ವರದಿ: ರವಿಚಂದ್ರ ಬೂದಿತಿಟ್ಟು
ಪಿರಿಯಾಪಟ್ಟಣ: ತಾಲೂಕಿನ ಚೌತಿ ಗ್ರಾಮ ಪಂಚಾಯತಿಯ ಹಬಟೂರು ಗ್ರಾಮಕ್ಕೆ ದೆಹಲಿಯ ಎಂ ಜೆ ಎಂ ಎಂ, ಡಿ ಡಿ ಡಬ್ಲ್ಯೂ ಎಸ್ ಉಪ ಕಾರ್ಯದರ್ಶಿ ಡಾಕ್ಟರ್ ಅಂಕಿತ ಚಕ್ರವರ್ತಿ, ಡಿ ಡಿ ಡಬ್ಲ್ಯೂ ಎಸ್ ಹಿರಿಯ ಮೂಲ ಸೌಕರ್ಯ ವಿಶೇಷ ಅಧಿಕಾರಿ ಎಸ್ ಪರಮೇಶ್ವರನ್ ಭೇಟಿ ಮಾಡಿದ್ದಾರೆ.
ಹಬಟ್ಟೂರು ಗ್ರಾಮದಲ್ಲಿ 24 ಗಂಟೆ ನಿರಂತರ ನೀರು ಸರಬರಾಜು ಮಾಡುತ್ತಿರುವ ಬಗೆ,ಜಲ ಜೀವನ ಮಿಷನ್ ಕುಡಿಯುವ ನೀರಿನ ಪರೀಕ್ಷೆ, ಶಾಲಾ ಶೌಚಾಲಯ, ಗ್ರಾಮಗಳ ಕೊರತೆ, ಕಸದ ವಿಲೇವಾರಿ ವಾಹನ ಬಳಕೆ, ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವ ಸಮಯ ತಿಳಿಸುವ ಆಪ್ ಕುರಿತು ಪರಿಶೀಲಿಸಿ ಅವರು ಬರುವ ದಿನಗಳಲ್ಲಿ ಪ್ರತಿ ಗ್ರಾಮಗಳಲ್ಲಿ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳು ಸಕ್ರಿಯವಾಗಿ ಗ್ರಾಮದ ನೀರು ಮತ್ತು ನೈರ್ಮಲ್ಯದ ಕುರಿತು ಮತ್ತು ನೀರಿನ ಗುಣಮಟ್ಟ ಪರೀಕ್ಷೆಯ ಕುರಿತು, ಹೆಚ್ಚಿನ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಮೂಲಕ ಪ್ರತಿ ತಿಂಗಳು ಸಭೆಗಳನ್ನು ಆಯೋಜಿಸಲು ಸೂಚನೆ ನೀಡಿದ್ದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀಯುತ ಸುನಿಲ್ ಕುಮಾರ್ ಡಿ ಬಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಶ್ರೀ ರಂಜಿತ್, ಇಇಐ ಶ್ರೀ ಕೃಷ್ಣಮೂರ್ತಿ, ಚೇತನ್, ನಿರಂಜನ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಗೌರಮ್ಮ, ಉಪಾಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮೋಹನ್ ಕುಮಾರ್ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯ ಅಧ್ಯಕ್ಷರಾದ ಶ್ರೀ ರಘು ಹೆಚ್ ಆರ್ ಸದಸ್ಯರಾದ ಶ್ರೀ ರವಿಚಂದ್ರ ಬೂದಿತಿಟ್ಟು, ಶಾರದ, ಶೃತಿ ಸಿ ಕೆ, ಶೃತಿ, ಗ್ರಾಮದ ಮುಖಂಡರಾದ ಕೃಷ್ಣೇಗೌಡ ಶಿವರಾಜು, ರಮೇಶ, ರಾಮಚಂದ್ರ, ಸಿಬ್ಬಂದಿಗಳಾದ ನಾಗೇಶ್, ಲಕ್ಷ್ಮಿ, ನಂದೀಶ್, ನಂದೀಶ್, ನಂದೀಶ್, ಪ್ರಶಾಂತ್, ದೀಪು ಹಾಗೂ ಗ್ರಾಮಸ್ಥದ್ದರು.