ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ರಾಜ್ಯ ಸರ್ಕಾರ ಅನುದಾನಿತ ಮತ್ರು ಶಿಕ್ಷಣ ಸಂಸ್ಥೆಗಳ ನೌಕರರಿಗೆ ಎನ್.ಪಿ.ಎಸ್ ರದ್ದುಗೊಳಿಸಿ ಓ.ಪಿ.ಎಸ್ ಜಾರಿಗೊಳಿಸುವ ಭರವಸೆಯನ್ನು ನೀಡಿದ್ದು ಕೂಡಲೇ ಅದನ್ನು ಈಡೇರಿಸಬೇಕೆಂದು ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದವರು ತಾಲೂಕು ಕಚೇರಿಯಲ್ಲಿ ಶಿರೇಸ್ತೆದಾರ್ ಯೊಗಾಚಾರ್ ಅವರಿಗೆ ಮನವಿ ಪತ್ರ ನೀಡಿದರು.
ಸಂಘದ ಅಧ್ಯಕ್ಷ ಭರತ್ ಮಾತನಾಡಿ ಶೀಘ್ರದಲ್ಲಿಯೆ ನಿಶ್ಚಿತ ಪಿಂಚಣಿ (ಓ.ಪಿ.ಎಸ್) ನ್ನು ಸರ್ಕಾರ ಜಾರಿಗೊಳೊಳಿಸಬೇಕು. ಓ.ಪಿ.ಎಸ್ ಜಾರಿ ವಿಳಂಬವಾದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನೀಡುತ್ತಿರುವಂತೆ ಎನ್.ಪಿ.ಎಸ್ ಅನ್ನು ಯಥಾವತ್ತಾಗಿ ಜಾರಿಮಾಡಿ ನೇಮಕಾತಿ, ಪ್ರಾಧಿಕಾರದ ವಂತಿಗೆಯನ್ನು ಆಡಳಿತ ಮಂಡಳಿಗಳ ಬದಲಾಗಿ ಭರಿಸಲು ಕ್ರಮ ವಹಿಸಬೇಕು ಎಂದರು.
ಕರ್ನಾಟಕ ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ (ವೇತನ, ನಿವೃತ್ತಿ ವೇತನ ಮತ್ತು ಇತರೆ ಸೌಲಭ್ಯಗಳ ನಿಯಂತ್ರಣ) ವಿಧೇಯಕ 2014 ಕ್ಕೆ ತಿದ್ದುಪಡಿ ತಂದು ಭವಿಷ್ಯಾವರ್ತಿಯಾಗಿ ಜಾರಿಗೆ ಬರುವಂತೆ ಕ್ರಮ ವಹಿಸ ಬೇಕೆಂದು ಮನವಿ ಮಾಡಿದರುದರಲ್ಲದೆ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ದಶಕಗಳಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರ ಕ್ರಮ ಕೈಗೊಳ್ಳು ಬೇಕು ಎಂದು ಒತ್ತಾಯ ಮಾಡಿದರು.
ಅನುದಾನಿತ ನೌಕರರಿಗೂ ಕೂಡ ಸರ್ಕಾರಿ ನೌಕರರಂತೆ ಜ್ಯೋತಿ ಸಂಜಿವಿನಿ ಯೋಜನೆಯನ್ನು ಯಥಾವತ್ತಾಗಿ ಜಾರಿಗೊಳಿಸಿ ಸರ್ಕಾರಿ ಶಾಲಾ ಕಾಲೇಜುಗಳು ಮತ್ತು ಅನುದಾನಿತ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮತ್ತು ನೌಕರರ ನಡುವೆ ತಾರತಮ್ಯ ನೀತಿ ಮಾಡಬಾರದೆಂದ ಅವರು ಈ ಪ್ರಮುಖ ಬೇಡಿಕೆಗಳನ್ನು ಮಾನವೀಯ ಕಳಕಳಿ ಹಿನ್ನೆಲೆಯಲ್ಲಿ ಈಡೇರಿಸಲು ಶೀಘ್ರ ಕ್ರಮ ವಹಿಸಬೇಬುದು ನಮ್ಮೆಲ್ಲರ ಒಕ್ಕೊಲಿನ ಒತ್ತಾಯವಾಗಿದೆ ಎಂದು ತಿಳಿಸಿದರು.
ಈ ಹಿಂದೆ ಸಹಾನುಭೂತಿಯಿಂದ ಅನುದಾನಿತ ಶಾಲೆ ಕಾಲೇಜುಗಳ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆ (ಓಪಿಎಸ್) ಜಾರಿ ತರುವುದಾಗಿ ಪಕ್ಷದ ಚುನವಾಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು ಆಸರೆ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆದರಯ ವಿಳಂಬ ನೀತಿ ಅನುಸರಿಸಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಾವಿರಾರು ನೌಕರರನ್ನು ಮತ್ತೆ ಹೋರಾಟಕ್ಕಿಳಿಯುವಂತೆ ಮಾಡುತ್ತಿದ್ದು ಶೀಘ್ರ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯ ಮಾಡಿದರು.
ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಅಶೋಕ್, ಜಿಲ್ಲಾ ಸಂಚಾಲಕ ಜ್ಯೋತಿಕುಮಾರ್, ತಾಲೂಕು ಕಾರ್ಯದರ್ಶಿಗಳಾದ ಟಿ.ಸತೀಶ್, ಮನೋಹರ್, ಸಂಘಟನಾ ಕಾರ್ಯದರ್ಶಿ ಸುಧೀರ್ ಆರಾಧ್ಯ, ಅನುದಾನಿತ ಶಾಲೆಯ ಶಿಕ್ಷಕರಾದ ಕೆ.ಸಿ.ಪ್ರಕಾಶ್. ಚಕ್ರಪಾಣಿ, ಜಯಶ್ರೀ, ಪುಷ್ಪಲತಾ, ರೇವಣ್ಣ,ಕಾವೇರಿ, ದಿವಾಕರ್, ಚೆಲುವರಾಜ್, ಚಿಕ್ಕೇಗೌಡ, ಪ್ರಕಾಶ್ ಶೆಟ್ಟಿ, ಸುರೇಶ್ ಸೇರಿದಂತೆ ಇನ್ನಿತರರು ಇದ್ದರು.