ನುಗ್ಗೆಕಾಯಿ ಇರಲಿ, ನುಗ್ಗೆ ಸೊಪ್ಪಿರಲಿ ಇವುಗಳಲ್ಲಿರುವ ಪೋಷಕಾಂಶಗಳು ಅನೇಕ ಪ್ರಮುಖ ಕಾಯಿಲೆಗಳಿಗೆ ಬಹಳ ಪ್ರಯೋಜನಕಾರಿ. ಕೆಟ್ಟ ಜೀವನಶೈಲಿಯಿಂದ ಉಂಟಾಗುವ ಮಧುಮೇಹ, ಅಧಿಕ ಕೊಲೆಸ್ಟ್ರಾಲ್ ಇತ್ಯಾದಿ ಗಂಭೀರ ಕಾಯಿಲೆಗಳಿಗೆ ನುಗ್ಗೆಕಾಯಿಯನ್ನು ನಿಯಮಿತವಾಗಿ ತಿನ್ನೋದು ರಾಮಬಾಣವಂತೆ.
ಮೆಡಿಕಲ್ ನ್ಯೂಸ್ ಟುಡೇ ವರದಿ ಪ್ರಕಾರ, ನುಗ್ಗೆಕಾಯಿ ಚರ್ಮ ಮತ್ತು ಕೂದಲಿಗೆ ಸಹ ಪ್ರಯೋಜನಕಾರಿಯಾಗಿದೆ. ಇದರ ಹೊರತಾಗಿ ಹೊಟ್ಟೆ ಸಂಬಂಧಿ ಸಮಸ್ಯೆಗಳಿಗೆ ಸಹ ಪರಿಹಾರವಾಗಿ. ನುಗ್ಗೆಕಾಯಿಯಿಂದಾಗುವ 5 ಅದ್ಭುತ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಯೋಣ.
ಕೊಲೆಸ್ಟ್ರಾಲ್: ನುಗ್ಗೆಕಾಯಿಯನ್ನು ನಿಯಮಿತವಾಗಿ ತಿಂದರೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೃದಯದ ನಾಳಗಳಲ್ಲಿ ಶೇಖರವಾಗುವ ಕೊಲೆಸ್ಟ್ರಾಲ್ ಅನ್ನು ಇದು ಕಡಿಮೆ ಮಾಡುತ್ತದೆ.
ಲಿವರ್ ಸಮಸ್ಯೆ: ಲಿವರ್ ಸಂಬಂಧಿ ಕಾಯಿಲೆಗಳಿಗೂ ನುಗ್ಗೆಕಾಯಿ ಒಳ್ಳೆಯದು. ಇದು ಯಕೃತ್ತಿನಲ್ಲಿ ಉರಿಯೂತದ ಸಮಸ್ಯೆಯನ್ನು ಕಡಿಮೆ ಮಾಡಲು ಬಹಳ ಸಹಾಯಕವಾಗಿದೆ.
ಮಧುಮೇಹ – ಅನಾರೋಗ್ಯಕರ ಜೀವನಶೈಲಿಯಿಂದಾಗಿ ಮಧುಮೇಹವು ಈಗ ಬಹಳ ಸಾಮಾನ್ಯವಾದ ಕಾಯಿಲೆಯಾಗಿದೆ. ಆ ನಿಟ್ಟಿನಲ್ಲಿ ನುಗ್ಗೆಕಾಯಿ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಪೋಷಕಾಂಶಗಳು ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ರಕ್ತದೊತ್ತಡ: ಅಧಿಕ ರಕ್ತದೊತ್ತಡ ಹೊಂದಿರುವುದು ದೊಡ್ಡ ಸಮಸ್ಯೆ. ರಕ್ತದೊತ್ತಡ ನಿರಂತರವಾಗಿ ಅಧಿಕವಾದರೆ ಅದು ಹೃದಯಾಘಾತ ಮತ್ತು ಮೆದುಳಿನ ಸ್ಟ್ರೋಕ್ ಗೆ ಕಾರಣವಾಗಬಹುದು. ಹಾಗಾಗಿ ರಕ್ತದೊತ್ತಡದ ಮಟ್ಟವನ್ನು ಯಾವಾಗಲೂ ನಿಯಂತ್ರಣದಲ್ಲಿಟ್ಟುಕೊಳ್ಳಲು ನುಗ್ಗೆಕಾಯಿ ಸಹಾಯಕಾರಿ. ಇದರಲ್ಲಿನ ಅಂಶಗಳು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಸಂಧಿವಾತ: ರುಮಟಾಯ್ಡ್ ಸಂಧಿವಾತ, ಮೂಳೆಗಳಿಗೆ ಸಂಬಂಧಿಸಿದ ರೋಗವನ್ನು ಬಹಳ ಗಂಭೀರವೆಂದು ಪರಿಗಣಿಸಲಾಗುತ್ತದೆ. ಈ ರೋಗ ಬಂದರೆ ಸಾಕಷ್ಟು ನೋವು ಇರುತ್ತದೆ. ನುಗ್ಗೆಕಾಯಿ ತಿನ್ನೋದು ಸಂಧಿವಾತಕ್ಕೆ ರಾಮಬಾಣವೆಂದು ಪರಿಗಣಿಸಲಾಗಿದೆ. ಇದು ಸಂಧಿವಾತ ಸಂಭವಿಸುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಸೂಚನೆ: ಮೇಲಿನ ಲೇಖನ ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಯಾವುದೇ ವಿಧಾನ ಅನುಸರಿಸುವ ಮುನ್ನ ವೈದ್ಯರ ಮಾರ್ಗದರ್ಶನ ಪಡೆದು ಮುಂದುವರೆಯಲು ಸಲಹೆ ನೀಡಲಾಗಿದೆ.