Thursday, April 3, 2025
Google search engine

Homeರಾಜ್ಯಸುದ್ದಿಜಾಲವ್ಯಕ್ತಿತ್ವದ ಪರಿಪೂರ್ಣತೆ ಪುನೀತ್ ರಾಜಕುಮಾರ್: ಸುರೇಶ್ ಎನ್ ಋಗ್ವೇದಿ

ವ್ಯಕ್ತಿತ್ವದ ಪರಿಪೂರ್ಣತೆ ಪುನೀತ್ ರಾಜಕುಮಾರ್: ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ಕರ್ನಾಟಕದ ಸಾಮಾಜಿಕ ,ಸಾಂಸ್ಕೃತಿಕ ಮತ್ತು ಕನ್ನಡ ಚಿತ್ರರಂಗ ಕ್ಷೇತ್ರಗಳಲ್ಲಿ ಡಾ. ರಾಜಕುಮಾರ್ ಕುಟುಂಬದ ಪ್ರಭಾವ ಅಪಾರವಾಗಿದೆ. ರಾಜ್‌ಕುಮಾರ್ ಒಂದು ತಲೆಮಾರಿನ ಜನರ ಮೇಲೆ ಪ್ರಭಾವ ಬೀರಿದರೆ, ಪುನೀತ್ ರಾಜಕುಮಾರ್ ಅವರು ಪ್ರಸ್ತುತ ಸಮಾಜದಲ್ಲಿ ವಿಶೇಷವಾಗಿ ಯುವ ಶಕ್ತಿಯಲ್ಲಿ ಅಪಾರ ಪ್ರಭಾವ ಬೀರಿ ಸನ್ಮಾರ್ಗದಲ್ಲಿ ನಡೆಯಲು , ವ್ಯಕ್ತಿತ್ವದ ಪರಿಪೂರ್ಣತೆಯನ್ನು ಅರ್ಪಿಸಿ ಹೋಗಿದ್ದಾರೆ ಎಂದು ಸಂಸ್ಕೃತಿ ಚಿಂತಕ ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ನಗರದ ಶಂಕರಪುರ ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆಯಲ್ಲಿ ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ಹಮ್ಮಿಕೊಂಡಿದ್ದ ಸ್ಪೂರ್ತಿ ದಿನ ಹಾಗೂ ಪುನೀತ್ ರಾಜಕುಮಾರ್ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಭಾವ ಕುರಿತು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪುನೀತ್ ಕುಮಾರ್ 50 ವರ್ಷಗಳ ಹುಟ್ಟು ಹಬ್ಬದ ಆಚರಣೆಯಲ್ಲಿ ಇದ್ದೇವೆ. ಆದರೆ ವಿಧಿಯ ಆಟದಲ್ಲಿ ಪುನೀತ್ ರವರನ್ನು ಕಳೆದುಕೊಂಡಿದ್ದರು, ಕೋಟಿ ಕೋಟಿ ಕನ್ನಡಿಗರಲ್ಲಿ ಹಾಗು ವಿಶ್ವದಲ್ಲಿ ಪುನೀತ್ ರಾಜಕುಮಾರ್ ವಿರಾಜಮಾನರಾಗಿ ಇದ್ದಾರೆ. ಪುನೀತ್ ರಾಜಕುಮಾರ್ ದೇಹ ತ್ಯಜಿಸಿದರು , ಅವರ ವ್ಯಕ್ತಿತ್ವ, ನಡವಳಿಕೆ ಪ್ರಭಾವ ಪರಿಣಾಮಕಾರಿಯಾಗಿದೆ. ಇಂದಿಗೂ ಅಪ್ಪುವಿನ ವ್ಯಕ್ತಿತ್ವ, ಜೀವನ ಕೊಡುಗೆಗಳ ಪ್ರಭಾವ ಪ್ರತಿನಿತ್ಯ ಹೆಚ್ಚಾಗುತ್ತಿದೆ. ಪುನೀತ್ ರಂತೆ ಸಾಮಾಜಿಕ ಕ್ಷೇತ್ರಗಳಲ್ಲಿ ಸಹಾಯ ಮಾಡುವ ಪ್ರೇರಣೆ ಯುವಕರಲ್ಲಿ ಉಂಟಾಗಿದೆ. ಪುನೀತ್ ರವರ ಸಾಮಾಜಿಕ ಕಳಕಳಿ ಸಾಂಸ್ಕೃತಿಕ ಚಿಂತನೆ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಹಿರಿಯರಲ್ಲಿ ಅವರು ನೀಡುತ್ತಿದ್ದ ಗೌರವ ,ಸಮಾಜಕ್ಕೆ ನೀಡಿದ ಪ್ರೀತಿ,ವಿಶ್ವಾಸ ,ಕರುಣೆ, ಸಹಕಾರ, ಸ್ನೇಹ, ನಡವಳಿಕೆ ,ಸರಳತೆ , ಪ್ರತಿಭೆಗಳನ್ನು ಬೆಳೆಸುವ, ಪ್ರೋತ್ಸಾಹಿಸುವ, ಅವಕಾಶ ನೀಡುವ ಗುಣ, ಅವರ ನಗು ವಿಶೇಷವಾಗಿ ಮಕ್ಕಳಿಂದ ಹಿಡಿದು ಹಿರಿಯರ ತನಕ ಪ್ರಭಾವ ಬೀರಿದೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯದಲ್ಲಿ ಪುನೀತ್ ರಾಜಕುಮಾರ್ ಅವರ ಕೊಡುಗೆ ಅಪಾರವಾಗಿದೆ . ಮಾನವ ಇಂದು ಪರಸ್ಪರ ಸೌಹಾರ್ದ ವಾತಾವರಣದಲ್ಲಿ ನೆಮ್ಮದಿಯ ಬದುಕಿನಲ್ಲಿ ಮತ್ತು ಆತ್ಮವಿಶ್ವಾಸ ಸ್ಪೂರ್ತಿ ನೆಮ್ಮದಿಯಿಂದ ಸಾಗಲು ಪುನೀತ್ ರವರು ಕಾರಣವಾಗಿದ್ದಾರೆ. ಪುನೀತ್ ರವರ ಸೇವಾ ಗುಣ, ಪ್ರಕೃತಿ ಮತ್ತು ಪ್ರಾಣಿ ಪಕ್ಷಿಗಳ ಸಂರಕ್ಷಣೆ ,ಚಿತ್ರರಂಗದ ರಕ್ಷಣೆ, ಚಾಮರಾಜನಗರವನ್ನು ಸದಾ ಗೌರವಿಸಿ ಚೆಲುವ ಚಾಮರಾಜನಗರದ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಪುನೀತ್ ರವರನ್ನು ನಾಡು ಎಂದು ಮರೆಯದು.

ವಿಶ್ವದ ಶ್ರೇಷ್ಠ ನಟರಾಗಿ ಮಾನವಿಯ ಮೌಲ್ಯದ ಚಿಂತಕರಾಗಿ ಸೇವೆ ಸಲ್ಲಿಸಿರುವುದು ಮರೆಯಲಾಗದು. ಪ್ರತಿ ವ್ಯಕ್ತಿಯು ತನ್ನ ಬದುಕಿನ ಕ್ಷಣಗಳಲ್ಲಿ ಸಮಾಜಕ್ಕೆ ,ಸಂಸ್ಕೃತಿ, ಪರಂಪರೆಗೆ ಕುಟುಂಬಕ್ಕೆ ಗೌರವವನ್ನು ನೀಡಿ ಬೆಳವಣಿಗೆಯನ್ನು ಸಾಧಿಸಿ ಸದಾ ಕಾಲ ಜೀವಂತಿಕೆಯ ಕಾರ್ಯವನ್ನು ಮಾಡುವುದು ಬಹು ಮುಖ್ಯವಾದದ್ದು. ವ್ಯಕ್ತಿಗತ ಬದಲಾವಣೆಯ ಮೂಲಕ ಕುಟುಂಬ ಹಾಗೂ ಸಮಾಜವನ್ನು ಸಂರಕ್ಷಿಸಲು ಪುನೀತ್ ರಾಜಕುಮಾರ್ ಅವರು ಸರ್ವರಿಗೂ ಪ್ರೇರಣಾದಾಯಕ ಹಾಗೂ ಆದರ್ಶವಾಗಿದ್ದಾರೆ ಎಂದು ಋಗ್ವೇದಿ ತಿಳಿಸಿದರು.

ಕಾರ್ಯಕ್ರಮವನ್ನು ಹಿರಿಯ ನಾಗರೀಕರಾದ ವೆಂಕಟೇಶ್ ರವರು ಉದ್ಘಾಟಿಸಿ ಶತಮಾನಗಳಿಂದಲೂ ರಾಜ ಕುಟುಂಬ ಕನ್ನಡ ನಾಡಿನಲ್ಲಿ ಪ್ರಭಾವ ಬೀರಿದ್ದಾರೆ. ಪುನೀತ್ ರಾಜಕುಮಾರ್ ಅವರ ದಿನವನ್ನು ನಾಡಿನಲ್ಲಿ ಸ್ಫೂರ್ತಿಯ ದಿನವನ್ನಾಗಿ ಆಚರಿಸುತ್ತಿರುವುದು ಸಮಾಜಕ್ಕೆ ಮತ್ತಷ್ಟು ಸ್ಪೂರ್ತಿ ತುಂಬಲು ಸಹಾಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುರುಗೇಶ್, ರವಿ, ಮನೋಜ್, ವಿಶ್ವಾಸ್, ಕಾರ್ತಿಕ್, ಮಾದಪ್ಪ , ಮಹಾದೇವ ಶೆಟ್ಟಿ, ಲೋಕೇಶ್, ನಾಯಕ ಇದ್ದರು.

RELATED ARTICLES
- Advertisment -
Google search engine

Most Popular