ಪಿರಿಯಾಪಟ್ಟಣ: ಪಟ್ಟಣದ ಗುರು ಮೆಡಿಕಲ್ಸ್ ಮತ್ತು ಶ್ರೀ ಕ್ಲಿನಿಕ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಅಂಗವಾಗಿ ಕೊಡಗು ವೈದ್ಯಕೀಯ ಕಾಲೇಜಿನ ಸಹ ಪ್ರಾಧ್ಯಾಪಕರು ಹಾಗೂ ಖ್ಯಾತ ಮೂಳೆ ರೋಗ ತಜ್ಞರಾದ ಡಾ. ಜೀವನ್ ಕೆ ರವಿ ಅವರ ನೇತೃತ್ವದಲ್ಲಿ ಉಚಿತ ಮೂಳೆ ರೋಗ ಆರೋಗ್ಯ ತಪಾಸಣಾ ಶಿಬಿರ ಜರುಗಿತು.
ಕೆಪಿಸಿಸಿ ಸದಸ್ಯರಾದ ನಿತಿನ್ ವೆಂಕಟೇಶ್ ರವರು ರಾಷ್ಟ್ರಧ್ವಜಕ್ಕೆ ಪುಷ್ಪರ್ಚನೆ ಮಾಡಿ ಜ್ಯೋತಿ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಹಲವು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಒತ್ತು ನೀಡುತ್ತಿರುವ ಗುರು ಮೆಡಿಕಲ್ ಹಾಗೂ ಶ್ರೀ ಕ್ಲಿನಿಕ್ ಕಾರ್ಯ ಶ್ಲಾಘನೀಯ ಎಂದರು.
ಹಲವು ವರ್ಷಗಳಿಂದ ತಾಲೂಕಿನಲ್ಲಿ ಉತ್ತಮ ಸೇವೆ ನೀಡುತ್ತಾ ಕರೋನ ಸಂದರ್ಭ ಉಚಿತವಾಗಿ ಸಾರ್ವಜನಿಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸುವ ಜತೆಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದ್ದರು, ಪರಿಸರ ಸಂರಕ್ಷಣೆಗಾಗಿ ಉಚಿತವಾಗಿ ಗಿಡಗಳನ್ನು ವಿತರಿಸುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದು ಒಂದೇ ಸೂರಿನಡಿ ತಜ್ಞ ವೈದ್ಯರಿಂದ ಹಲವು ವೈದ್ಯಕೀಯ ಚಿಕಿತ್ಸೆಗಳನ್ನು ನೀಡುತ್ತಾ ಬಂದಿರುವುದು ಸಂತಸದ ವಿಷಯ ಎಂದರು.

ಉದ್ಯಮಿ ರಘುಪತಿ ಅವರು ಮಾತನಾಡಿ, ನಗರ ಪ್ರದೇಶಗಳಂತೆ ಗ್ರಾಮಾಂತರ ಪ್ರದೇಶಗಳಲ್ಲಿಯೂ ತುರ್ತು ವೈದ್ಯಕೀಯ ಸೇವೆ ನೀಡುವ ಸಂಬಂಧ ಶ್ರೀ ಕ್ಲಿನಿಕ್ ಹಾಗೂ ಗುರು ಮೆಡಿಕಲ್ ವತಿಯಿಂದ ತಾಲೂಕಿನಾದ್ಯಂತ ಹಲವು ಶಾಖೆಗಳು ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ತಜ್ಞ ವೈದ್ಯರಿಂದ ಗುಣಮಟ್ಟದ ಚಿಕಿತ್ಸೆ ನೀಡುತ್ತಿದೆ ಎಂದರು.
ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಟಿ.ಡಿ ನಾಗಣ್ಣ ಅವರು ಮಾತನಾಡಿ ಡಾ.ವೈ.ವಿ ಪ್ರಕಾಶ್ ರವರು ಕಳೆದ 18 ವರ್ಷಗಳಿಂದ ನಮ್ಮ ತಾಲೂಕಿಗೆ ಸಾಕಷ್ಟು ಸೇವೆ ನೀಡಿ ಸಾರ್ವಜನಿಕ ವಲಯದಲ್ಲಿ ಉತ್ತಮ ಹೆಸರು ಪಡೆದಿದ್ದು ಮುಂದಿನ ದಿನಗಳಲ್ಲಿಯೂ ಮತ್ತಷ್ಟು ಖ್ಯಾತಿ ಗಳಿಸಲಿ ಎಂದರು.
ಡಾ.ಜೀವನ್ ಕೆ ರವಿ ರವರು ಮಾತನಾಡಿ, ಆರೋಗ್ಯಕ್ಕೆ ಸಂಬಂಧಿಸಿದಂತೆ ಶ್ರೀ ಕ್ಲಿನಿಕ್ ಹಾಗೂ ಗುರು ಮೆಡಿಕಲ್ಸ್ ವತಿಯಿಂದ ಉಚಿತವಾಗಿ ಈಗಾಗಲೇ ಹಲವು ಶಿಬಿರಗಳನ್ನು ನಡೆಸಿದ್ದು ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ನಿಗ ವಹಿಸಬೇಕು ಎಂದು ತಿಳಿಸಿ ಸ್ವಾತಂತ್ರ್ಯ ದಿನ ಮಹತ್ವ ಮತ್ತು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಶ್ರೀ ಕ್ಲಿನಿಕ್ ಮುಖ್ಯಸ್ಥರಾದ ಡಾ.ವೈ.ವಿ ಪ್ರಕಾಶ್, ಸುರೇಶ್, ಮೋಹನ್ ಮಾಸ್ಟರ್, ಸಿದ್ದೇಶ್, ಮನು ಹಾಗು ಶ್ರೀ ಕ್ಲಿನಿಕ್ ಸಿಬ್ಬಂದಿ ಹಾಜರಿದ್ದರು.