ದರೆ ಜಗತ್ತಿನಲ್ಲಿ ಏನು ಬೇಕಾದರೂ ಸಾಧಿಸಬಹುದು. ಆದ್ದರಿಂದ ಆರೋಗ್ಯದ ಕಡೆಗೆ ಹೆಚ್ಚು ಗಮನ ಕೊಡಬೇಕು ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಸಲಹೆ ನೀಡಿದರು.

ಪಟ್ಟಣದ ಜೆಎಸ್‍ಎಸ್ ಅನುಭವ ಮಂಟಪದಲ್ಲಿ ಜೆಎಸ್‍ಎಸ್ ಆಸ್ಪತ್ರೆ ಮೈಸೂರು ಮತ್ತು ಜೆಎಸ್ಸೆಸ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸಮಾರಂಭದಲ್ಲಿ ಮಾತನಾಡಿದ ಅವರು, ನಗರ ಪ್ರದೇಶದವರಂತೆ ಗ್ರಾಮೀಣ ಜನರಲ್ಲೂ ಆರೋಗ್ಯ ಕಾಳಜಿ ಬರಲೆಂದು ಪಟ್ಟಣದಲ್ಲಿ ವರ್ಷ ಕಾಲ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು ಎಂದರು.

ಚಿಕಿತ್ಸೆ ಪಡೆಯದಿದ್ದರೆ ಕಾಯಿಲೆ ಉಲ್ಬಣವಾಗುತ್ತವೆ. ನಗರ ಪ್ರದೇಶವರು ಜಾಗೃತರಿರುವ ಕಾರಣ ವರ್ಷಕ್ಕೊಮ್ಮೆ ಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಾರೆ. ಅವರಂತೆ ಗ್ರಾಮೀಣರಿಗೂ ತಪಾಸಣೆಗೆ ಅನುಕೂಲ ಆಗಲೆಂದು ಶಿಬಿರ ಹಮ್ಮ್ಮಿಕೊಳ್ಳಲಾಗಿತ್ತು. ದೈಹಿಕ ದುಡಿಮೆ, ಉತ್ತಮ ಗಾಳಿ, ಪ್ರಕೃತಿ ಜತೆ ನಿಕಟ ಸಂಪರ್ಕ, ಉತ್ತಮ ಆಹಾರ ಪದ್ಧತಿಯಿಂದ ಗ್ರಾಮೀಣ ಭಾಗದ ಜನರು ಆರೋಗ್ಯದಿಂದ ಇರುತ್ತಿದ್ದರು. ಆದರೆ ಈಗ ಜೀವನ ಶೈಲಿ ಬದಲಾಗುವ ಜತೆಗೆ ಆಹಾರ ಪದ್ಧತಿಯಲ್ಲೂ ಬದಲಾವಣೆಯಾಗಿ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದರು.

ಶಿಬಿರದಲ್ಲಿ ಒಟ್ಟು 6000 ಮಂದಿ ಆರೊಗ್ಯ ತಪಾಸಣೆಗೆ ಒಳಪಟ್ಟಿದ್ದು, 2.50 ಲಕ್ಷ ಮೌಲ್ಯದ ಔಷಧ ವಿತರಣೆ ಮಾಡಲಾಗಿದೆ. ಚಿಕಿತ್ಸೆಗೆ ಶಿಫಾರಸ್ಸು ಮಾಡಿದ್ದರೂ ಕೆಲವರು ಉಪೇಕ್ಷೆ ಮಾಡಿದ್ದಾರೆ. ಕಿದ್ವಾಯಿ ಸಂಚಾರ ಯೂನಿಟ್ ನಮಗೆ ಸಹಕಾರ ನೀಡುತ್ತಾ ಬಂದಿದ್ದು, ಮೈಸೂರಿನಲ್ಲಿ ಸಂಸ್ಥೆ ವತಿಯಿಂದ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಿಸುವ ಪ್ರಯತ್ನ ಪ್ರಗತಿಯಲ್ಲಿದೆ. ವೈದ್ಯಕೀಯ ಕ್ಷೇತ್ರ ಬೃಹತ್ ಆಗಿ ಬೆಳೆದಿದೆ. ಎಲ್ಲದಕ್ಕೂ ಚಿಕಿತ್ಸೆ ಇದೆ. ಆದ್ದರಿಂದ ಇರುವ ಸೌಲಭ್ಯ ಬಳಸಿಕೊಳ್ಳಿ. ಬಹಳ ಹಿಂದೆಯೇ ರಾಜೇಂದ್ರಶ್ರೀಗಳು ಸಂಸ್ಥೆ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಆರೋಗ್ಯ ಕಾರ್ಡ್ ಮಾಡಿಸಿಡುವ ವ್ಯವಸ್ಥೆ ಮಾಡಿದ್ದರು ಎಂದು ತಿಳಿಸಿದರು.

ಶಾಸಕ ಎಚ್.ಎಂ.ಗಣೇಶಪ್ರಸಾದ್ ಮಾತನಾಡಿ, ಯಾವುದೇ ಆರೋಗ್ಯ ಸಮಸ್ಯೆ ನಿರ್ಲಕ್ಷ ವಹಿಸಿದರೆ ತೀವ್ರತರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಜ್ವರದಂತ ಸಮಸ್ಯೆ ಪರೀಕ್ಷೆಗೆ ಒಳಪಡಿದ್ದರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತದೆ. ಆದ್ದರಿಂದ ಪ್ರತಿಯೊಬ್ಬರು ನಿಯಮಿತಿವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ.ಕೊರೊನಾ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಿತು. ಜೆಎಸ್ಸೆಸ್ ಇಂತಹ ಸಂದರ್ಭದಲ್ಲಿ ಹಲವರ ಜೀವ ಉಳಿಸಿತು. ರಾಜೇಂದ್ರ ಸ್ವಾಮಿಜೀಯವರಿಗೆ ಶಿಕ್ಷಣದ ಜತೆಗೆ ಆರೋಗ್ಯ ಸೇವೆ ಬಗ್ಗೆಯೂ ಅಪಾರ ಕಾಳಜಿ ಇತ್ತು. ಆರೋಗ್ಯ ಸೇವೆ ದುಬಾರಿಯಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ ತಪಾಸಣಾ ಮತ್ತು ಔಷಧ ನೀಡಿರುವುದು ಮತ್ತು ಚಿಕಿತ್ಸೆಗೆ ರಿಯಾಯಿತಿ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಈ ಸಂದರ್ಭದಲ್ಲಿ ಶಿಬಿರದ ಯಶಸ್ಸಿಗೆ ಶ್ರಮಿಸಿದವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಮಾಜಿ ಶಾಸಕ ಸಿ.ಎಸ್.ನಿರಂಜನ್‍ಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎಚ್.ಎಸ್.ನಂಜಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಚಿಕ್ಕತುಪ್ಪೂರು ಚನ್ನವೀರ ಸ್ವಾಮಿಜೀ, ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಸಿ.ಪಿ.ಮಧು, ಪ್ರಾಂಶುಪಾಲರಾದ ಮಹದೇವಮ್ಮ, ಎಚ್.ಪಿ.ಬಸವರಾಜಪ್ಪ, ಮುಖ್ಯ ಶಿಕ್ಷಕ ಮಹೇಶ್ ಸೇರಿದಂತೆ ಇತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular