ಹುಣಸೂರು: ಜನರ ಬಹುದಿನದ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ತಿಳಿಸಿದರು.
ನಗರದ ಬಸ್ ನಿಲ್ದಾಣದಲ್ಲಿ ಹುಣಸೂರು ಮತ್ತು ಮೈಸೂರು ತೆರಳುವ ನಡುವೆ ಸಿಗುವ ಮೂಕನಹಳ್ಳಿ, ಸೋಮನಹಳ್ಳಿ, ಬನ್ನಿಕುಪ್ಪೆ, ಇನ್ನೂ ಹೂಟಗಳ್ಳಿ ವರೆಗೆ ಸಿಗುವ ಎಲ್ಲಾ ಸ್ಟೇಜಿಗೆ ನಿಲುಗಡೆ ನೀಡುವುದರ ಜತೆಗೆ ಪ್ರಯಾಣಿಕರು ಕೇವಲ 36 ನಿಮಿಷಕ್ಕೆ ಮೈಸೂರು ತಲಪಬಹುದು. ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ನಿಲ್ದಾಣದಲ್ಲಿ ಕ್ಯಾಮರಾ ಕೆಟ್ಟಿರುವುದನ್ನು ಗಮನಿಸಿದ ಶಾಸಕರು ಸರಿಪಡಿಸುವ ಭರವಸೆ ನೀಡಿದರು. ಅದೇರೀತಿ ನಗರದ ಹಲವು ವೃತ್ತಗಳಲ್ಲಿ ಅಳವಡಿಸಿದ್ದ ಜನನ ಕ್ಯಾಮೆರಾಗಳು ನಿರ್ವಹಣೆ ಇಲ್ಲದೆ ನಗರದಲ್ಲಿ ನಡೆಯುವ ಅಪಘಾತಗಳು, ಅಕ್ರಮ ಚಟುವಟುಕೆಗಳ ಪತ್ತೆಗೆ ಅಡಚಣೆ ಬಗ್ಗೆ ಅರಿವಿದ್ದು ಕೂಡಲೆ ಸರಿಪಡಿಸಲು ಕ್ರಮವಹಿಸಲಾಗುವುದು ಎಂದರು.
ನಂತರ ಡಿಪೋ ಮೇನೇಜರ್ ಸುಬ್ರಹ್ಮಣ್ಯ ಮಾತನಾಡಿ, ಬೆಳಿಗ್ಗೆ 8 ಗಂಟೆಗೆ ಮತ್ತು 8.30.ಕ್ಕೆ ಎರಡು ಬಸ್ ಹೊರಡಲಿದ್ದು, 6 ಸಿಂಗಲ್ ಒಟ್ಟು ಎರಡು ಬಸ್ಸಿನಿಂದ ಆರು ಸಿಂಗಲ್ ನಗರ ಸಾರಿಗೆಯಂತೆ ಸಂಚರಿಸಲಿವೆ. ಇದರಿಂದ ಪ್ರಯಾಣಿಕರ ಸಮಸ್ಯ ನೀಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್, ಎಂ.ಎಸ್. ದೇವೇಂದ್ರ, ಡಿಪೋ ಎಟಿಎಸ್ ರಾಜೇಶ್ವರಿ, ಡಿಪೋ ಸಿಬ್ಬಂದಿ ಮೇಲ್ಚಾರಕ ಬಾಲಸುಬ್ರಹ್ಮಣ್ಯಂ, ಎಪಿಎಂಸಿ ಮಾಜಿ ಅಧ್ಯಕ್ಷ ಕಿರಂಗೂರು ಬಸವರಾಜು ಇದ್ದರು.