ನವದೆಹಲಿ : ರಾಜ್ಯದ ಒಂಬತ್ತು ಪ್ರಮುಖ ರಸ್ತೆಗಳನ್ನು ರಾಜ್ಯ ಲೋಕೋಪಯೋಗಿ ಇಲಾಖೆಯಿಂದ (PWD) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಹಸ್ತಾಂತರ ಪಡೆಯಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅನುಮತಿಸಿದೆ.
ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಕೆಲವು ರಾಷ್ಟ್ರೀಯ ಹೆದ್ದಾರಿಗಳನ್ನು NHAI ಹಸ್ತಾಂತರ ಪಡೆಯುತ್ತಿದ್ದು, ಈ ನಿರ್ಧಾರದಿಂದ ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದವರೆಗಿನ ಪ್ರದೇಶಗಳಿಗೆ ಲಾಭವಾಗಲಿದೆ. ರಸ್ತೆಗಳ ನಿರ್ವಹಣೆಯನ್ನು ಏಕರೂಪಗೊಳಿಸಿ, ಅಭಿವೃದ್ಧಿ ಯೋಜನೆಗಳನ್ನು ವೇಗಗೊಳಿಸುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಬಳ್ಳಾರಿ-ಜೇವರ್ಗಿ: 265 ಕಿ.ಮೀ
ಶಿವಮೊಗ್ಗ-ಹೊನ್ನಾವರ: 160 ಕಿ.ಮೀ
ಹುಬ್ಬಳ್ಳಿ-ವಿಜಯಪುರ: 199 ಕಿ.ಮೀ
ಹುಮ್ನಬಾದ್‌ನಿಂದ ಕರ್ನಾಟಕ-ಮಹಾರಾಷ್ಟ್ರ ಗಡಿ: 83 ಕಿ.ಮೀ
ಬೆರಂಬಾಡಿಯಿಂದ ಕೇರಳ ಗಡಿ: 20 ಕಿ.ಮೀ
ಹೊಸಕೋಟೆಯಿಂದ ತಮಿಳುನಾಡು ಗಡಿ ಮತ್ತು ಹೊಸಕೋಟೆಯಿಂದ ಹೊಸೂರು: ಒಟ್ಟು 60 ಕಿ.ಮೀ
ಗುಂಡ್ಯದಿಂದ ಹೆಗ್ಗದ್ದೆ: 25 ಕಿ.ಮೀ ರಸ್ತೆಯನ್ನ NHAI ಉಸ್ತುವಾರಿ ಪಡೆಯಲಿದೆ.
ಇದಲ್ಲದೆ, ಎನ್‌ಹೆಚ್-275 ಹೆದ್ದಾರಿಯ ಸಂಪೂರ್ಣ 342 ಕಿ.ಮೀ ಭಾಗವನ್ನು ಮೇಲ್ದರ್ಜೆಗೆ ಏರಿಸಲು ಒಪ್ಪಿಗೆ ನೀಡಲಾಗಿದೆ. ಇದು ಮೈಸೂರು-ಬೆಂಗಳೂರು-ಮಂಗಳೂರು ಮಾರ್ಗದಂತಹ ಪ್ರಮುಖ ಕಾರಿಡಾರ್‌ಗಳನ್ನು ಒಳಗೊಂಡಿದ್ದು, ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಿದೆ.
ನಾಲ್ಕು ಲೇನ್ ಮತ್ತು ಅದಕ್ಕಿಂತ ಮೇಲಿನ ಮಾರ್ಗಗಳನ್ನು ಕೇಂದ್ರ ಏಜೆನ್ಸಿಗಳಿಗೆ ಹಸ್ತಾಂತರಿಸುವುದು, ಎರಡು ಲೇನ್ ಮಾರ್ಗಗಳನ್ನು ರಾಜ್ಯ ಪಿಡಬ್ಲ್ಯೂಡಿಗೆ ನೀಡುವುದು ಮತ್ತು ಅಭಿವೃದ್ಧಿ ಪೂರ್ಣಗೊಂಡ ನಂತರ ಮರುಹಸ್ತಾಂತರ ಮಾಡುವುದು ಇದರ ಮುಖ್ಯ ತತ್ವವಾಗಿದೆ.
ರಾಜ್ಯ ಸರ್ಕಾರದ ಅಧಿಕಾರಿಗಳ ಪ್ರಕಾರ, ಈ ಹಸ್ತಾಂತರದಿಂದ ರಸ್ತೆಗಳ ನಿರ್ವಹಣೆಗೆ ಹೆಚ್ಚಿನ ಹಣಕಾಸು ಬರಲಿದ್ದು, ಟೋಲ್ ವ್ಯವಸ್ಥೆ, ಸುರಕ್ಷತಾ ಕ್ರಮಗಳು ಮತ್ತು ವೇಗದ ಅಭಿವೃದ್ಧಿ ಸಾಧ್ಯವಾಗಲಿದೆ. ಉತ್ತರ ಕರ್ನಾಟಕದ ಕೈಗಾರಿಕಾ ಬೆಳವಣಿಗೆಗೆ ಮತ್ತು ದಕ್ಷಿಣದ ಪ್ರವಾಸೋದ್ಯಮಕ್ಕೆ ಇದು ವರದಾನವಾಗಲಿದೆ.



